9/11 ಪ್ರೇರಿತ ವಿಮಾನ ಅಪಹರಣ ತಡೆಗಟ್ಟಿದ ಫ್ರಾನ್ಸ್, ಶಂಕಿತನ ಬಂಧನ

ನ್ಯೂಯಾರ್ಕ್ ನಗರದ ವಿಶ್ವ ವಾಣಿಜ್ಯ ಕೇಂದ್ರದ ಮೇಲೆ 9/11 ರ ದಾಳಿಯಿಂದ ಪ್ರೇರಿತವಾದ ಭಯೋತ್ಪಾದಕ ಸಂಚುವನ್ನು ಫ್ರೆಂಚ್ ಗುಪ್ತಚರ ಅಧಿಕಾರಿಗಳು ವಿಫಲಗೊಳಿಸಿದ್ದಾರೆ ಎಂದು ಫ್ರಾನ್ಸ್ ಆಂತರಿಕ ಸಚಿವಾಲಯ ಗುರುವಾರ ತಿಳಿಸಿದೆ. 

Last Updated : Oct 18, 2019, 02:59 PM IST
9/11 ಪ್ರೇರಿತ ವಿಮಾನ ಅಪಹರಣ ತಡೆಗಟ್ಟಿದ ಫ್ರಾನ್ಸ್, ಶಂಕಿತನ ಬಂಧನ   title=
ಸಾಂದರ್ಭಿಕ ಚಿತ್ರ

ನವದೆಹಲಿ: ನ್ಯೂಯಾರ್ಕ್ ನಗರದ ವಿಶ್ವ ವಾಣಿಜ್ಯ ಕೇಂದ್ರದ ಮೇಲೆ 9/11 ರ ದಾಳಿಯಿಂದ ಪ್ರೇರಿತವಾದ ಭಯೋತ್ಪಾದಕ ಸಂಚುವನ್ನು ಫ್ರೆಂಚ್ ಗುಪ್ತಚರ ಅಧಿಕಾರಿಗಳು ವಿಫಲಗೊಳಿಸಿದ್ದಾರೆ ಎಂದು ಫ್ರಾನ್ಸ್ ಆಂತರಿಕ ಸಚಿವಾಲಯ ಗುರುವಾರ ತಿಳಿಸಿದೆ. 

ಈಗ ಈ ವಿಚಾರವನ್ನು ಆಂತರಿಕ ಸಚಿವ ಕ್ರಿಸ್ಟೋಫೆ ಕ್ಯಾಸ್ಟನರ್ ಫ್ರೆಂಚ್ ಟಿವಿ ಚಾನೆಲ್‌ಗೆ ತಿಳಿಸಿದ್ದು, ಕಳೆದ ಸೆಪ್ಟೆಂಬರ್ 2001 ರಲ್ಲಿ ನ್ಯೂಯಾರ್ಕ್‌ನ ವಿಶ್ವ ವಾಣಿಜ್ಯ ಕೇಂದ್ರದ ಮೇಲೆ ನಡೆದ ವಿಮಾನ ದಾಳಿಯಿಂದ ಪ್ರೇರಿತರಾದ ಶಂಕಿತನನ್ನು ಗುಪ್ತಚರ ಅಧಿಕಾರಿಗಳು ಬಂಧಿಸಿದ್ದಾರೆ. ಯುರೋಪಿನಲ್ಲಿ ವಿಮಾನವನ್ನು ಅಪಹರಿಸಲು ಅವರು ಯೋಜಿಸಿದ್ದಾರೆ ಎಂದು ಸಚಿವರು ಹೇಳಿದರು. ಆದರೆ ಈ ಬಗ್ಗೆ ಸಚಿವರು ಹೆಚ್ಚಿನ ವಿವರಗಳನ್ನು ನೀಡಿಲ್ಲ ಎಂದು ರಷ್ಯಾ ಟುಡೆ ವರದಿ ಮಾಡಿದೆ.

ಪೊಲೀಸ್ ಮೂಲಗಳನ್ನು ಉಲ್ಲೇಖಿಸಿ, ಫ್ರೆಂಚ್ ಮಾಧ್ಯಮವು ಶಂಕಿತ ವ್ಯಕ್ತಿ 30 ವರ್ಷದೊಳಗಿನವನು ಮತ್ತು ಮಧ್ಯ ಪ್ಯಾರಿಸ್‌ನ ಪಶ್ಚಿಮಕ್ಕೆ ಇರುವ ಹಾಟ್ಸ್-ಡಿ-ಸೀನ್ ವಿಭಾಗದಲ್ಲಿ ವಾಸಿಸುತ್ತಿದ್ದನೆಂದು ವರದಿ ಮಾಡಿದೆ. ವರದಿಗಳ ಪ್ರಕಾರ, ಫ್ರಾನ್ಸ್ ಹೆಚ್ಚು ಕಣ್ಗಾವಲಿನಲ್ಲಿ ಇದ್ದುದರಿಂದ, ಮತ್ತೊಂದು ಯುರೋಪ್ ದೇಶದಲ್ಲಿ ದಾಳಿ ನಡೆಸಲು ಅವರು ಯೋಚಿಸುತ್ತಿದ್ದರು ಎಂದು ವರದಿಯಾಗಿದೆ. 2013 ರಿಂದ 60 ಭಯೋತ್ಪಾದಕ ದಾಳಿಯನ್ನು ಅಧಿಕಾರಿಗಳು ವಿಫಲಗೊಳಿಸಿದ್ದಾರೆ ಎಂದು ಫ್ರೆಂಚ್ ಸಚಿವರು ಹೇಳಿದರು.

ಸೆಪ್ಟೆಂಬರ್ 11, 2001 ರಂದು, ಅಲ್ ಖೈದಾ ಕಾರ್ಯಕರ್ತರು ಅಪಹರಿಸಿದ ವಿಮಾನಗಳು ಅಪಘಾತಕ್ಕೀಡಾದ ನಂತರ ನ್ಯೂಯಾರ್ಕ್ನ ವಿಶ್ವ ವಾಣಿಜ್ಯ ಕೇಂದ್ರದ ಎರಡೂ ಗೋಪುರಗಳು ಕುಸಿದು 2,753 ಜನರು ಮೃತಪಟ್ಟಿದ್ದರು. ಇದು ಯುಎಸ್ ಕಂಡಂತಹ ಅತ್ಯಂತ ಭೀಕರ ಭಯೋತ್ಪಾದಕ ದಾಳಿಯಾಗಿತ್ತು. 

Trending News