ರಾಜೀನಾಮೆಗೆ ನಿರಾಕರಿಸಿದರೆ ಪಾಕಿಸ್ತಾನದಲ್ಲಿ ಅವ್ಯವಸ್ಥೆ ವಾತಾವರಣ: ಮೌಲಾನಾ ಫಜ್ಲೂರ್ ರಹಮಾನ್

ಇಮ್ರಾನ್ ಖಾನ್ ಸರ್ಕಾರಕ್ಕೆ ಜನಾದೆಶವಿಲ್ಲ. ಇಮ್ರಾನ್ ಸರ್ಕಾರದಲ್ಲಿ ಭ್ರಷ್ಟಾಚಾರ ಮನೆ ಮಾಡಿದೆ ಎಂದು ಮೌಲಾನಾ ಫಜ್ಲೂರ್ ರಹಮಾನ್ ವಾಗ್ಧಾಳಿ ನಡೆಸಿದ್ದಾರೆ.

Last Updated : Nov 1, 2019, 07:00 PM IST
ರಾಜೀನಾಮೆಗೆ ನಿರಾಕರಿಸಿದರೆ ಪಾಕಿಸ್ತಾನದಲ್ಲಿ ಅವ್ಯವಸ್ಥೆ ವಾತಾವರಣ: ಮೌಲಾನಾ ಫಜ್ಲೂರ್ ರಹಮಾನ್ title=

ಇಸ್ಲಾಮಾಬಾದ್: ಪಾಕಿಸ್ತಾನ ಪ್ರಧಾನಮಂತ್ರಿ ಇಮ್ರಾನ್ ಖಾನ್ ರಾಜೀನಾಮೆ ನೀಡಲು ನಿರಾಕರಿಸಿದರೆ ದೇಶದಲ್ಲಿ ಅವ್ಯವಸ್ಥೆ ವಾತಾವರಣ ಸೃಷ್ಠಿಯಾಗಲಿದೆ ಎಂದು ಮೌಲಾನಾ ಫಜ್ಲೂರ್ ರಹಮಾನ್ ಎಚ್ಚರಿಸಿದ್ದಾರೆ.

ಜಮೀಯತ್ ಉಲೆಮಾ-ಇ-ಇಸ್ಲಾಂ-ಫಜಲ್ (ಜೆಯುಐ-ಎಫ್) ಮುಖಂಡ ಮೌಲಾನಾ ಫಜ್ಲೂರ್ ರಹಮಾನ್ ನೇತೃತ್ವದ ಪ್ರತಿಪಕ್ಷಗಳ 'ಸ್ವಾತಂತ್ರ್ಯ ಮೆರವಣಿಗೆ' ಇಸ್ಲಾಮಾಬಾದ್ ತಲುಪಿದೆ. ಪ್ರಧಾನಿ ಇಮ್ರಾನ್ ಖಾನ್ ಅವರ ಪಾಕಿಸ್ತಾನ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಸರ್ಕಾರವನ್ನು ವಜಾಗೊಳಿಸುವಂತೆ ಪ್ರತಿಪಕ್ಷಗಳು ಒತ್ತಾಯಿಸುತ್ತಿವೆ ಎಂದು ಡಾನ್ ನ್ಯೂಸ್ ವರದಿ ಮಾಡಿದೆ. ಇಂದು ನೀಡಿದ ವಿಶೇಷ ಸಂದರ್ಶನದಲ್ಲಿ ರಹಮಾನ್, "ನಮ್ಮ ಮುಂದಿನ ತಂತ್ರ ಹೇಗಿರಬೇಕು ಎಂದು ಜನರು ನಿರ್ಧರಿಸುತ್ತಾರೆ" ಎಂದು ಹೇಳಿದರು.

ರಾಜಧಾನಿಯಲ್ಲಿ ಮೆರವಣಿಗೆಯನ್ನು ಮುನ್ನಡೆಸುತ್ತಿರುವ ಮೌಲಾನಾ ಫಜ್ಲೂರ್ ರಹಮಾನ್, ಪಿಟಿಐ ಸರ್ಕಾರಕ್ಕೆ ತಮ್ಮ ಪಕ್ಷ ನೀಡಿದ ಸಮಯ ಮುಗಿದಿದೆ. ಇಮ್ರಾನ್ ಖಾನ್ ಸರ್ಕಾರಕ್ಕೆ ಜನಾದೆಶವಿಲ್ಲ. ಇಮ್ರಾನ್ ಸರ್ಕಾರದಲ್ಲಿ ಭ್ರಷ್ಟಾಚಾರ ಮನೆ ಮಾಡಿದೆ ಎಂದು ವಾಗ್ಧಾಳಿ ನಡೆಸಿದರು.

ಅವರ ಸ್ವಾತಂತ್ರ್ಯ ಮೆರವಣಿಗೆಯ ನಂತರ ಪಿಟಿಐ ಸರ್ಕಾರ ರಾಜೀನಾಮೆ ನೀಡಲು ನಿರಾಕರಿಸಿದರೆ, ದೇಶದಲ್ಲಿ ಅವ್ಯವಸ್ಥೆಯ ವಾತಾವರಣ ಉಂಟಾಗುತ್ತದೆ. "ನಾವು ಇಮ್ರಾನ್ ಖಾನ್ ಅವರಿಂದ ರಾಜೀನಾಮೆ ಪಡೆಯುವವರೆಗೂ ಹೋರಾಡುತ್ತೇವೆ" ಎಚ್ಚರಿಸಿದರು.

ಡಾನ್ ನ್ಯೂಸ್ ವರದಿಯ ಪ್ರಕಾರ, ಪಾಕಿಸ್ತಾನ ಪೀಪಲ್ಸ್ ಪಾರ್ಟಿ (ಪಿಪಿಪಿ) ಅಧ್ಯಕ್ಷ ಬಿಲಾವಾಲ್ ಭುಟ್ಟೋ ಜರ್ದಾರಿ ಗುರುವಾರ ಬೆಳಿಗ್ಗೆ ಪ್ರತಿಭಟನಾಕಾರರನ್ನು ಭೇಟಿಯಾಗಿ ಅವರನ್ನು ಉದ್ದೇಶಿಸಿ ಮಾತನಾಡಿದರು. ತಮ್ಮ ಸರ್ಕಾರ ಬೀಳುವ ಸಮಯ ಬಂದಿದೆ ಎಂದು ಪ್ರಧಾನಿ ಇಮ್ರಾನ್ ಖಾನ್ ಅವರಿಗೆ ಸಂದೇಶ ನೀಡಲು ಎಲ್ಲಾ ವಿರೋಧ ಪಕ್ಷಗಳು ಒಂದೇ ವೇದಿಕೆಯಲ್ಲಿ ಬಂದಿವೆ ಎಂದು ಅವರು ಹೇಳಿದರು.

Trending News