ಕಾಶ್ಮೀರ ವಿಚಾರ: ಯುಎನ್‌ನಲ್ಲಿ ಕಾಂಗ್ರೆಸ್ ಹೆಸರು ಪ್ರಸ್ತಾಪಿಸಿ ಮತ್ತೆ ಕುತಂತ್ರ ತೋರಿದ ಇಮ್ರಾನ್ ಖಾನ್

ಪಾಕಿಸ್ತಾನ: ಕಾಶ್ಮೀರ ವಿಷಯದಲ್ಲಿ ಇಮ್ರಾನ್ ಖಾನ್ ಮತ್ತೆ ಕಾಂಗ್ರೆಸ್ ಹೆಸರನ್ನು ತೆಗೆದುಕೊಂಡು ಕಾಶ್ಮೀರದ ಪರಿಸ್ಥಿತಿಗಳನ್ನು ಕಾಂಗ್ರೆಸ್ ಪಕ್ಷವೂ ವಿರೋಧಿಸುತ್ತಿದೆ ಎಂದು ಹೇಳಿದರು.

Updated: Sep 25, 2019 , 11:37 AM IST
ಕಾಶ್ಮೀರ ವಿಚಾರ: ಯುಎನ್‌ನಲ್ಲಿ ಕಾಂಗ್ರೆಸ್ ಹೆಸರು ಪ್ರಸ್ತಾಪಿಸಿ ಮತ್ತೆ ಕುತಂತ್ರ ತೋರಿದ ಇಮ್ರಾನ್ ಖಾನ್

ನವದೆಹಲಿ: ಕಾಶ್ಮೀರ ವಿಷಯದಲ್ಲಿ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಮತ್ತೆ ಕುತಂತ್ರ ತೋರಿಸಿದ್ದಾರೆ. ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮತ್ತೆ ಕಾಶ್ಮೀರ ವಿಷಯದ ಬಗ್ಗೆ ಕಾಂಗ್ರೆಸ್ ಹೆಸರನ್ನು ಪ್ರಸ್ತಾಪಿಸಿದ್ದಾರೆ. ಕಾಶ್ಮೀರದ ಪರಿಸ್ಥಿತಿಗಳನ್ನು ಕಾಂಗ್ರೆಸ್ ಪಕ್ಷವೂ ವಿರೋಧಿಸುತ್ತಿದೆ. ಪಾಕಿಸ್ತಾನ ತನ್ನಿಂದ ಸಾಧ್ಯವಾದಷ್ಟು ಪ್ರಯತ್ನಿಸುತ್ತದೆ ಎಂದು ಅವರು ಹೇಳಿದರು.

ಯುಎನ್ ಪ್ರಧಾನ ಕಚೇರಿಯಲ್ಲಿ ಮಾತನಾಡುತ್ತಾ, ಕಾಂಗ್ರೆಸ್ ಪಕ್ಷವೂ ಕಾಶ್ಮೀರದ ಪರಿಸ್ಥಿತಿಗಳನ್ನು ವಿರೋಧಿಸುತ್ತಿದೆ ಎನ್ನುವ ಮೂಲಕ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಮತ್ತೆ ಕಾಶ್ಮೀರ ವಿಷಯದಲ್ಲಿ ಕಾಂಗ್ರೆಸ್ ಹೆಸರನ್ನು ಪ್ರಸ್ತಾಪಿಸಿದರು.

ವಾಸ್ತವವಾಗಿ, ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪಾಲ್ಗೊಳ್ಳಲು ಆಗಮಿಸಿದ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿಯಾದ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಈ ಸಂದರ್ಭದಲ್ಲಿ ಪತ್ರಕರ್ತರು ಪಾಕಿಸ್ತಾನ, ಕಾಶ್ಮೀರ, ಭಯೋತ್ಪಾದನೆಗೆ ಸಂಬಂಧಿಸಿದಂತೆ ಕೇಳಿದ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದರು. ಈ ಮಧ್ಯೆ, ಜೀ ನ್ಯೂಸ್‌ನ ವರದಿಗಾರ ಅದಿತಿ ತ್ಯಾಗಿ ಪದೇ ಪದೇ ಇಮ್ರಾನ್ ಖಾನ್ ಅವರಿಗೆ ಪ್ರಶ್ನೆಗಳನ್ನು ಕೇಳುತ್ತಿದ್ದರೂ ಅದನ್ನು ಕಡೆಗಣಿಸಲಾಯಿತು. ಕೊನೆಗೆ, ಅದಿತಿ ಸರ್, ಭಾರತೀಯ ಮಾಧ್ಯಮದಿಂದಲೂ ಒಂದು ಪ್ರಶ್ನೆಯನ್ನು ತೆಗೆದುಕೊಳ್ಳಬೇಕೆಂದು ವಿನಂತಿಸಿದರು. ಆದರೆ ಅದನ್ನೂ ಕಡೆಗಣಿಸಿದ  ಇಮ್ರಾನ್ ಖಾನ್ ಪತ್ರಿಕಾಗೋಷ್ಠಿಯಿಂದ ಇದ್ದಕ್ಕಿದ್ದಂತೆ ಹೊರನಡೆದರು.

ಮತ್ತೊಂದೆಡೆ, ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಪಾಕಿಸ್ತಾನದೊಂದಿಗೆ ಮಾತನಾಡಲು ಭಾರತಕ್ಕೆ ಯಾವುದೇ ಅಭ್ಯಂತರವಿಲ್ಲ. ಆದರೆ ಇದಕ್ಕಾಗಿ ಅದು ಇಸ್ಲಾಮಾಬಾದ್‌ನಲ್ಲಿ ಕೆಲವು ದೃಢವಾದ ಕ್ರಮಗಳನ್ನು ತೆಗೆದುಕೊಳ್ಳುವ ಅವಶ್ಯಕತೆ ಇದೇ ಎಂದು ಹೇಳಿದರು. ಭಾರತವು ವಿಶ್ವದಲ್ಲೇ ಎರಡನೇ ಅತಿ ದೊಡ್ಡ ಮುಸ್ಲಿಮರನ್ನು ಹೊಂದಿದೆ ಮತ್ತು ಜಾಗತಿಕ ಭಯೋತ್ಪಾದಕ ಚಟುವಟಿಕೆಗಳ ಅಥವಾ ಮೂಲಭೂತವಾದದ ಹಾದಿಯನ್ನು ಹಿಡಿಯುವವರಲ್ಲಿ ಭಾರತೀಯ ಮುಸ್ಲಿಮರ ಸಂಖ್ಯೆ 'ಸಾಕಷ್ಟು ಕಡಿಮೆ' ಎಂದು ಮೋದಿ ಟ್ರಂಪ್‌ಗೆ ತಿಳಿಸಿದರು. ಈ ಹಿಂದೆ ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದನೆ ಕುರಿತು ಟ್ರಂಪ್ ಭಾರತವನ್ನು ಬೆಂಬಲಿಸಿದ್ದರು ಮತ್ತು ಮೋದಿ ಈ ಪ್ರಕರಣವನ್ನು ನಿಭಾಯಿಸಲಿದ್ದಾರೆ ಎಂದು ಹೇಳಿದ್ದಾರೆ.