ಭಾರತದ ವಿದೇಶಿ ನೀತಿ ಸಮರ್ಥ, ಸದೃಢ, ಸಂವೇದನಾಶೀಲ - ಚೀನಾ

ಇದೇ ಮೊದಲ ಬಾರಿಗೆ ಚೀನಾದ ಸಿಐಐಎಸ್ ಜರ್ನಲ್ನಲ್ಲಿನ ಭಾರತದ ಕುರಿತು ಲೇಖನವೊಂದು ಪ್ರಕಟವಾಗಿದೆ ಎಂದು ಚೀನಾ ಚಿಂತಕರು ಅಭಿಪ್ರಾಯಿಸಿದ್ದಾರೆ.   

Last Updated : Jan 31, 2018, 05:05 PM IST
ಭಾರತದ ವಿದೇಶಿ ನೀತಿ ಸಮರ್ಥ, ಸದೃಢ, ಸಂವೇದನಾಶೀಲ - ಚೀನಾ title=

ಬೀಜಿಂಗ್‌ : ಭಾರತದ ವಿದೇಶಿ ನೀತಿಯು ಪ್ರಧಾನಿ ನರೇಂದ್ರ ಮೋದಿ ಸರ್ಕಾರದಡಿಯಲ್ಲಿ ಅತ್ಯಂತ ಸಹಜ, ಸದೃಢ, ಸಂವೇದನಾಶೀಲವಾಗಿದ್ದು ಯಾವುದೇ ರೀತಿಯ ಅಪಾಯವನ್ನು ಎದುರಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಚೀನಾದ ಸರ್ಕಾರದ ಉನ್ನತ ಚಿಂತಕರೊಬ್ಬರು ಹೇಳಿದ್ದಾರೆ. 

ಈ ಕುರಿತು ಹೇಳಿರುವ ಚೀನಾದ ವಿದೇಶ ಸಚಿವಾಲಯದೊಂದಿಗೆ ಸಂಯೋಜಿತವಾಗಿರುವ ಇನ್ಸ್ಟಿಟ್ಯುಟ್ ಆಫ್ ಇಂಟರ್ ನ್ಯಾಷನಲ್ ಸ್ಟಡೀಸ್ ಉಪಾಧ್ಯಕ್ಷ ರಾಂಗ್ ಯಿಂಗ್, ಕಳೆದ ಮೂರು ವರ್ಷಗಳಿಂದ ಭಾರತದ ರಾಜತಾಂತ್ರಿಕತೆಯು ಸದೃಢ ಮತ್ತು ಸಮರ್ಥನೀಯವಾಗಿದ್ದು, ವಿಶಿಷ್ಟವಾದ "ಮೋದಿ ಸಿದ್ಧಾಂತ" ವನ್ನು ರೂಪಿಸಿದೆ. ಹೊಸ ಜಾಗತಿಕ ಸನ್ನಿವೇಶದಲ್ಲಿ ಭಾರತವು ಒಂದು ಮಹಾನ್‌ ಶಕ್ತಿಶಾಲಿ ದೇಶವಾಗಿ ಮೂಡಿ ಬರುವಲ್ಲಿ ಮೋದಿ ಅವರ ವಿಶಿಷ್ಟ ಮತ್ತು ಅನನ್ಯವಾದ ತಂತ್ರಗಾರಿಕೆ ಬಹುದೊಡ್ಡ ಪಾತ್ರವನ್ನು ವಹಿಸಿದೆ ಎಂದಿದ್ದಾರೆ. 

ಇದೇ ಮೊದಲ ಬಾರಿಗೆ ಚೀನಾದ ಸಿಐಐಎಸ್ ಜರ್ನಲ್ನಲ್ಲಿನ ಭಾರತದ ಕುರಿತು ಲೇಖನವೊಂದು ಪ್ರಕಟವಾಗಿದೆ ಎಂದು ಚೀನಾ ಚಿಂತಕರು ಅಭಿಪ್ರಾಯಿಸಿದ್ದಾರೆ. 

ಭಾರತದಲ್ಲಿ ರಾಜತಾಂತ್ರಿಕರಾಗಿ ಸೇವೆ ಸಲ್ಲಿಸಿದ ರೋಂಗ್ ಚೀನಾ, ದಕ್ಷಿಣ ಮತ್ತು ಆಗ್ನೇಯ ದೇಶಗಳೊಂದಿಗೆ ಭಾರತದ ಸಂಬಂಧಗಳನ್ನು ವಿಮರ್ಶಾತ್ಮಕವಾಗಿ ನೋಡಿದ್ದಾರೆ. ಏಷ್ಯಾ, ಅಮೆರಿಕ ಮತ್ತು ಜಪಾನ್ಗಳೊಂದಿಗೆ ಭಾರತದ ನಿಕಟ ಸಂಬಂಧಗಳು, ಪರಸ್ಪರ ಲಾಭಗಳನ್ನು ನೀಡುವ ಸಂದರ್ಭದಲ್ಲಿ ಭಾರತೀಯ ವಿದೇಶಾಂಗ ನೀತಿಯು ಹೆಚ್ಚು ಸಮರ್ಥನೀಯವಾಗಿದೆ ಎಂದು ಅವರು ಸಿಐಐಎಸ್‌ ನಿಯತಕಾಲಿಕದಲ್ಲಿ ಲೇಖನ ಬರೆದಿದ್ದಾರೆ. 

ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ಭಾರತ ಮತ್ತು ಚೀನಾ ಎರಡೂ ಪಾಲುದಾರರು ಮತ್ತು ಸ್ಪರ್ಧಿಗಳಾಗಿದ್ದು, ಇದರಿಂದ ಸಹಕಾರ ಮತ್ತು ಸ್ಪರ್ಧೆಯ ಸಹಭಾಗಿತ್ವವು ರೂಢಿಯಾಗುತ್ತದೆ. ಹಾಗಾಗಿ ಭಾರತದ ಅಸ್ಮಿತೆಯನ್ನು ಜಗತ್ತಿಗೇ ಸಾರುವ ರೀತಿಯಲ್ಲಿ ಇರುವುದು ಗಮನಾರ್ಹವಾಗಿದೆ ಎಂದು ರೋಂಗ್‌ ಯಿಂಗ್‌ ಹೇಳಿದ್ದಾರೆ.

Trending News