First Time In History: 1 ಗಂಟೆ 25 ನಿಮಿಷ ಅಮೆರಿಕದ ಅಧ್ಯಕ್ಷೆಯಾಗಿದ್ದ ಕಮಲಾ ಹ್ಯಾರಿಸ್

ಸ್ವತಃ ಅಮೆರಿಕ ಅಧ್ಯಕ್ಷ ಜೋ ಬಿಡೆನ್(Joe Biden) ಅವರೇ ತಮ್ಮ ಅಧಿಕಾರವನ್ನು ಕಮಲಾ ಹ್ಯಾರಿಸ್ ಗೆ ಹಸ್ತಾಂತರಿಸಿದ್ದರು.

Written by - Zee Kannada News Desk | Last Updated : Nov 20, 2021, 11:35 AM IST
  • ಭಾರತ ಮೂಲದ ಕಮಲಾ ಹ್ಯಾರಿಸ್ ಅವರಿಂದ ಮತ್ತೊಂದು ಇತಿಹಾಸ ಸೃಷ್ಟಿ
  • 1 ಗಂಟೆ 25 ನಿಮಿಷಗಳ ಕಾಲ ಅಮೆರಿಕ ಅಧ್ಯಕ್ಷ ಸ್ಥಾನ ಅಲಂಕರಿಸಿದ್ದ ಕಮಲಾ
  • ಕೊಲೊನೋಸ್ಕೋಪಿ ಪರೀಕ್ಷೆ ವೇಳೆ ಜೋ ಬಿಡೆನ್ ಗೆ ಅರಿವಳಿಕೆ ಔಷಧಿ ನೀಡಲಾಗಿತ್ತು
First Time In History: 1 ಗಂಟೆ 25 ನಿಮಿಷ ಅಮೆರಿಕದ ಅಧ್ಯಕ್ಷೆಯಾಗಿದ್ದ ಕಮಲಾ ಹ್ಯಾರಿಸ್ title=
ಭಾರತ ಮೂಲದ ಕಮಲಾ ಹ್ಯಾರಿಸ್

ವಾಷಿಂಗ್ಟನ್: ಭಾರತ ಮೂಲದ ಕಮಲಾ ಹ್ಯಾರಿಸ್(Kamala Harris) ಅವರು ಅಮೆರಿಕದ ಅಧ್ಯಕ್ಷೆ(US President)ಯಾಗಿ ಅಧಿಕಾರ ಚಲಾಯಿಸುವ ಮೂಲ ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ಸುಮಾರು 1 ಗಂಟೆ 25 ನಿಮಿಷಗಳ ಕಾಲ ಅಧ್ಯಕ್ಷೀಯ ಅಧಿಕಾರ ಚಲಾಯಿಸುವ ಮೂಲಕ ಅಮೆರಿಕದ ಮೊದಲ ಮಹಿಳಾ ಅಧ್ಯಕ್ಷೆ ಎನ್ನುವ ಹೆಗ್ಗಳಿಕೆಗೆ ಕಮಲಾ ಪಾತ್ರರಾಗಿದ್ದಾರೆ. ಇದು ಅಮೆರಿಕದ ಇತಿಹಾಸದಲ್ಲಿಯೇ ಮೊದಲು.

ಸ್ವತಃ ಅಮೆರಿಕ ಅಧ್ಯಕ್ಷ ಜೋ ಬಿಡೆನ್(Joe Biden) ಅವರೇ ತಮ್ಮ ಅಧಿಕಾರವನ್ನು ಕಮಲಾರಿಗೆ ಹಸ್ತಾಂತರಿಸಿದ್ದರು. ಅಧಿಕಾರದ ತಾತ್ಕಾಲಿಕ ಹಸ್ತಾಂತರ ಘೋಷಿಸುವ ಅಧಿಕೃತ ಪತ್ರಗಳನ್ನು ಬೆಳಗ್ಗೆ 10:10ಕ್ಕೆ ಕಳುಹಿಸಲಾಗಿದೆ. ಬಳಿಕ ಬೆಳಗ್ಗೆ 11.35ಕ್ಕೆ ಅವರು ಕೆಲಸಕ್ಕೆ ಮರಳಿದ್ದಾರೆ. ಈ ವೇಳೆ ಬಿಡೆನ್ ಅವರಿಗೆ ಅರಿವಳಿಕೆ(Anesthetic) ಔಷಧಿ ನೀಡಲಾಗಿತ್ತು ಎಂದು ಶ್ವೇತಭವನ(White House) ಅಮೆರಿಕ ಕಾಂಗ್ರೆಸ್‌ಗೆ ತಿಳಿಸಿದೆ.

ಇದನ್ನೂ ಓದಿ: 'China ಒಂದು ದಿನ ಆಕಸ್ಮಿಕ ಪರಮಾಣು ದಾಳಿ ನಡೆಸಬಹುದು', ಹೀಗಂತ US ಮಿಲಿಟರಿ ಉನ್ನತಾಧಿಕಾರಿ ಹೇಳಿದ್ಯಾಕೆ?

ಅಮೆರಿಕದ ಇತಿಹಾಸ(US History)ದಲ್ಲಿಯೇ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ ಅತ್ಯಂತ ಹಿರಿಯ ವ್ಯಕ್ತಿ ಬಿಡೆನ್(Joe Biden) ತಮ್ಮ 79ನೇ ಹುಟ್ಟುಹಬ್ಬ(ನ.20)ದ ಮುನ್ನಾದಿನವಾದ ಶುಕ್ರವಾರದ ಆರಂಭದಲ್ಲಿ ವಾಷಿಂಗ್ಟನ್‌ನ ಹೊರಗಿನ ವಾಲ್ಟರ್ ರೀಡ್ ವೈದ್ಯಕೀಯ ಕೇಂದ್ರಕ್ಕೆ ತೆರಳಿದ್ದರು. ವಾರ್ಷಿಕ ತಪಾಸಣೆ (Routine Annual Physical) ಕಾರಣ ಬಿಡೆನ್ ಆರೋಗ್ಯ ತಪಾಸಣೆ ನಡೆಸಬೇಕಿತ್ತು ಎಂದು ಶ್ವೇತಭವನ ಪ್ರಕಟಣೆಯಲ್ಲಿ ತಿಳಿಸಿದೆ.

ಕೊಲೊನೋಸ್ಕೋಪಿ(Colonoscopy) ಪರೀಕ್ಷೆ ಸಮಯದಲ್ಲಿ ಬಿಡೆನ್ ಅವರಿಗೆ ಅರಿವಳಿಕೆ ಔಷಧಿ  ನೀಡಲಾಗಿತ್ತು. ಹೀಗಾಗಿ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್(Kamala Harris) ಅಧ್ಯಕ್ಷೀಯ ಸ್ಥಾನದ ಅಧಿಕಾರವನ್ನು ವಹಿಸಿಕೊಳ್ಳುತ್ತಾರೆ. ಬಿಡೆನ್ ಅವರು ಕಮಲಾರಿಗೆ ಅಲ್ಪಾವಧಿಗೆ ತಮ್ಮ ಅಧಿಕಾರವನ್ನು ಹಸ್ತಾಂತರಿಸಿ ಆರೋಗ್ಯ ತಪಾಸಣೆಗೆ ತೆರಳಿದ್ದರು ಎಂದು ವರದಿಯಾಗಿದೆ.

ಇದನ್ನೂ ಓದಿ: China: ಚೀನಾದಲ್ಲಿ ಖ್ಯಾತ ಸೆಲೆಬ್ರಿಟಿಗಳು ನಿಗೂಢ ಕಣ್ಮರೆ, ಸುಳಿವೇ ಸಿಗುತ್ತಿಲ್ಲ..!

ತಮಗೆ ಸಿಕ್ಕ ಅಲ್ಪ ಅವಧಿಯ ಅಧಿಕಾರವನ್ನು ಕಮಲಾ ಅವರು ವೆಸ್ಟ್ ವಿಂಗ್‌(West Wing in White House)ನಲ್ಲಿರುವ ಅವರ ಕಚೇರಿಯಿಂದಲೇ ಕಾರ್ಯನಿರ್ವಹಿಸುವ ಮೂಲಕ ಚಲಾಯಿಸಿದರು ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಜೆನ್ ಪ್ಸಾಕಿ ಮಾಹಿತಿ ನೀಡಿದ್ದಾರೆ. 57 ವರ್ಷದ ಕಮಲಾ ಅಮೆರಿಕದ ಉಪಾಧ್ಯಕ್ಷ ಸ್ಥಾನ ಅಲಂಕರಿಸಿದ ಮೊದಲ ಮಹಿಳೆಯಾಗಿ ಹೊಸ ಇತಿಹಾಸ ಸೃಷ್ಟಿಸಿದ್ದರು.

ಈ ಹಿಂದೆ 2002 ಹಾಗೂ 2007ರಲ್ಲಿ ಅಮೆರಿಕ ಅಧ್ಯಕ್ಷರಾಗಿದ್ದ ಜಾರ್ಜ್ ಡಬ್ಲ್ಯು ಬುಶ್(George W.Bush) ಕೂಡ ಕೊಲನೋಸ್ಕೋಪಿ ತಪಾಸಣೆಗೆ ಒಳಗಾಗಿದ್ದರು. ಈ ವೇಳೆ ಅಧಿಕಾರವನ್ನು ಉಪಾಧ್ಯಕ್ಷರಿಗೆ ಹಸ್ತಾಂತರಿಸಿದ್ದರು. ಇದೀಗ ಬಿಡೆನ್ ಕೂಡ ಉಪಾಧ್ಯಕ್ಷೆಗೆ ಅಧಿಕಾರ ಹಸ್ತಾಂತರಿಸಿ ತಪಾಸಣೆಗೆ ಒಳಗಾಗಿದ್ದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News