ಯುಎಸ್ ಸುಪ್ರೀಂಕೋರ್ಟ್‌ನ ಮೊದಲ ಕಪ್ಪು ಮಹಿಳಾ ನ್ಯಾಯಾಧೀಶರಾಗಿ ಕೇತಾಂಜಿ ಬ್ರೌನ್ ಜಾಕ್ಸನ್ ಆಯ್ಕೆ

ಅಮೆರಿಕದ ಸುಪ್ರೀಂಕೋರ್ಟ್‌ನ ಮೊದಲ ಕಪ್ಪು ಮಹಿಳೆ ನ್ಯಾಯಾಧೀಶರಾಗಿ ಕೇತಾಂಜಿ ಬ್ರೌನ್ ಜಾಕ್ಸನ್ ನೇಮಕವಾಗಿದ್ದಾರೆ.

Last Updated : Jul 1, 2022, 04:25 PM IST
  • ಈ ಘೋಷಣೆಯೊಂದಿಗೆ, ಬಿಡೆನ್ ಅವರು ತಮ್ಮ ಚುನಾವಣಾ ವೇಳೆ ಕಪ್ಪು ಮಹಿಳೆಯನ್ನು ದೇಶದ ಸುಪ್ರೀಂ ಕೋರ್ಟ್‌ಗೆ ಕಳುಹಿಸುವ ಭರವಸೆಯನ್ನು ಈಡೇರಿಸಿದ್ದಾರೆ.
ಯುಎಸ್ ಸುಪ್ರೀಂಕೋರ್ಟ್‌ನ ಮೊದಲ ಕಪ್ಪು ಮಹಿಳಾ ನ್ಯಾಯಾಧೀಶರಾಗಿ ಕೇತಾಂಜಿ ಬ್ರೌನ್ ಜಾಕ್ಸನ್ ಆಯ್ಕೆ title=

ನ್ಯೂಯಾರ್ಕ್: ಅಮೆರಿಕದ ಸುಪ್ರೀಂಕೋರ್ಟ್‌ನ ಮೊದಲ ಕಪ್ಪು ಮಹಿಳೆ ನ್ಯಾಯಾಧೀಶರಾಗಿ ಕೇತಾಂಜಿ ಬ್ರೌನ್ ಜಾಕ್ಸನ್ ನೇಮಕವಾಗಿದ್ದಾರೆ.

ಆ ಮೂಲಕ ಅಮೆರಿಕದ ಇತಿಹಾಸದಲ್ಲಿ ಕಪ್ಪು ಮಹಿಳೆಯೊಬ್ಬರು ದೇಶದ ಅತ್ಯುನ್ನತ ನ್ಯಾಯಾಲಯದ ನ್ಯಾಯಾಧೀಶರಾದ ಹೆಗ್ಗಳಿಕೆಯನ್ನು ಹೊಂದಿದ್ದಾರೆ.ಇದೇ ಮೊದಲು ಏಪ್ರಿಲ್‌ನಲ್ಲಿ, ಸೆನೆಟ್ ನ್ಯಾಯಾಧೀಶೆ ಕೇತಾಂಜಿ ಬ್ರೌನ್ ಜಾಕ್ಸನ್ ಅವರ ಪರವಾಗಿ 53 ರಲ್ಲಿ 47 ಮತಗಳು ಬಂದಿದ್ದವು. 

ಇದನ್ನೂ ಓದಿ : ಇದನ್ನೂ ಓದಿ : Nupur Sharma Row : ನೂಪುರ್ ಶರ್ಮಾ ತರಾಟೆಗೆ ತೆಗೆದುಕೊಂಡ ಸುಪ್ರೀಂ ಕೋರ್ಟ್!

ಈ ವರ್ಷದ ಫೆಬ್ರವರಿಯಲ್ಲಿ, ಯುಎಸ್ ಅಧ್ಯಕ್ಷ ಜೋ ಬಿಡನ್ ಅವರು 51 ವರ್ಷದ ಕೇತಾಂಜಿ ಬ್ರೌನ್ ಜಾಕ್ಸನ್ ಅವರನ್ನು ಸುಪ್ರೀಂ ಕೋರ್ಟ್‌ಗೆ ನಾಮನಿರ್ದೇಶನ ಮಾಡಿದರು.ಈ ಘೋಷಣೆಯೊಂದಿಗೆ, ಬಿಡೆನ್ ಅವರು ತಮ್ಮ ಚುನಾವಣಾ ವೇಳೆ ಕಪ್ಪು ಮಹಿಳೆಯನ್ನು ದೇಶದ ಸುಪ್ರೀಂ ಕೋರ್ಟ್‌ಗೆ ಕಳುಹಿಸುವ ಭರವಸೆಯನ್ನು ಈಡೇರಿಸಿದ್ದಾರೆ.

ಇದನ್ನೂ ಓದಿ : Udaipur Murder Case : ISIS ನ ವಿಡಿಯೋ ನೋಡಿ ಕನ್ಹಯ್ಯಾ ಲಾಲ್ ಕೊಂದ ಪಾಪಿಗಳು!

ಸೆನೆಟ್‌ನಿಂದ ನ್ಯಾಯಾಧೀಶೆ ಜಾಕ್ಸನ್‌ರ ಆಯ್ಕೆಯು ಯುನೈಟೆಡ್ ಸ್ಟೇಟ್ಸ್‌ಗೆ ಐತಿಹಾಸಿಕ ಕ್ಷಣವಾಗಿದೆ ಎಂದು ಯುಎಸ್ ಅಧ್ಯಕ್ಷ ಜೋ ಬಿಡನ್ ಹೇಳಿದ್ದಾರೆ."ನಾವು ಯುಎಸ್ ಸುಪ್ರೀಂ ಕೋರ್ಟ್ನ ವೈವಿಧ್ಯತೆಯನ್ನು ಪ್ರತಿಬಿಂಬಿಸುವ ಕಡೆಗೆ ಮತ್ತೊಂದು ಹೆಜ್ಜೆ ಇಟ್ಟಿದ್ದೇವೆ.ಈ ಕ್ಷಣವನ್ನು ಹಂಚಿಕೊಳ್ಳಲು ನನಗೆ ಸಂತೋಷವಾಗುತ್ತದೆ" ಎಂದು ಅಧ್ಯಕ್ಷ ಬಿಡೆನ್ ಹೇಳಿದ್ದಾರೆ.

ಯಾರು ಈ ಕೇತಂಜಿ ಬ್ರೌನ್ ಜಾಕ್ಸನ್ ?

ಜಾಕ್ಸನ್ ಈ ಹಿಂದೆ ಫೆಡರಲ್ ಕೋರ್ಟ್ ಆಫ್ ಅಪೀಲ್ಸ್‌ನಲ್ಲಿ ನ್ಯಾಯಾಧೀಶರಾಗಿದ್ದರು. ಅವರು ಫೆಡರಲ್ ನ್ಯಾಯಾಲಯದಲ್ಲಿ ನ್ಯಾಯಾಧೀಶರಾಗಿ ಒಂಬತ್ತು ವರ್ಷಗಳ ಅನುಭವವನ್ನು ಹೊಂದಿದ್ದಾರೆ.ಕೇತಾಂಜಿ ಬ್ರೌನ್ ಜಾಕ್ಸನ್ ಅವರು ಪ್ರತಿಷ್ಠಿತ ಹಾರ್ವರ್ಡ್ ವಿಶ್ವವಿದ್ಯಾಲಯದಿಂದ ಎರಡು ಪದವಿಗಳನ್ನು ಹೊಂದಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

 

 

 

 

 

Trending News