ಇಂದು ಶತಮಾನದ ಸುದೀರ್ಘವಾದ ಚಂದ್ರ ಗ್ರಹಣ: ಈ ಬಗ್ಗೆ ವಿಜ್ಞಾನ ಏನು ಹೇಳುತ್ತೆ ಗೊತ್ತಾ!

ಜುಲೈ 27 ರಂದು, 21 ನೇ ಶತಮಾನದ ಸುದೀರ್ಘ ಚಂದ್ರ ಗ್ರಹಣ ಸಂಭವಿಸಲಿದೆ. 

Last Updated : Jul 27, 2018, 08:15 AM IST
ಇಂದು ಶತಮಾನದ ಸುದೀರ್ಘವಾದ ಚಂದ್ರ ಗ್ರಹಣ: ಈ ಬಗ್ಗೆ ವಿಜ್ಞಾನ ಏನು ಹೇಳುತ್ತೆ ಗೊತ್ತಾ!

ಜುಲೈ 27 ರಂದು, 21 ನೆಯ ಶತಮಾನದ ಸುದೀರ್ಘ ಚಂದ್ರ ಗ್ರಹಣ ಸಂಭವಿಸಲಿದೆ. ಈ ಚಂದ್ರ ಗ್ರಹಣವು ಸುಮಾರು 1 ಗಂಟೆ 45 ನಿಮಿಷಗಳ ಕಾಲ ಇರುತ್ತದೆ. ಈ ಗ್ರಹಣವು ಭಾರತದಾದ್ಯಂತ ಗೋಚರಿಸುತ್ತದೆ ಮತ್ತು ಯಾವುದೇ ಸಾಧನವಿಲ್ಲದೆಯೇ ಅದನ್ನು ಸುಲಭವಾಗಿ ಕಾಣಬಹುದು. ಭಾರತೀಯ ಸಮಯದ ಪ್ರಕಾರ ಪೂರ್ಣ ಚಂದ್ರ ಗ್ರಹಣವು ಜುಲೈ 27 ರಂದು 11.45 ಕ್ಕೆ ಎರಡು-ಎರಡು ಸೆಕೆಂಡುಗಳಲ್ಲಿ ಪ್ರಾರಂಭವಾಗುತ್ತದೆ. ಚಂದ್ರ ಗ್ರಹಣ ಜುಲೈ 28 ರಂದು 3:49 ಕ್ಕೆ ಕೊನೆಗೊಳ್ಳಲಿದೆ. ಈ ಚಂದ್ರ ಗ್ರಹಣದಲ್ಲಿ, ಚಂದ್ರನು ರೆಡ್ ಮೂನ್ ಎಂದು ಕರೆಯಲ್ಪಡುವ ಕೆಂಪು ಬಣ್ಣದಲ್ಲಿ ಗೋಚರಿಸುತ್ತಾನೆ.

ಭಾರತ ಸಹಿತ ಏಷ್ಯಾ, ಆಸ್ಟ್ರೇಲಿಯಾ, ಆಫ್ರಿಕಾ, ಯುರೋಪ್​ನಲ್ಲಿ ಗ್ರಹಣ ಗೋಚರಿಸಲಿದೆ. ನ್ಯೂಜಿಲೆಂಡ್, ಜಪಾನ್, ರಷ್ಯಾ, ಚೀನಾ, ದಕ್ಷಿಣ ಅಮೆರಿಕದಲ್ಲಿ ಭಾಗಶಃ ಗೋಚರಿಸಲಿದೆ. ಗ್ರಹಣಕ್ಕೆ ಸಂಬಂಧಿಸಿದಂತೆ ಭಾರತದಲ್ಲಿ ಅನೇಕ ಧಾರ್ಮಿಕ ನಂಬಿಕೆಗಳು ಪ್ರಚಲಿತವಾಗುತ್ತಿವೆ. ಕೆಲವರ ಪ್ರಕಾರ ಈ ಗ್ರಹಣದಿಂದ ಅನೇಕ ಅಶುಭ ಫಲಗಳು ಉಂಟಾಗಲಿವೆ ಎಂದು ಹೇಳಲಾಗುತ್ತಿದೆ. ಗ್ರಹಣ ಸಮಯದಲ್ಲಿ, ತಿನ್ನುವುದು, ಕುಡಿಯುವುದು, ನಿದ್ದೆ ಮಾಡುವುದು ಮತ್ತು ಮನೆಯಿಂದ ಹೊರಗೆ ಹೋಗುವಂತಹ ಸಾಮಾನ್ಯ ವಿಷಯಗಳನ್ನು ನಿಷೇಧಿಸಲಾಗಿದೆ. ಅದರಲ್ಲೂ ಗರ್ಭಿಣಿ ಮಹಿಳೆಯರಿಗೆ ಈ ನಿಯಮಗಳನ್ನು ಪಾಲಿಸಲು ಸಲಹೆ ನೀಡಲಾಗುತ್ತಿದೆ. ಆದರೆ ವಿಜ್ಞಾನವು ಗ್ರಹಣದ ಬಗ್ಗೆ ತನ್ನದೇ ಆದ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ.

ಸೂರ್ಯ ಮತ್ತು ಭೂಮಿಯ ಸಮಾನಾಂತರ ರೇಖೆಯಲ್ಲಿ ಚಂದ್ರ ಹಾದು ಹೋಗಲಿದೆ. ಭೂಮಿಯು ಚಂದ್ರನ ಮೇಲೆ ಬೀಳುವ ಸೂರ್ಯನ ಬೆಳಕನ್ನು ಮರೆ ಮಾಡುವುದರಿಂದ ಅರೆ ನೆರಳು-ಬೆಳಕಿನ ಆಟದಲ್ಲಿ ಚಂದ್ರ ಕೆಂಪೇರಲಿದ್ದಾನೆ. ಅಂದರೆ, ಚಂದ್ರ ಮತ್ತು ಭೂಮಿಯ ನಡುವಿನ ಅಂತರವು ಜುಲೈ 27 ರಂದು ಅತಿ ಹೆಚ್ಚು ಇರುತ್ತದೆ. ಈ ಚಂದ್ರ ಗ್ರಹಣವು 21 ನೇ ಶತಮಾನದ ಉದ್ದದ ಚಂದ್ರ ಗ್ರಹಣವಾಗಿದೆ. ಒಂದು ಗಂಟೆ ನಲವತ್ತೈದು ನಿಮಿಷಗಳ ಕಾಲ ಸಂಭವಿಸಲಿರುವ ದೀರ್ಘಾವಧಿಯ ಚಂದ್ರಗ್ರಹಣ ಇದಾಗಿದೆ. 

ಗ್ರಹಣ ಸಮಯದಲ್ಲಿ, ಚಂದ್ರ ಕೆಂಪಗೆ ಕಾಣುವುದರ ಹಿಂದಿರುವ ಕಾರಣವೆಂದರೆ ಭೂಮಿಯು ಸೂರ್ಯ ಮತ್ತು ಚಂದ್ರನ ನಡುವೆ ಬಂದಾಗ, ಸೂರ್ಯನ ಕಿರಣ ಮರೆಯಾಗುತ್ತದೆ. ಭೂಮಿಯ ವಾತಾವರಣದಿಂದಾಗಿ, ಬೆಳಕು ಚಂದ್ರನಿಗೆ ತಿರುಗುತ್ತದೆ ಮತ್ತು ಅದಕ್ಕಾಗಿಯೇ ಚಂದ್ರನು ಕೆಂಪು ಬಣ್ಣದಲ್ಲಿ ಗೋಚರಿಸುತ್ತಾನೆ. ಇದನ್ನೇ ಬ್ಲಡ್ ಮೂನ್ ಎಂದು ಕರೆಯಲಾಗುತ್ತದೆ ಎನ್ನುತ್ತಾರೆ ವಿಜ್ಞಾನಿಗಳು.

ಚಂದ್ರ ಗ್ರಹಣವು ಖಗೋಳಶಾಸ್ತ್ರ ಮತ್ತು ಜ್ಯೋತಿಷ್ಯ ಶಾಸ್ತ್ರದ ವಿಶೇಷ ಘಟನೆಯಾಗಿದ್ದರೂ, ಗ್ರಹಣದ ಬಗ್ಗೆ ಅನೇಕ ಪುರಾಣಗಳು ಪ್ರಚಲಿತದಲ್ಲಿವೆ. ಇಂದಿಗೂ ಸಹ, ಜನರ ಮನಸ್ಸಿನಲ್ಲಿ ಗ್ರಹಣದ ಬಗ್ಗೆ ಒಂದು ಭಯವಿದೆ. ಚಂದ್ರ ಗ್ರಹಣವನ್ನು ನೋಡಿದರೆ ಹಾನಿಗೊಳಗಾಗಬಹುದು ಎಂಬ ಆತಂಕವೂ ಕೆಲವರಲ್ಲಿ ಇರುತ್ತದೆ. ಮಿಡ್ ನಾರ್ತ್ ಕೋಸ್ಟ್ ಖಗೋಳವಿಜ್ಞಾನಿ ಡೇವಿಡ್ ರೆನೆಕ್, ಇದೊಂದು ಆಕಾಶದಲ್ಲಿ ಗೋಚರವಾಗುವ ಸುಂದರ ಘಟನೆ. ಯಾರೂ ಸಹ ಅದನ್ನು ನೋಡುವ ಅವಕಾಶವನ್ನು ಕಳೆದುಕೊಳ್ಳಬಾರದು. ಚಂದ್ರ ಗ್ರಹಣವು ಸೂರ್ಯನ ಗ್ರಹಣಕ್ಕಿಂತ ವಿಭಿನ್ನವಾಗಿದೆ ಮತ್ತು ಇದು ಬರಿಗಣ್ಣಿಗೆ ಕಾಣುವಷ್ಟು ಸುರಕ್ಷಿತವಾಗಿದೆ ಎಂದು ಹೇಳುತ್ತಾರೆ. 

ಜ್ಯೋತಿಷ್ಯದ ಪ್ರಕಾರ, ಗ್ರಹಣ ಪರಿಣಾಮವು ಪ್ರತಿ ಜೀವಿಯ ಮೇಲೆ ಬೀಳುತ್ತದೆ, ಆದ್ದರಿಂದ ಈ ಸಮಯದಲ್ಲಿ ಹೆಚ್ಚು ಎಚ್ಚರಿಕೆಯಿಂದ ಇರುವಂತೆ ಸಲಹೆ ನೀಡಲಾಗುತ್ತದೆ.ಇದರೊಂದಿಗೆ, ಈ ಸಮಯದಲ್ಲಿ ದೇವರ ಭಜನೆ, ಕೀರ್ತನ, ಪೂಜೆ ಮಾಡಲು ಸೂಚಿಸಲಾಗುತ್ತದೆ. ಗ್ರಹಣದ ಸಮಯದಲ್ಲಿ ಬಟ್ಟೆ, ನೀರು, ಆಹಾರ ಪದಾರ್ಥಗಳ ಮೇಲೆ ಗರಿಕೆ ಮತ್ತು ತುಳಸಿ ಎಲೆಗಳನ್ನು ಇಡುವಂತೆ ಹಾಗೂ  ಗ್ರಹಣದ ನಂತರ ನೀರನ್ನು ಬದಲಾಯಿಸುವಂತೆ ಹೇಳುತ್ತಾರೆ.

More Stories

Trending News