ಕೋಟ್ಯಾಧಿಪತಿಯಾಗಲು ವ್ಯಕ್ತಿ ಮಾಡುತ್ತಿದ್ದ ಕೆಲಸ ಕಂಡು ಶಾಕ್ ಆದ ಪೊಲೀಸರು!

ವ್ಯಕ್ತಿಯೊಬ್ಬ ಊಟ ಮಾಡಲು ರೆಸ್ಟೋರೆಂಟ್ ಗೆ ಹೋಗಿದ್ದ, ಅವನ ಆಹಾರದಲ್ಲಿ ಸತ್ತ ಇಲಿ ಸಿಕ್ಕಿತು. ಆತ ರೆಸ್ಟೋರೆಂಟ್ ಮಾಲೀಕರಿಗೆ ಈ ವಿಷಯ ತಿಳಿಸಿದನು. ನಂತರ  ಮಾಲೀಕ ತಕ್ಷಣ ವ್ಯಕ್ತಿಯ ಆಹಾರವನ್ನು ಬದಲಾಯಿಸಿದರು.

Last Updated : Apr 20, 2019, 02:24 PM IST
ಕೋಟ್ಯಾಧಿಪತಿಯಾಗಲು ವ್ಯಕ್ತಿ ಮಾಡುತ್ತಿದ್ದ ಕೆಲಸ ಕಂಡು ಶಾಕ್ ಆದ ಪೊಲೀಸರು! title=
ಸಾಂದರ್ಭಿಕ ಚಿತ್ರ

ನವದೆಹಲಿ: ಹಣ ಕಂಡರೆ ಹೆಣ ಕೂಡಾ ಬಾಯಿ ಬಿಡುತ್ತದೆ ಎನ್ನುತ್ತಾರೆ. ಇಂದಿನ ಜಗತ್ತಿನಲ್ಲಿ ಹಣ ಇಲ್ಲದೆ ಏನೂ ಇಲ್ಲ. ಹಣ ಇಲ್ಲದವರನ್ನು ಸಮಾಜ ಕೀಳಾಗಿ ನೋಡುತ್ತದೆ, ಜಗತ್ತಿನಲ್ಲಿ ಕಾಸಿಗಿರುವ ಕಿಮ್ಮತ್ತು ವ್ಯಕ್ತಿಗಿಲ್ಲ ಎಂದು ಹಲವರು ಹೇಳುತ್ತಾರೆ. ಇದರಿಂದಲೇ ಏನೋ ಎಲ್ಲರೂ ಹಣದ ಹಿಂದೆ ಓಡುತ್ತಾರೆ. ಹಣ ಸಂಪಾದನೆಗಾಗಿ ಯಾವ ಕೆಲಸವನ್ನಾದರೂ ಮಾಡುತ್ತಾರೆ. ಆದರೆ ಚೀನಾದಲ್ಲಿ ಒಬ್ಬ ವ್ಯಕ್ತಿಯೊಬ್ಬ ಕೋಟ್ಯಾಧಿಪತಿಯಾಗುವ ಆಸೆಯಿಂದ ಏನ್ ಮಾಡಿದಾನೆ ಗೊತ್ತಾ... ಆತನ ಕೆಲಸಕ್ಕೆ ಪೊಲೀಸರೇ ಶಾಕ್ ಆಗಿದ್ದಾರೆ.

ವಾಸ್ತವವಾಗಿ, ಸ್ವಲ್ಪ ಸಮಯದ ಹಿಂದೆ ಚೀನಾದಲ್ಲಿ ವ್ಯಕ್ತಿಯೊಬ್ಬ ಊಟ ಮಾಡಲು ರೆಸ್ಟೋರೆಂಟ್ ಗೆ ಹೋಗಿದ್ದಾಗ ಆತನ ಊಟದಲ್ಲಿ ಇಲಿ ಬಿದ್ದಿದ್ದ ಬಗ್ಗೆ ಸುದ್ದಿಯೊಂದು ಕೇಳಿಬಂದಿತ್ತು. ವ್ಯಕ್ತಿಯೊಬ್ಬ ಊಟ ಮಾಡಲು ರೆಸ್ಟೋರೆಂಟ್ ಗೆ ಹೋಗಿದ್ದ, ಅವನ ಆಹಾರದಲ್ಲಿ ಸತ್ತ ಇಲಿ ಸಿಕ್ಕಿತು. ಆತ ರೆಸ್ಟೋರೆಂಟ್ ಮಾಲೀಕರಿಗೆ ಈ ವಿಷಯ ತಿಳಿಸಿದನು. ನಂತರ  ಮಾಲೀಕ ತಕ್ಷಣ ವ್ಯಕ್ತಿಯ ಆಹಾರವನ್ನು ಬದಲಾಯಿಸಿದರು.

ಹಣದ ಆಮಿಷ ತೋರಿದ ಮಾಲೀಕ:
ಆಹಾರದಲ್ಲಿ ಇಲಿ ಸಿಕ್ಕಿದ್ದ ವ್ಯಕ್ತಿಗೆ ಕೇವಲ ಉಚಿತ ಆಹಾರ ನೀಡಿದ್ದು ಮಾತ್ರವಲ್ಲದೆ, ರೆಸ್ಟೋರೆಂಟ್ ಮಾಲೀಕ ಈ ವಿಷಯವನ್ನು ಹೊರಗೆಲ್ಲೂ ತಿಳಿಸದಂತೆ ಮನವಿ ಮಾಡಿ ಆತನಿಗೆ ಹಣದ ಆಮಿಷ ತೋರಿದ್ದರು. ಮಾಧ್ಯಮ ವರದಿಗಳ ಪ್ರಕಾರ, ರೆಸ್ಟೋರೆಂಟ್ ಮಾಲೀಕ ಅವರಿಗೆ 20 ಸಾವಿರ ಯುವಾನ್ (ಸುಮಾರು 2 ಲಕ್ಷ ರೂ.) ನೀಡಿತು. ಆತ 5 ಮಿಲಿಯನ್ ಯುವಾನ್ (5 ಕೋಟಿ ರೂಪಾಯಿ) ಬೇಡಿಕೆ ಇಟ್ಟನು.

ಪೊಲೀಸರ ಬಳಿ ತಲುಪಿದ ಪ್ರಕರಣ:
 ರೆಸ್ಟೋರೆಂಟ್ ಮಾಲೀಕ ಮತ್ತು ವ್ಯಕ್ತಿಯ ನಡುವೆ ಇತ್ಯರ್ಥಗೊಳ್ಳದ ಈ ಪ್ರಕರಣ ಪೊಲೀಸರ ಬಳಿ ತಲುಪಿತು. ಪೊಲೀಸರು ಪ್ರಕರಣವನ್ನು ತನಿಖೆ ಮಾಡಲು ಪ್ರಾರಂಭಿಸಿದರು. ವ್ಯಕ್ತಿ ಪ್ಲೇಟ್ ನಲ್ಲಿ ಸತ್ತ ಇಲಿಯನ್ನು ತಾನೇ ಹಾಕಿರುವುದು ತನಿಖೆ ವೇಳೆ ಕಂಡು ಬಂದಿತು. ಬಳಿಕ ಪೊಲೀಸರು ವ್ಯಕ್ತಿಯನ್ನು ವಶಕ್ಕೆ ಪಡೆದರು.

ಹಣ ಸಂಪಾದಿಸಲು ಪ್ಲಾನ್:
ಪೊಲೀಸ್ ತನಿಖೆಯಲ್ಲಿ ವ್ಯಕ್ತಿಯು ಹಣ ಸಂಪಾದಿಸಲು ಈ ರೀತಿಯ ಪ್ಲಾನ್ ಮಾಡಿದ್ದ ಎಂಬ ಅಂಶ ಬೆಳಕಿಗೆ ಬಂದಿತು. ವ್ಯಕ್ತಿ ಮೊದಲೂ ಕೂಡ ಹಣ ಸಂಪಾದನೆಗಾಗಿ ಇದೇ ರೀತಿಯ ಹಲವು ಕೆಲಸ ಮಾಡಿದ್ದ ಎಂಬುದನ್ನು ಕೇಳಿ ಪೊಲೀಸರಿಗೆ ಶಾಕ್ ಆಗಿದ್ದಾರೆ.

Trending News