ದಲೈಲಾಮಾ ಜನ್ಮದಿನ ಆಚರಣೆಗೆ ನಿರಾಕರಿಸಿದ ನೇಪಾಳ

ನೇಪಾಳದಲ್ಲಿನ ಟಿಬೆಟ್ ಸಮುದಾಯ ದಲೈಲಾಮಾ ಅವರ ಜನ್ಮ ದಿನಾಚರಣೆ ಆಚರಣೆ ಅವಕಾಶ ನೀಡಬೇಕೆಂದು ಸಲ್ಲಿಸಿದ್ದ ಮನವಿಯನ್ನು ನೇಪಾಳದ ಸರ್ಕಾರ ತಿರಸ್ಕರಿಸಿದೆ ಎಂದು ಭಾನುವಾರ ಸರ್ಕಾರಿ ಅಧಿಕಾರಿಗಳೊಬ್ಬರು ಹೇಳಿದ್ದಾರೆ.

Last Updated : Jul 7, 2019, 05:23 PM IST
ದಲೈಲಾಮಾ ಜನ್ಮದಿನ ಆಚರಣೆಗೆ ನಿರಾಕರಿಸಿದ ನೇಪಾಳ title=
file photo

ನವದೆಹಲಿ: ನೇಪಾಳದಲ್ಲಿನ ಟಿಬೆಟ್ ಸಮುದಾಯ ದಲೈಲಾಮಾ ಅವರ ಜನ್ಮ ದಿನಾಚರಣೆ ಆಚರಣೆ ಅವಕಾಶ ನೀಡಬೇಕೆಂದು ಸಲ್ಲಿಸಿದ್ದ ಮನವಿಯನ್ನು ನೇಪಾಳದ ಸರ್ಕಾರ ತಿರಸ್ಕರಿಸಿದೆ ಎಂದು ಭಾನುವಾರ ಸರ್ಕಾರಿ ಅಧಿಕಾರಿಗಳೊಬ್ಬರು ಹೇಳಿದ್ದಾರೆ.

ಶನಿವಾರದಂದು 84 ನೆ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ಟಿಬೆಟಿಯನ್ ಗುರು ದಲೈಲಾಮಾ ಅವರ ಆಚರಣೆಗೆ ಈಗ ನೇಪಾಳ ದೇಶವು ಭದ್ರತೆಯನ್ನು ಉಲ್ಲೇಖಿಸಿ ಟಿಬೆಟ್ ಸಮುದಾಯದ ಮನವಿಯನ್ನು ತಿರಸ್ಕರಿಸಿದೆ. ದಲೈಲಾಮಾ ಅವರನ್ನು ಪ್ರತ್ಯೇಕತಾವಾದಿ ಎಂದು ಪರಿಗಣಿಸುವ ಚೀನಾ, ಸುಮಾರು 20,000 ಟಿಬೆಟಿಯನ್ನರ ನೆಲೆಯಾಗಿರುವ ನೇಪಾಳದಲ್ಲಿ ರಾಷ್ಟ್ರದಲ್ಲಿ ತನ್ನ ಪ್ರಭಾವವನ್ನು ಹೆಚ್ಚಿಸುತ್ತಿದೆ. ಈ ಹಿನ್ನಲೆಯಲ್ಲಿ ನೇಪಾಳ ಸರ್ಕಾರ ಈ ಜನ್ಮ ದಿನದ ಆಚರಣೆಗೆ ನಿರಾಕರಿಸಿದೆ ಎನ್ನಲಾಗಿದೆ.

ನೇಪಾಳವು ಭಾರತದ ಸ್ವಾಭಾವಿಕ ಮಿತ್ರ ರಾಷ್ಟ್ರ ಎಂದು ಪರಿಗಣಿಸಿದೆ, ಆದರೆ ಈಗ ಚೀನಾ ನೇಪಾಳಕ್ಕೆ ನೆರವು ಮತ್ತು ಮೂಲಸೌಕರ್ಯ ಹೂಡಿಕೆಯನ್ನು ಮಾಡುವುದರ ಮೂಲಕ ಅತಿಕ್ರಮಣ ಮಾಡುತ್ತಿದೆ. ಚೀನಾದ ಆಡಳಿತದ ವಿರುದ್ಧ ವಿಫಲ ದಂಗೆಯ ನಂತರ ದಲೈ ಲಾಮಾ 1959 ರ ಆರಂಭದಲ್ಲಿ ಭಾರತಕ್ಕೆ ಪಲಾಯನ ಮಾಡಿದರು.
 

Trending News