Night Curfew ಉಲ್ಲಂಘನೆ, 3,600 ಜನರಿಗೆ ದಂಡ, 25 ಜನರ ಬಂಧನ

ಕೊರೊನೊವೈರಸ್ ಸಾಂಕ್ರಾಮಿಕದಿಂದಾಗಿ ನೆದರ್ಲ್ಯಾಂಡ್ಸ್ನಲ್ಲಿ ವಿಧಿಸಲಾಗಿರುವ ಕರ್ಫ್ಯೂ ಉಲ್ಲಂಘಿಸಿದ್ದಕ್ಕಾಗಿ 3,600 ಜನರಿಗೆ ದಂಡ ವಿಧಿಸಲಾಗಿದ್ದು, 25 ಜನರನ್ನು ಬಂಧಿಸಲಾಗಿದೆ.  

Written by - Zee Kannada News Desk | Last Updated : Jan 26, 2021, 01:25 PM IST
  • ವೈರಸ್ ಹರಡುವುದನ್ನು ತಡೆಯುವ ಸಲುವಾಗಿ ನೈಟ್ ಕರ್ಫ್ಯೂ (Night Curfew) ವಿಧಿಸಲಾಗಿದೆ
  • ಉತ್ತರ ನಗರ ಉರ್ಕ್‌ನಲ್ಲಿ ಯುವಕರ ಗುಂಪು ಅಶಾಂತಿಯನ್ನು ಸೃಷ್ಟಿಸಿತು
  • ಕರ್ಫ್ಯೂ ಉಲ್ಲಂಘಿಸಿ ಸಾರ್ವಜನಿಕ ಹಿಂಸಾಚಾರ (Violence) ಕೃತ್ಯದಲ್ಲಿ ಭಾಗಿಯಾದ ಹಿನ್ನಲೆಯಲ್ಲಿ 25 ಜನರನ್ನು ಬಂಧಿಸಲಾಯಿತು
Night Curfew ಉಲ್ಲಂಘನೆ, 3,600 ಜನರಿಗೆ ದಂಡ, 25 ಜನರ ಬಂಧನ title=
File Image

ನವದೆಹಲಿ : ಕೊರೊನೊವೈರಸ್ ಸಾಂಕ್ರಾಮಿಕದಿಂದಾಗಿ ನೆದರ್ಲ್ಯಾಂಡ್ಸ್ನಲ್ಲಿ ವಿಧಿಸಲಾಗಿರುವ ನೈಟ್ ಕರ್ಫ್ಯೂ ಉಲ್ಲಂಘಿಸಿದ್ದಕ್ಕಾಗಿ 3,600 ಜನರಿಗೆ ದಂಡ ವಿಧಿಸಲಾಗಿದ್ದು 25 ಜನರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಸುದ್ದಿ ಸಂಸ್ಥೆ ಕ್ಸಿನ್ಹುವಾ ವರದಿಯ ಪ್ರಕಾರ, ವೈರಸ್ (Coronavirus) ಹರಡುವುದನ್ನು ತಡೆಯುವ ಸಲುವಾಗಿ ನೈಟ್ ಕರ್ಫ್ಯೂ (Night Curfew) ವಿಧಿಸಲಾಗಿದ್ದು ಜನರು ರಾತ್ರಿ 9 ರಿಂದ ಬೆಳಿಗ್ಗೆ 4:30 ರವರೆಗೆ ಮನೆಯಿಂದ ಹೊರಬರಲು ಅನುಮತಿ ಇಲ್ಲ. ತುರ್ತು ಸಂದರ್ಭಗಳಲ್ಲಿ ಮಾತ್ರ ಸಾರ್ವಜನಿಕರಿಗೆ ಮನೆಯಿಂದ ಹೊರಬರಲು ಅನುಮತಿ ನೀಡಲಾಗಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.

ಇದನ್ನೂ ಓದಿ - Coronavirusನಿಂದಾಗಿ ಮಹಿಳೆ ಸಾವು, ಆದರೆ 10 ದಿನಗಳ ಬಳಿಕ ಆಗಿದ್ದೇನು ಗೊತ್ತಾ!

ಕರ್ಫ್ಯೂ ಉಲ್ಲಂಘಿಸಿ ಸಾರ್ವಜನಿಕ ಹಿಂಸಾಚಾರ (Violence) ಕೃತ್ಯದಲ್ಲಿ ಭಾಗಿಯಾದ ಹಿನ್ನಲೆಯಲ್ಲಿ 25 ಜನರನ್ನು ಬಂಧಿಸಲಾಯಿತು. 3,600 ಜನರಿಗೆ 95 ಯೂರೋ ದಂಡ ವಿಧಿಸಲಾಯಿತು. ಉತ್ತರ ನಗರ ಉರ್ಕ್‌ನಲ್ಲಿ ಯುವಕರ ಗುಂಪು ಅಶಾಂತಿಯನ್ನು ಸೃಷ್ಟಿಸಿತು, ಅಲ್ಲಿ ಪೊಲೀಸ್ (Police) ಕಾರುಗಳು ನಾಶವಾದವು ಮತ್ತು ಕರೋನಾ ಪರೀಕ್ಷಾ ಸೌಲಭ್ಯಕ್ಕೆ ಬೆಂಕಿ ಹಚ್ಚಲಾಯಿತು ಎಂದು ವರದಿಯಾಗಿದೆ.

ಪೊಲೀಸರ ಪ್ರಕಾರ ಈ ಘಟನೆಗೆ ಸಂಬಂಧಿಸಿದಂತೆ ಈವರೆಗೂ ಇಬ್ಬರನ್ನು ಬಂಧಿಸಲಾಗಿದೆ ಮತ್ತು ಒಂದು ಡಜನ್ ಜನರಿಗೆ ದಂಡ ವಿಧಿಸಲಾಗಿದೆ. ಶನಿವಾರ ದಕ್ಷಿಣ ನಗರವಾದ ಸ್ಟೈನ್‌ನಲ್ಲಿ ರಾತ್ರಿ 9 ರ ನಂತರ ಸುಮಾರು 9 ಜನರು ಸೇರಿದ್ದರು. ಪೊಲೀಸರ ಪ್ರಕಾರ, ಪೊಲೀಸರು ಮಧ್ಯಪ್ರವೇಶಿಸಿದಾಗ ಅಲ್ಲಿದ್ದ ಜನರೊಬ್ಬರು ಅಧಿಕಾರಿಯ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. 

ಇದನ್ನೂ ಓದಿ - ಭಾರತದಲ್ಲಿ 150 ಜನರಿಗೆ ಬ್ರಿಟನ್ ರೂಪಾಂತರಿ ಕೊರೊನಾವೈರಸ್ !

ಇನ್ನು ಈ ಪ್ರಕರಣದಲ್ಲಿ 14 ಜನರನ್ನು ಬಂಧಿಸಲಾಗಿದೆ ಮತ್ತು ಫೆಬ್ರವರಿ 9 ರವರೆಗೆ ಕರ್ಫ್ಯೂ ಮುಂದುವರಿಯುತ್ತದೆ ಎಂದು ಹೇಳಲಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News