ಪಾಕಿಸ್ತಾನದ ವಿದೇಶಾಂಗ ಸಚಿವ ಷಾ ಮೆಹಮೂದ್ ಖುರೇಷಿಗೆ COVID-19 ಪಾಸಿಟಿವ್

ಪಾಕಿಸ್ತಾನದ ವಿದೇಶಾಂಗ ಸಚಿವ ಷಾ ಮೆಹಮೂದ್ ಖುರೇಷಿ ಅವರು ಇಸ್ಲಾಮಾಬಾದ್‌ನಲ್ಲಿ ಅಫ್ಘಾನಿಸ್ತಾನದ ಬಗ್ಗೆ ಯು.ಎಸ್. ವಿಶೇಷ ಪ್ರತಿನಿಧಿ ಜಲ್ಮೇ ಖಲೀಲ್‌ಜಾದ್ ಅವರೊಂದಿಗೆ ಒಂದು ಉನ್ನತ ಸಭೆಗಳನ್ನು ನಡೆಸಿದ ಕೆಲ ದಿನಗಳ ನಂತರ COVID-19 ಪಾಸಿಟಿವ್ ಆಗಿರುವುದಾಗಿ ಹೇಳಿದರು.  

Last Updated : Jul 4, 2020, 07:35 AM IST
ಪಾಕಿಸ್ತಾನದ ವಿದೇಶಾಂಗ ಸಚಿವ ಷಾ ಮೆಹಮೂದ್ ಖುರೇಷಿಗೆ COVID-19 ಪಾಸಿಟಿವ್ title=

ಇಸ್ಲಾಮಾಬಾದ್: ಇಸ್ಲಾಮಾಬಾದ್‌ನಲ್ಲಿ ಅಫ್ಘಾನಿಸ್ತಾನದ ಬಗ್ಗೆ ಯು.ಎಸ್. ವಿಶೇಷ ಪ್ರತಿನಿಧಿ ಜಲ್ಮೇ ಖಲೀಲ್‌ಜಾದ್ ಅವರೊಂದಿಗೆ ಒಂದು ಸಭೆ ಸೇರಿದಂತೆ ಉನ್ನತ ಮಟ್ಟದ ಸಭೆಗಳನ್ನು ನಡೆಸಿದ ಕೆಲ ದಿನಗಳ ನಂತರ ಕೋವಿಡ್ -19 (COVID-19) ಪಾಸಿಟಿವ್ ಬಂದಿರುವುದಾಗಿ ಪಾಕಿಸ್ತಾನ (Pakistan) ವಿದೇಶಾಂಗ ಸಚಿವ ಶಾ ಮೆಹಮೂದ್ ಖುರೇಷಿ (Shah Mehmood Qureshi) ಶುಕ್ರವಾರ ಹೇಳಿದ್ದಾರೆ.

ಶುಕ್ರವಾರ ಮಧ್ಯಾಹ್ನ ನನಗೆ ಸ್ವಲ್ಪ ಜ್ವರ ಬಂತು ಮತ್ತು ತಕ್ಷಣ ನನ್ನನ್ನು ಮನೆಯಲ್ಲಿಯೇ ಕ್ವಾರಂಟೈನ್ (Quarantine) ಮಾಡಿಕೊಂಡಿರುವುದಾಗಿ ಖುರೇಷಿ ಟ್ವಿಟ್ಟರ್ನಲ್ಲಿ ತಿಳಿಸಿದ್ದಾರೆ. ಜೊತೆಗೆ ತಾವು ಆರೋಗ್ಯವಾಗಿದ್ದು ಮನೆಯಿಂದಲೇ ತಮ್ಮ ಕರ್ತವ್ಯ ನಿರ್ವಹಿಸುತ್ತಿರುವುದಾಗಿ ಅವರು ತಿಳಿಸಿದ್ದಾರೆ.

ಭಾರತದ ಪರಾಕ್ರಮ ಕಂಡು ಭಯಭೀತರಾದ ಪಾಕಿಸ್ತಾನ ವಿದೇಶಾಂಗ ಸಚಿವ

ಕಳೆದ ಕೆಲವು ದಿನಗಳಲ್ಲಿ ಖುರೇಷಿ ಅವರು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ (Imran Khan) ಅವರೊಂದಿಗೆ ಸಂಸತ್ತಿನಲ್ಲಿ ಮತ್ತು ಬುಧವಾರ ನಡೆದ ಸಂಪುಟ ಸಭೆಯಲ್ಲಿ ಸಂಪರ್ಕ ಹೊಂದಿದ್ದರು.

ಅಫಘಾನ್ ಶಾಂತಿ ಪ್ರಕ್ರಿಯೆಯ ಪ್ರಗತಿಯನ್ನು ಚರ್ಚಿಸಲು ಯು.ಎಸ್. (US) ವಿಶೇಷ ಪ್ರತಿನಿಧಿ ಪಾಕಿಸ್ತಾನಕ್ಕೆ ಪ್ರಯಾಣಿಸಿದಾಗ ಖುರೇಷಿ ಬುಧವಾರ ಖಲೀಲ್ಜಾದ್ ಅವರನ್ನು ಭೇಟಿಯಾದರು.

ಪಾಕಿಸ್ತಾನದ ಇತಿಹಾಸದಲ್ಲಿ ಮೊದಲ ಬಾರಿಗೆ ಅತಿ ಹೆಚ್ಚು ದುಬಾರಿಯಾದ ಚಿನ್ನ

ಆ ಸಭೆಗಳಿಂದ ಬಿಡುಗಡೆಯಾದ ಚಿತ್ರಗಳು ಖುರೇಷಿ ಮತ್ತು ಇತರರು ಸಭೆಯಲ್ಲಿ ಮಾಸ್ಕ್ ಧರಿಸಿರುವುದನ್ನು ಬಿಂಬಿಸುತ್ತವೆ. ಆದರೆ ಖುರೇಷಿ ಅವರ ಈ ಹೇಳಿಕೆಗೆ ಸಂಬಂಧಿಸಿದಂತೆ ಯು.ಎಸ್. ಸ್ಟೇಟ್ ಡಿಪಾರ್ಟ್ಮೆಂಟ್ ಇದುವರೆಗೂ ಪ್ರತಿಕ್ರಿಯಿಸಲಿಲ್ಲ.

ಪಾಕಿಸ್ತಾನವು ಕರೋನವೈರಸ್ (Coronavirus)ನ 221,896 ಪ್ರಕರಣಗಳು ಮತ್ತು 4,451 ಸಾವುಗಳನ್ನು ವರದಿ ಮಾಡಿದೆ. ದೈನಂದಿನ ಪರೀಕ್ಷಾ ಸಂಖ್ಯೆಗಳು ಕುಸಿಯುತ್ತಿದ್ದರೂ, ದೇಶವು ಪ್ರತಿದಿನ ಸುಮಾರು 4,000 ಹೊಸ ಪ್ರಕರಣಗಳನ್ನು ನೋಡುತ್ತಲೇ ಇದೆ.

ಪಾಕಿಸ್ತಾನದಲ್ಲಿ ರೈಲ್ವೆ ಸಚಿವ ಶೇಖ್ ರಶೀದ್ ಮತ್ತು ಸಂಸತ್ತಿನ ಕೆಳಮನೆ ಸ್ಪೀಕರ್ ಅಸಾದ್ ಖೈಸರ್ ಸೇರಿದಂತೆ ಹಲವಾರು ಉನ್ನತ ಅಧಿಕಾರಿಗಳಿಗೆ ಕರೋನಾವೈರಸ್ ಪಾಸಿಟಿವ್ ಬಂದಿದೆ.

Trending News