ಭಾರತದ ವಿರುದ್ಧದ ಕ್ರಮಗಳನ್ನು ಪರಿಶೀಲಿಸಲು ಕಾಶ್ಮೀರದ ಷರತ್ತು ಹಾಕಿದ ಪಾಕ್ !

ಕಾಶ್ಮೀರದ ಮೇಲಿನ ಕ್ರಮಗಳನ್ನು ಮರುಪರಿಶೀಲಿಸಲು ನವದೆಹಲಿ ಒಪ್ಪಿದರೆ ಭಾರತದ ವಿರುದ್ಧದ ನಿರ್ಧಾರವನ್ನು ಪರಿಶೀಲಿಸಲು ಪಾಕಿಸ್ತಾನ ಸಿದ್ಧ ಎಂದು ವಿದೇಶಾಂಗ ಸಚಿವ ಶಾ ಮೆಹಮೂದ್ ಖುರೇಷಿ ತಿಳಿಸಿದ್ದಾರೆ.

Last Updated : Aug 8, 2019, 08:38 PM IST
ಭಾರತದ ವಿರುದ್ಧದ ಕ್ರಮಗಳನ್ನು ಪರಿಶೀಲಿಸಲು ಕಾಶ್ಮೀರದ ಷರತ್ತು ಹಾಕಿದ ಪಾಕ್ !  title=
file photo

ನವದೆಹಲಿ: ಕಾಶ್ಮೀರದ ಮೇಲಿನ ಕ್ರಮಗಳನ್ನು ಮರುಪರಿಶೀಲಿಸಲು ನವದೆಹಲಿ ಒಪ್ಪಿದರೆ ಭಾರತದ ವಿರುದ್ಧದ ನಿರ್ಧಾರವನ್ನು ಪರಿಶೀಲಿಸಲು ಪಾಕಿಸ್ತಾನ ಸಿದ್ಧ ಎಂದು ವಿದೇಶಾಂಗ ಸಚಿವ ಶಾ ಮೆಹಮೂದ್ ಖುರೇಷಿ ತಿಳಿಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಹಿಂತೆಗೆದುಕೊಳ್ಳುವ ನವದೆಹಲಿಯ ಕ್ರಮವನ್ನು ಏಕಪಕ್ಷೀಯ ಮತ್ತು ಕಾನೂನು ಬಾಹಿರ ಎಂದ ಪಾಕ್, ಭಾರತದ ಜೊತೆಗಿನ ರಾಜತಾಂತ್ರಿಕ ಹಾಗೂ ವಾಣಿಜ್ಯ ಸಂಬಂಧಗಳನ್ನು ಕಡಿತಗೊಳಿಸುವುದಾಗಿ ಘೋಷಿಸಿತ್ತು. ಇದರ ಭಾಗವಾಗಿ ಅದು ಭಾರತದ ಹೈ ಕಮಿಷನರ್ ನ್ನು ಹೊರ ಹಾಕಿದ್ದಲ್ಲದೆ ಸಂಜೋತಾ ಎಕ್ಸ್ಪ್ರೆಸ್ ರೈಲು ಸಂಚಾರವನ್ನು ರದ್ದುಗೊಳಿಸಲು ಆದೇಶ ಹೊರಡಿಸಿತ್ತು.

ಇನ್ನೊಂದೆಡೆ ಇದಕ್ಕೆ ಪ್ರತಿಕ್ರಿಯಿಸಿದ ಭಾರತವು ಜಮ್ಮು ಮತ್ತು ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಈ ವಿಷಯವು ಸಂಪೂರ್ಣವಾಗಿ ಆಂತರಿಕ ವಿಚಾರವಾಗಿದೆ ಎಂದು ಸ್ಪಷ್ಟಪಡಿಸಿದೆ. ಈ ಹಿನ್ನಲೆಯಲ್ಲಿ ಈಗ ಪಾಕ್  ಭಾರತದೊಂದಿಗೆ ಎಲ್ಲಾ ದ್ವಿಪಕ್ಷೀಯ ವ್ಯವಸ್ಥೆಗಳನ್ನು ಪರಿಶೀಲಿಸುವುದಾಗಿ ಪಾಕಿಸ್ತಾನ ಘೋಷಿಸಿದೆ. ಆದರೆ ಅದು ಎರಡು ಬದಿಯಲ್ಲಿ ಪರಿಶೀಲನೆಯಾಗಬೇಕು ಎಂದು ಪಾಕ್ ಆಗ್ರಹಿಸಿದೆ.

ಪಾಕ್ ವಿದೇಶಾಂಗ ಸಚಿವ ಶಾ ಮೆಹಮೂದ್ ಖುರೇಷಿ ಮಾತನಾಡಿ ' ಅವರು ತಮ್ಮ ನಿರ್ಧಾರಗಳನ್ನು ಪರಿಶೀಲಿಸಲು ಸಿದ್ಧರಿದ್ದಾರೆಯೇ? ಅವರು ಹಾಗೆ ಮಾಡಿದರೆ, ನಾವು ನಮ್ಮ ನಿರ್ಧಾರಗಳನ್ನು ಸಹ ಪರಿಶೀಲಿಸಬಹುದು. ವಿಮರ್ಶೆ ಎರಡೂ ಕಡೆ ಇರುತ್ತದೆ. ಅದನ್ನೇ ಸಿಮ್ಲಾ (ಒಪ್ಪಂದ) ಹೇಳುತ್ತದೆ" ಎಂದು ಖುರೇಷಿ ಹೇಳಿದರು. 

ಭಾರತದ ಪ್ರಧಾನಿ ಇಂದಿರಾ ಗಾಂಧಿ ಮತ್ತು ಆಗಿನ ಪಾಕಿಸ್ತಾನ ಅಧ್ಯಕ್ಷ ಜುಲ್ಫಿಕರ್ ಅಲಿ ಭುಟ್ಟೊ ಅವರು ಜುಲೈ 1972 ರಲ್ಲಿ ಸಿಮ್ಲಾ ಒಪ್ಪಂದಕ್ಕೆ ಸಹಿ ಹಾಕಿದ್ದರು. ಇದು  ಭಾರತ ಮತ್ತು ಪಾಕಿಸ್ತಾನದ ನಡುವಿನ ದ್ವೀಪಕ್ಷೀಯ ಸಂಬಂಧವನ್ನು ಸುಧಾರಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸಿತ್ತು.

Trending News