ಕೊನೆಗೂ ಸಾರ್ವಜನಿಕವಾಗಿ ಮಾಸ್ಕ್ ಧರಿಸಿದ ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್..!

ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಂತಿಮವಾಗಿ ಮಿಲಿಟರಿ ಆಸ್ಪತ್ರೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಸಾರ್ವಜನಿಕ ಆರೋಗ್ಯ ಅಧಿಕಾರಿಗಳು ಮತ್ತು ತಜ್ಞರ ಶಿಫಾರಸುಗಳಿಗೆ ಅನುಗುಣವಾಗಿ ಸಾರ್ವಜನಿಕವಾಗಿ ಮುಖವಾಡವನ್ನು ಧರಿಸಿದ್ದರು.

Updated: Jul 12, 2020 , 09:41 PM IST
 ಕೊನೆಗೂ ಸಾರ್ವಜನಿಕವಾಗಿ ಮಾಸ್ಕ್ ಧರಿಸಿದ ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್..!
Photo Courtsey : AP Photo

ನವದೆಹಲಿ: ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಂತಿಮವಾಗಿ ಮಿಲಿಟರಿ ಆಸ್ಪತ್ರೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಸಾರ್ವಜನಿಕ ಆರೋಗ್ಯ ಅಧಿಕಾರಿಗಳು ಮತ್ತು ತಜ್ಞರ ಶಿಫಾರಸುಗಳಿಗೆ ಅನುಗುಣವಾಗಿ ಸಾರ್ವಜನಿಕವಾಗಿ ಮುಖವಾಡವನ್ನು ಧರಿಸಿದ್ದರು.

ಇದು ನೌಕಾಪಡೆಯ ನೀಲಿ ಮುಖವಾಡವಾಗಿದ್ದು, ಚಿನ್ನದ ಅಧ್ಯಕ್ಷೀಯ ಮುದ್ರೆಯನ್ನು ಎಡಭಾಗದಲ್ಲಿ ಅಲಂಕರಿಸಲಾಗಿದೆ.

"ನಾನು ಎಂದಿಗೂ ಮುಖವಾಡಗಳಿಗೆ ವಿರುದ್ಧವಾಗಿರಲಿಲ್ಲ, ಆದರೆ ಅದಕ್ಕೆ ಸಮಯ ಮತ್ತು ಸ್ಥಳವಿದೆ ಎಂದು ನಾನು ನಂಬುತ್ತೇನೆ" ರಾಜ್ಯ ಮೇರಿಲ್ಯಾಂಡ್‌ನ ವಾಷಿಂಗ್ಟನ್ ಡಿಸಿಯ ಹೊರಗಡೆ ವಾಲ್ಟರ್ ರೀಡ್ ಮಿಲಿಟರಿ ಆಸ್ಪತ್ರೆಗೆ ಹೊರಡುವ ಮುನ್ನ ಟ್ರಂಪ್ ಸುದ್ದಿಗಾರಿಗೆ ಹೇಳಿದರು.

ಈಗ ಅಮೇರಿಕಾದಲ್ಲಿ  ಒಟ್ಟು ಕೋವಿಡ್ -19 ಸೋಂಕುಗಳು ಸುಮಾರು 3.25 ಮಿಲಿಯನ್ಗೆ ಏರಿವೆ, ಮತ್ತು ಸಾವುಗಳ ಸಂಖ್ಯೆ 134,817 ಕ್ಕೆ ಏರಿಕೆಯಾಗಿದೆ. ಅಷ್ಟೇ ಅಲ್ಲದೇ  61,352 ಹೊಸ ಸೋಂಕುಗಳು ದಾಖಲಾಗಿವೆ.