ಶ್ರೀಲಂಕಾದ ಅಧ್ಯಕ್ಷೀಯ ಚುನಾವಣೆಯಲ್ಲಿ ಗೋತಬಯ ರಾಜಪಕ್ಸೆಗೆ ಜಯ

ಶ್ರೀಲಂಕಾದ ಅಧ್ಯಕ್ಷೀಯ ಚುನಾವಣೆಯಲ್ಲಿ ಗೋತಬಯ ರಾಜಪಕ್ಸೆ ಜಯಗಳಿಸಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಭಿನಂದಿಸಿದ್ದಾರೆ.ಮಾಜಿ ಅಧ್ಯಕ್ಷ ಮಹಿಂದಾ ರಾಜಪಕ್ಸೆ ಅವರ ಕಿರಿಯ ಸಹೋದರರಾದ ಗೋತಬಯ ರಾಜಪಕ್ಸೆ 51.9 ರಷ್ಟು ಮತಗಳನ್ನು ಗಳಿಸಿದ್ದಾರೆ ಎಂದು ಅವರ ವಕ್ತಾರರು ಸುದ್ದಿ ಸಂಸ್ಥೆ ಎಎಫ್‌ಪಿಗೆ ತಿಳಿಸಿದ್ದಾರೆ.

Updated: Nov 17, 2019 , 02:54 PM IST
 ಶ್ರೀಲಂಕಾದ ಅಧ್ಯಕ್ಷೀಯ ಚುನಾವಣೆಯಲ್ಲಿ ಗೋತಬಯ ರಾಜಪಕ್ಸೆಗೆ ಜಯ
Photo courtesy: Twitter

ನವದೆಹಲಿ: ಶ್ರೀಲಂಕಾದ ಅಧ್ಯಕ್ಷೀಯ ಚುನಾವಣೆಯಲ್ಲಿ ಗೋತಬಯ ರಾಜಪಕ್ಸೆ ಜಯಗಳಿಸಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಭಿನಂದಿಸಿದ್ದಾರೆ.ಮಾಜಿ ಅಧ್ಯಕ್ಷ ಮಹಿಂದಾ ರಾಜಪಕ್ಸೆ ಅವರ ಕಿರಿಯ ಸಹೋದರರಾದ ಗೋತಬಯ ರಾಜಪಕ್ಸೆ 51.9 ರಷ್ಟು ಮತಗಳನ್ನು ಗಳಿಸಿದ್ದಾರೆ ಎಂದು ಅವರ ವಕ್ತಾರರು ಸುದ್ದಿ ಸಂಸ್ಥೆ ಎಎಫ್‌ಪಿಗೆ ತಿಳಿಸಿದ್ದಾರೆ.

ಗೋತಾಬಯ ರಾಜಪಕ್ಸೆ ಗೆಲುವಿಗೆ ಟ್ವೀಟ್ ಮೂಲಕ ಅಭಿನಂದಿಸಿರುವ ಪ್ರಧಾನಿ ನರೇಂದ್ರ ಮೋದಿ 'ರಾಷ್ಟ್ರಪತಿ ಚುನಾವಣೆಯಲ್ಲಿ ನಿಮ್ಮ ಗೆಲುವಿಗೆ ಅಭಿನಂದನೆಗಳು. ನಮ್ಮ ಉಭಯ ದೇಶಗಳು ಮತ್ತು ನಾಗರಿಕರ ನಡುವಿನ ನಿಕಟ ಮತ್ತು ಸಹೋದರ ಸಂಬಂಧಗಳನ್ನು ವೃದ್ದಿಗೊಳಿಸಲು ಮತ್ತು ನಮ್ಮ ಪ್ರದೇಶದಲ್ಲಿ ಶಾಂತಿ, ಸಮೃದ್ಧಿ ಮತ್ತು ಸುರಕ್ಷತೆಗಾಗಿ ನಿಮ್ಮೊಂದಿಗೆ ನಿಕಟವಾಗಿ ಕೆಲಸ ಮಾಡಲು ನಾನು ಎದುರು ನೋಡುತ್ತಿದ್ದೇನೆ' ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

ಪ್ರಧಾನಿ ಮೋದಿಯವರ ಶುಭಾಶಯಗಳಿಗೆ ಧನ್ಯವಾದ ಅರ್ಪಿಸಿದ ಗೋತಬಯ ರಾಜಪಕ್ಸೆ, 'ನಿಮ್ಮ ಆತ್ಮೀಯ ಶುಭಾಶಯಗಳಿಗಾಗಿ ನಾನು ಪ್ರಧಾನಿ ನರೇಂದ್ರ ಮೋದಿ ಮತ್ತು ಭಾರತದ ಜನರಿಗೆ ಧನ್ಯವಾದ ಅರ್ಪಿಸುತ್ತೇನೆ. ನಮ್ಮ ಎರಡು ರಾಷ್ಟ್ರಗಳು ಇತಿಹಾಸ ಮತ್ತು ಸಾಮಾನ್ಯ ನಂಬಿಕೆಗಳಿಂದ ಬದ್ಧವಾಗಿವೆ ಮತ್ತು ನಮ್ಮ ಸ್ನೇಹವನ್ನು ಬಲಪಡಿಸಲು ಮತ್ತು ನಿಮ್ಮನ್ನು ಭೇಟಿಯಾಗಲು ನಾನು ಎದುರು ನೋಡುತ್ತೇನೆ ' ಎಂದು ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ್ದಾರೆ. ಒಂದು ಕಾಲದಲ್ಲಿ ಶ್ರೀಲಂಕಾದ ಪ್ರಮುಖ ಮಿಲಿಟರಿ ತಂತ್ರಜ್ಞರಾಗಿದ್ದ ರಾಜಪಕ್ಸೆ ಅವರನ್ನು ಸಿಂಹಳೀಯ ಹಾಗೂ  ಪ್ರಬಲ ಬೌದ್ಧ ಪಾದ್ರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ತಮಿಳು ಪ್ರತ್ಯೇಕತಾವಾದಿಗಳನ್ನು ಹತ್ತಿಕ್ಕುವಲ್ಲಿ ಗೋತಬಯ ರಾಜಪಕ್ಸೆ ಮಹತ್ವದ ಪಾತ್ರವನ್ನು ವಹಿಸಿದ್ದರು.

ಈಗ ರಾಜಪಕ್ಸೆ ಕುಟುಂಬದವರು ಅಧಿಕಾರಕ್ಕೆ ಮರಳುವುದು ಭಾರತದ ಕಳವಳಕ್ಕೆ ಕಾರಣವಾಗಿದೆ, ಮಹಿಂದಾ ರಾಜಪಕ್ಸೆ ಚೀನಾ ಕಡೆಗೆ ಒಲವು ತೋರುತ್ತಿದ್ದಾರೆ. ಮಹಿಂದಾ ರಾಜಪಕ್ಸೆ ಅಧ್ಯಕ್ಷರಾಗಿದ್ದಾಗ, ಚೀನಾದ ಎರಡು ಜಲಾಂತರ್ಗಾಮಿ ನೌಕೆಗಳನ್ನು ಭಾರತಕ್ಕೆ ತಿಳಿಸದೆ ಶ್ರೀಲಂಕಾದಲ್ಲಿ ಡಾಕ್ ಮಾಡಲು ಅವಕಾಶ ನೀಡಲಾಯಿತು. ಭಾರತಕ್ಕೆ ಮತ್ತೊಂದು ಆತಂಕವೆಂದರೆ ಉತ್ತರ ಮತ್ತು ಪೂರ್ವದ ತಮಿಳು ಜನಾಂಗೀಯ ಅಲ್ಪಸಂಖ್ಯಾತರಿಗೆ ಅಧಿಕಾರವನ್ನು ನಿಯೋಜಿಸುವುದು.