Bomb blast in Afghanistan: ರಸ್ತೆ ಬದಿ ಬಾಂಬ್ ಸ್ಫೋಟ: ಬಸ್ನಲ್ಲಿದ್ದ 7 ಜನರ ಸಾವು, ಹಲವರ ಸ್ಥಿತಿ ಗಂಭೀರ

Bomb blast in Afghanistan: ಈ ಸ್ಫೋಟ ಸಂಭವಿಸಿದ ಸಮಯದಲ್ಲಿ, ಎಲ್ಲಾ ನೌಕರರು ಬಸ್ ಹತ್ತಿ ತಮ್ಮ ಕೆಲಸದ ಸ್ಥಳಕ್ಕೆ ಹೋಗುತ್ತಿದ್ದರು ಎಂದು ಸರ್ಕಾರಿ ಅಧಿಕಾರಿ ತಿಳಿಸಿದ್ದಾರೆ. ಈ ದಾಳಿಯ ತನಿಖೆಯನ್ನು ಪೊಲೀಸರು ಪ್ರಾರಂಭಿಸಿದ್ದಾರೆ ಎಂದು ಹೇಳಿದರು. ಇಲ್ಲಿಯವರೆಗೆ ಯಾವುದೇ ಗುಂಪು, ವ್ಯಕ್ತಿ ಅಥವಾ ಸಂಘಟನೆ ಸ್ಫೋಟದ ಹೊಣೆ ಹೊತ್ತುಕೊಂಡಿಲ್ಲ.

Written by - Bhavishya Shetty | Last Updated : Dec 6, 2022, 04:25 PM IST
    • ಅಫ್ಘಾನಿಸ್ತಾನದಲ್ಲಿ ಇಂದು ಭಾರೀ ಪ್ರಮಾಣದಲ್ಲಿ ಬಾಂಬ್ ಸ್ಫೋಟ
    • 7 ಮಂದಿ ದುರಂತ ಮರಣ ಕಂಡರೆ, 6 ಜನರಿಗೆ ಗಾಯ
    • ಇಂದು ಬೆಳಿಗ್ಗೆ 7:30 ಕ್ಕೆ ಸಂಭವಿಸಿದ ಘಟನೆ
Bomb blast in Afghanistan: ರಸ್ತೆ ಬದಿ ಬಾಂಬ್ ಸ್ಫೋಟ: ಬಸ್ನಲ್ಲಿದ್ದ 7 ಜನರ ಸಾವು, ಹಲವರ ಸ್ಥಿತಿ ಗಂಭೀರ title=
Afghanistan

Bomb blast in Afghanistan: ಅಫ್ಘಾನಿಸ್ತಾನದ ಬಾಲ್ಖ್ ಪ್ರಾಂತ್ಯದಲ್ಲಿ ಇಂದು ಭಾರೀ ಪ್ರಮಾಣದಲ್ಲಿ ಬಾಂಬ್ ಸ್ಫೋಟಗೊಂಡಿದ್ದು, ಈ ದುರಂತದಲ್ಲಿ 7 ಮಂದಿ ಸಾವನ್ನಪ್ಪಿದ್ದಾರೆ. ವರದಿಯ ಪ್ರಕಾರ, ಬಾಲ್ಖ್ ಪ್ರಾಂತ್ಯದ ರಾಜಧಾನಿ ಮಜರ್-ಎ-ಷರೀಫ್‌ನಲ್ಲಿ ಈ ಬಾಂಬ್ ಸ್ಫೋಟ ಸಂಭವಿಸಿದೆ. ಇಲ್ಲಿ ಸರ್ಕಾರಿ ನೌಕರರ ಬಸ್ ರಸ್ತೆಬದಿಯಲ್ಲಿ ಬಾಂಬ್ ಸ್ಪೋಟಕ್ಕೆ ತುತ್ತಾಗಿದೆ. ಪರಿಣಾಮ 7 ಮಂದಿ ದುರಂತ ಮರಣ ಕಂಡರೆ, 6 ಜನರು ಗಾಯಗೊಂಡಿದ್ದಾರೆ. ಸದ್ಯ ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಇದನ್ನೂ ಓದಿ: Viral Video: ಮಾರುಕಟ್ಟೆಯಲ್ಲಿ ನಾಯಿ ತರಕಾರಿ ಖರೀದಿಸುವುದನ್ನು ಎಲ್ಲಾದರೂ ನೋಡಿದ್ದೀರಾ?

ಮಂಗಳವಾರ ಬೆಳಿಗ್ಗೆ 7:30 ರ ಸುಮಾರಿಗೆ ಮಜರ್-ಇ-ಷರೀಫ್ ನಗರದ ಪೊಲೀಸ್ ಜಿಲ್ಲೆ 3 ರ ಗಡಿ ಪಟ್ಟಣವಾದ ಹಿರಾಟನ್‌ನಲ್ಲಿ ಪೆಟ್ರೋಲಿಯಂ ನಿರ್ದೇಶನಾಲಯದ ಸಿಬ್ಬಂದಿಯ ಬಸ್‌ ಈ ದುರಂತಕ್ಕೆ ಸಿಕ್ಕಿಹಾಕಿಕೊಂಡಿದೆ.

ಈ ಸ್ಫೋಟ ಸಂಭವಿಸಿದ ಸಮಯದಲ್ಲಿ, ಎಲ್ಲಾ ನೌಕರರು ಬಸ್ ಹತ್ತಿ ತಮ್ಮ ಕೆಲಸದ ಸ್ಥಳಕ್ಕೆ ಹೋಗುತ್ತಿದ್ದರು ಎಂದು ಸರ್ಕಾರಿ ಅಧಿಕಾರಿ ತಿಳಿಸಿದ್ದಾರೆ. ಈ ದಾಳಿಯ ತನಿಖೆಯನ್ನು ಪೊಲೀಸರು ಪ್ರಾರಂಭಿಸಿದ್ದಾರೆ ಎಂದು ಹೇಳಿದರು. ಇಲ್ಲಿಯವರೆಗೆ ಯಾವುದೇ ಗುಂಪು, ವ್ಯಕ್ತಿ ಅಥವಾ ಸಂಘಟನೆ ಸ್ಫೋಟದ ಹೊಣೆ ಹೊತ್ತುಕೊಂಡಿಲ್ಲ. ಈ ದಾಳಿಗೆ ಕಾರಣ ಮತ್ತು ದಾಳಿಕೋರರ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದೇವೆ. ದಾಳಿಯ ಹಿಂದೆ ಯಾರಿದ್ದಾರೆ ಎಂಬುದು ಶೀಘ್ರದಲ್ಲೇ ಬಹಿರಂಗವಾಗಲಿದೆ.

ಇದನ್ನೂ ಓದಿ: Trending Video: ಮೊದಲು ಜೋಕಾಲಿ ಆಡುವ ಈ ಪುಟಾಣಿಯ ವಿಡಿಯೋ ನೋಡಿ, ನಂತರ ದಮ್ಮಿದ್ರೆ ನಗು ತಡೆದು ತೋರಿಸಿ

ಬಾಂಬ್ ಸ್ಫೋಟ ಸಂಭವಿಸಿದ ಸ್ಥಳದಲ್ಲಿ ಅತ್ಯಂತ ಭೀಕರವಾಗಿತ್ತು ಎಂದು ಅಲ್ಲಿದ್ದ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಅದರ ಧ್ವನಿ ಕಿಲೋ ಮೀಟರ್ ದೂರಕ್ಕೆ ಕೇಳಿಸಿಕೊಂಡಿದೆ. ಬಸ್ಸಿನಲ್ಲಿದ್ದ ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಬಲಿಯಾದವರ ಸಂಖ್ಯೆ ಮತ್ತಷ್ಟು ಹೆಚ್ಚಾಗಬಹುದು. ಸದ್ಯ ಇಕ್ನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನಡೆಯುತ್ತಿದ್ದು, ಅವರಿಗೆ ಉತ್ತಮ ವೈದ್ಯಕೀಯ ಸೌಲಭ್ಯ ಕಲ್ಪಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News