Viral Video: ಮಾರುಕಟ್ಟೆಯಲ್ಲಿ ನಾಯಿ ತರಕಾರಿ ಖರೀದಿಸುವುದನ್ನು ಎಲ್ಲಾದರೂ ನೋಡಿದ್ದೀರಾ?

Trending Video: ನಾಯಿ ಎಲ್ಲವನ್ನೂ ಮಾಡಬಹುದು ಆದರೆ ಅದು ಮಾರುಕಟ್ಟೆಗೆ ಹೋಗಿ ತರಕಾರಿಗಳನ್ನು ಖರೀದಿಸಲು ಸಾಧ್ಯ? ಈ ವೀಡಿಯೋ ನೋಡಿ ನೀವೂ ಕೂಡ ನಿಬ್ಬೆರಗಾಗುವಿರಿ. ಇದರಲ್ಲಿ ಅತ್ಯಂತ ಆಶ್ಚರ್ಯಕರ ವಿಷಯವೆಂದರೆ ನಾಯಿಗೆ ಯಾವ ತರಕಾರಿಯನ್ನು ಖರೀದಿಸಬೇಕೆಂಬುದು ಕೂಡ ತಿಳಿದಿದೆ ಮತ್ತು ಆ ತರಕಾರಿಯ ಮಾರುಕಟ್ಟೆ ಬೆಲೆಯೂ ತಿಳಿದಿದೆ.  

Written by - Nitin Tabib | Last Updated : Dec 5, 2022, 08:59 PM IST
  • ಈ ವೀಡಿಯೋ ನೋಡಿದ ಬಳಕೆದಾರರು ತುಂಬಾ ಭಾವುಕರಾಗಿದ್ದಾರೆ.
  • beautifulanimals24ಹೆಸರಿನ ಇನ್‌ಸ್ಟಾಗ್ರಾಮ್ ಖಾತೆ ಮೂಲಕ ಈ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ.
  • ಜನರು ವೀಡಿಯೊವನ್ನು ತುಂಬಾ ಇಷ್ಟಪಡುತ್ತಿದ್ದಾರೆ.
Viral Video: ಮಾರುಕಟ್ಟೆಯಲ್ಲಿ ನಾಯಿ ತರಕಾರಿ ಖರೀದಿಸುವುದನ್ನು ಎಲ್ಲಾದರೂ ನೋಡಿದ್ದೀರಾ? title=
Trending Video

Viral Video: ನಾಯಿ ನಿಷ್ಠಾವಂತ ಮತ್ತು ಬುದ್ಧಿವಂತ ಪ್ರಾಣಿ. ನಾಯಿ ತನ್ನ ಒಡೆಯನ ಎಲ್ಲಾ ಮಾತುಗಳನ್ನು ಅರ್ಥಮಾಡಿಕೊಳ್ಳುತ್ತದೆ ಮತ್ತು ಅದನ್ನು ಪೂರೈಸಲು ಯತ್ನಿಸುವುದನ್ನು ನೀವು ನೋಡಿರಬಹುದು. ಇಂತಹುದೇ ನಾಯಿಯೊಂದರ ಅದ್ಭುತ ವಿಡಿಯೋ ಇತ್ತೀಚಿನ ದಿನಗಳಲ್ಲಿ ವೈರಲ್ ಆಗುತ್ತಿದೆ. ಇದು ಜನರಲ್ಲಿ ಭಾರಿ ಅಚ್ಚರಿಯನ್ನೇ ಮೂಡಿಸಿದೆ. ನಾಯಿ ಎಲ್ಲವನ್ನೂ ಮಾಡಬಲ್ಲದು ಆದರೆ ಮಾರುಕಟ್ಟೆಗೆ ಹೋಗಿ ತರಕಾರಿ ಖರೀದಿಸುವುದು ಹೇಗೆ ಎಂಬುದು ಜನರಿಗೆ ಅರ್ಥವಾಗುತ್ತಿಲ್ಲ. ಈ ನಾಯಿಗೆ ತುಂಬಾ ತರಬೇತಿ ನೀಡಲಾಗಿದೆ ಎಂದು ಕೆಲವರು ಹೇಳುತ್ತಿದ್ದಾರೆ. ಇದರ ನಂತರವೇ ನಾಯಿಯು ಆಶ್ಚರ್ಯಕರ ಕೆಲಸವನ್ನು ಸುಲಭವಾಗಿ ಮಾಡಲು ಸಾಧ್ಯವಾಗುತ್ತಿದೆ ಎನ್ನುತ್ತಿದ್ದಾರೆ.

ಇದನ್ನೂ ಓದಿ-Shocking Video : ಸೀನಿದ ಮರು ಘಳಿಗೆ ಪ್ರಾಣಬಿಟ್ಟ ವ್ಯಕ್ತಿ! ಸಾವು ಹೀಗೂ ಬರಬಹುದೇ?

ವಿಡಿಯೋ ನೋಡಿದ್ರೆ ನೀವೂ ಕೂಡ ನಿಬ್ಬೇರಗಾಗುವಿರಿ
ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋವನ್ನು ನೋಡಿ ನೀವೂ ಕೂಡ ನಿಬ್ಬೆರಗಾಗುವಿರಿ. ಏಕೆಂದರೆ ಇಂತಹ ದೃಶ್ಯವನ್ನು ನೀವು ಈ ಹಿಂದೆ ಎಂದೂ ನೋಡಿರಲಿಕ್ಕಿಲ್ಲ. ಹೌದು, ವೈರಲ್ ಆಗಿರುವ ವಿಡಿಯೋದಲ್ಲಿ ನಾಯಿಯೊಂದು ಮಾರುಕಟ್ಟೆಯಲ್ಲಿ ಹಣ ಕೊಟ್ಟು ಬಹಳ ಜಾಣ್ಮೆಯಿಂದ ತರಕಾರಿ ಖರೀದಿಸುತ್ತಿರುವುದನ್ನು ನೀವು ನೋಡಬಹುದು. ಬಹುಶಃ ಇದನ್ನು ನಂಬುವುದು ಸುಲಭದ ಮಾತಲ್ಲ, ಆದರೆ ಈ ವೀಡಿಯೊವನ್ನು ನೋಡಿದ ನಂತರ ಒಂದು ಕ್ಷಣ ನಿಬ್ಬೆರಗಾಗುವುದು ಮಾತ್ರ ಗ್ಯಾರಂಟಿ. ಹಣ ಕೊಟ್ಟು ತರಕಾರಿ ಖರೀದಿಸಲು ನಾಯಿ ಮಾರುಕಟ್ಟೆಗೆ ಬರುವುದನ್ನು ನೀವು ವಿಡಿಯೋದಲ್ಲಿ ನೋಡಬಹುದು. ಅತ್ಯಂತ ಆಶ್ಚರ್ಯಕರ ವಿಷಯವೆಂದರೆ ನಾಯಿಗೆ ಯಾವ ತರಕಾರಿಯನ್ನು ಖರೀದಿಸಬೇಕೆಂದು ತಿಳಿದಿದೆ ಮತ್ತು ಆದರೆ ಮಾರುಕಟ್ಟೆ ಬೆಲೆಯೂ ತಿಳಿದಿದೆ ಎಂಬಂತಿದೆ. ವಿಡಿಯೋ ನೋಡಿ...

ಇದನ್ನೂ ಓದಿ-Elephant Attack: ಮದುವೆ ಫೋಟೋಶೂಟ್ ವೇಳೆ ಆನೆ ದಾಳಿ, ವಿಡಿಯೋ ವೈರಲ್‌

ಅಂಗಡಿಯ ಮಹಿಳೆಗೆ ಸನ್ನೆ ಮಾಡಿ ನಾಯಿ ತರಕಾರಿ ಖರೀದಿಸುವುದನ್ನು ನೀವು ಈ ವಿಡಿಯೋದಲ್ಲಿ ನೋಡಬಹುದು. ಮೊದಲು ನಾಯಿ ತರಕಾರಿ ಮಾರುಕಟ್ಟೆಯಲ್ಲಿ  ತರಕಾರಿ ಮಾರುವವರ ಬಳಿ ತಲುಪುತ್ತದೆ. ಇದರ ನಂತರ ಅದು ತನ್ನ ಒಂದು ಕಾಲನ್ನು ತರಕಾರಿಯ ಮೇಲೆ ಇಡುತ್ತದೆ. ಇದಾದ ನಂತರ ಅಂಗಡಿಯವರು ನಾಯಿ ತಂದಿರುವ ಕೆಂಪು ಬಣ್ಣದ ಬಾಸ್ಕೆಟ್ ನಲ್ಲಿ ತರಕಾರಿಗಳನ್ನು ಇಡುತ್ತಾರೆ. ನಂತರ ಅದು ಅದೇ ಕೆಂಪು ಬಣ್ಣದ ಪೆಟ್ಟಿಗೆಯಲ್ಲಿನ ಹಣವನ್ನು ತೆಗೆದುಕೊಳ್ಳುವಂತೆ ತರಕಾರಿ ಮಾರುವವರಿಗೆ ಸೂಚಿಸುತ್ತದೆ. ಆದರೆ, ಅವರು ನಾಯಿಗೆ ಚಿಲ್ಲರೆ ಹಣ ಹಿಂದಿರುಗಿಸದೆ ಇರುವುದನ್ನು ನೋಡಿ, ನಾಯಿ ಚಿಲ್ಲರೆ ಹಣ ವಾಪಸ್ ಬಕೆಟ್ ಗೆ ಹಾಕಲು ಸನ್ನೆ ಮಾಡುತ್ತದೆ. ನಾಯಿಯ ಜಾಣತನವನ್ನು ಕಂಡು ತರಕಾರಿ ಮಾರುವವ ಉಳಿದ ಹಣವನ್ನು ಬಾಸ್ಕೆಟ್ ಗೆ ಹಾಕುವುದನ್ನು ನೀವು ವಿಡಿಯೋದಲ್ಲಿ ನೋಡಬಹುದು. ಈ ವೀಡಿಯೋ ನೋಡಿದ ಬಳಕೆದಾರರು ತುಂಬಾ ಭಾವುಕರಾಗಿದ್ದಾರೆ. beautifulanimals24ಹೆಸರಿನ ಇನ್‌ಸ್ಟಾಗ್ರಾಮ್ ಖಾತೆ ಮೂಲಕ ಈ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ. ಜನರು ವೀಡಿಯೊವನ್ನು ತುಂಬಾ ಇಷ್ಟಪಡುತ್ತಿದ್ದಾರೆ. ಜೊತೆಗೆ ನಾಯಿಯ ಬಗ್ಗೆ ತಮ್ಮ ಪ್ರಶಂಸೆಯನ್ನು ಕೂಡ ವ್ಯಕ್ತಪಡಿಸುತ್ತಿದ್ದಾರೆ. 

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News