SHOCKING News: ಸೇತುವೆ ಕುಸಿದು ನದಿಗೆ ಉರುಳಿಬಿದ್ದ ರೈಲು..!

Train Derails into River: ನದಿಯ ಮೇಲಿನ ರೈಲ್ವೆ ಸೇತುವೆ ಕುಸಿದಿರುವ ಬಗ್ಗೆ ತನಿಖೆ ನಡೆಯುತ್ತಿದ್ದು, ಕಲುಷಿತಗೊಂಡ ನದಿ ನೀರು ಹೊಲಗಳಿಗೆ ಹೋಗದಂತೆ ಕಾಲುವೆಯಲ್ಲೇ ನಿಲ್ಲಿಸಲಾಗಿದೆ.

Written by - Puttaraj K Alur | Last Updated : Jun 25, 2023, 07:50 PM IST
  • ಅಮೆರಿಕದ ಕೊಲಂಬಸ್‌ನಲ್ಲಿ ಸೇತುವೆ ಕುಸಿದು ನದಿಗೆ ಉರುಳಿಬಿದ್ದ ಗೂಡ್ಸ್ ರೈಲು
  • ಬಿಸಿ ಡಾಂಬರು ಮತ್ತು ಗಂಧಕದಂತಹ ಅಪಾಯಕಾರಿ ಪದಾರ್ಥ ಸಾಗಿಸುತ್ತಿದ್ದ ಗೂಡ್ಸ್ ರೈಲು
  • ರೈಲು ಸಿಬ್ಬಂದಿ ಸುರಕ್ಷಿತವಾಗಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ
SHOCKING News: ಸೇತುವೆ ಕುಸಿದು ನದಿಗೆ ಉರುಳಿಬಿದ್ದ ರೈಲು..! title=
ನದಿಗೆ ಉರುಳಿಬಿದ್ದ ಗೂಡ್ಸ್ ರೈಲು!

ನವದೆಹಲಿ: ಅಮೆರಿಕದ ಕೊಲಂಬಸ್‌ನಲ್ಲಿ ಸೇತುವೆ ಕುಸಿದ ಪರಿಣಾಮ ಗೂಡ್ಸ್ ರೈಲೊಂದು ನದಿಗೆ ಉರುಳಿಬಿದ್ದಿರುವ ಘಟನೆ ನಡೆದಿದೆ. ನದಿಯ ಮೇಲಿನ ಸೇತುವೆ ಇದ್ದಕ್ಕಿದ್ದಂತೆಯೇ ಕುಸಿದ ಪರಿಣಾಮ ಈ ರೈಲು ನದಿಗೆ ಬಿದ್ದಿದೆ.

ಗೂಡ್ಸ್ ರೈಲಿನಲ್ಲಿ ಬಿಸಿ ಡಾಂಬರು ಮತ್ತು ಗಂಧಕದಂತಹ ಅಪಾಯಕಾರಿ ಪದಾರ್ಥಗಳಿದ್ದವು ಎಂದು ವರದಿಯಾಗಿದೆ. ಘಟನೆ ಬಗ್ಗೆ ಮಾತನಾಡಿರುವ ಮೊಂಟಾನಾ ರೈಲ್ ಲಿಂಕ್ ವಕ್ತಾರ ಆಂಡಿ ಗಾರ್ಲ್ಯಾಂಡ್, ‘ಬಿಸಿ ಡಾಂಬರು, ಕರಗಿದ ಗಂಧಕವನ್ನು ಹೊತ್ತ ರೈಲು ನದಿಗೆ ಬಿದ್ದಿದೆ. ಹೀಗಾಗಿ ನದಿ ನೀರಿನ ಬಳಕೆಯನ್ನು ನಿಷೇಧಿಸಲಾಗಿದೆ. ರೈಲು ಸಿಬ್ಬಂದಿ ಸುರಕ್ಷಿತವಾಗಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲವೆಂದು ತಿಳಿಸಿದ್ದಾರೆ.

ಇದನ್ನೂ ಓದಿ: ಜಿ 20 ಅಧ್ಯಕ್ಷತೆಯಲ್ಲಿ ಭಾರತ ಅದ್ಭುತ ಕೆಲಸ ಮಾಡುತ್ತಿದೆ: ಯುಕೆ ಸಚಿವರ ಶ್ಲಾಘನೆ 

ಸೇತುವೆ ಕುಸಿತದಿಂದ ರಾಜ್ಯದ ಜನರಿಗೆ ಇಂಟರ್ನೆಟ್ ಸೇವೆಗಳನ್ನು ಒದಗಿಸುವ ಫೈಬರ್ ಆಪ್ಟಿಕ್ ಕೇಬಲ್ ಅನ್ನು ಸಹ ತೆಗೆದುಹಾಕಲಾಗಿದೆ ಎಂದು ಹೈಸ್ಪೀಡ್ ಪ್ರೊವೈಡರ್ ಗ್ಲೋಬಲ್ ನೆಟ್ ಹೇಳಿದೆ. ನದಿಯ ಮೇಲಿನ ರೈಲ್ವೆ ಸೇತುವೆ ಕುಸಿದಿರುವ ಬಗ್ಗೆ ತನಿಖೆ ನಡೆಯುತ್ತಿದ್ದು, ಕಲುಷಿತಗೊಂಡ ನದಿ ನೀರು ಹೊಲಗಳಿಗೆ ಹೋಗದಂತೆ ಕಾಲುವೆಯಲ್ಲೇ ನಿಲ್ಲಿಸಲಾಗಿದೆ.

ರೈಲು ಹಳಿತಪ್ಪಿ ಘಟನೆ ಸಂಭವಿಸಿದೆ: ಅಂತಾರಾಷ್ಟ್ರೀಯ ಮಾಧ್ಯಮಗಳ ವರದಿಗಳ ಪ್ರಕಾರ, ಮೊಂಟಾನಾದಲ್ಲಿ ರೈಲು ಹಳಿತಪ್ಪಿದ ಕಾರಣ ಯೆಲ್ಲೊಸ್ಟೋನ್ ನದಿಗೆ ಅಡ್ಡಲಾಗಿ ಕಟ್ಟಿದ ಸೇತುವೆ ಕುಸಿದಿದೆ. ಯೆಲ್ಲೊಸ್ಟೋನ್ ಕೌಂಟಿ ಡಿಸಾಸ್ಟರ್ ಮತ್ತು ಎಮರ್ಜೆನ್ಸಿ ಸೇವೆಗಳ ಪ್ರಕಾರ, ರೈಲು ಹಳಿತಪ್ಪಿದ ಘಟನೆ ಬೆಳಗ್ಗೆ 6 ಗಂಟೆ ವೇಳೆಗೆ ಸಂಭವಿಸಿದೆ. ರೈಲಿನ ಬಹುತೇಕ ಟ್ಯಾಂಕರ್‍ಗಳು ಹಾನಿಗೊಳಗಾಗಿವೆ ಮತ್ತು ಪೆಟ್ರೋಲಿಯಂ ಉತ್ಪನ್ನಗಳು ಸೋರಿಕೆಯಾಗುತ್ತಿವೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: Wagner Mutiny: ರಷ್ಯಾದಲ್ಲಿನ ವ್ಯಾಗ್ನರ್ ದಂಗೆಯ ಕುರಿತು ಅಮೆರಿಕಾಗೆ ಮೊದಲೇ ತಿಳಿದಿತ್ತು, ಯೆವೇನಿ ಪ್ರಿಗೋಝಿನ್ ಜೊತೆಗೆ ಸಿಕ್ರೆಟ್ ಒಪ್ಪಂದ?

ಘಟನೆ ಬಳಿಕ ಲ್ಲೊಸ್ಟೋನ್ ನದಿಯ ರೈಲು ಸೇತುವೆಯ ಸುತ್ತಲಿನ ಪ್ರದೇಶಗಳಿಂದ ದೂರವಿರುವಂತೆ ಜನರಲ್ಲಿ ಮನವಿ ಮಾಡಲಾಗಿದೆ.  ಸ್ಥಳೀಯ ಮೀನುಗಾರಿಕೆ ಪ್ರವೇಶಗಳನ್ನು ಮುಚ್ಚಲಾಗುವುದು. ನೀರು ಸಂಸ್ಕರಣಾ ಘಟಕಗಳು, ನೀರಾವರಿ ಜಿಲ್ಲೆಗಳು ಮತ್ತು ಕೈಗಾರಿಕಾ ಕಂಪನಿಗಳು ಸೂಕ್ತ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುತ್ತಿವೆ ಎಂದು ಯೆಲ್ಲೊಸ್ಟೋನ್ ಕೌಂಟಿ ಶೆರಿಫ್ ಕಚೇರಿ ತಿಳಿಸಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News