US Shootout: ಡ್ಯಾನ್ಸ್ ಕ್ಲಬ್ ಮೇಲೆ ಗುಂಡಿನ ದಾಳಿ: 10 ಮಂದಿ ದಾರುಣ ಸಾವು; ಶಂಕಿತ ಆತ್ಮಹತ್ಯೆಗೆ ಶರಣು!

America California shootout: ದಾಳಿಕೋರ ಅರೆ-ಸ್ವಯಂಚಾಲಿತ ಶಸ್ತ್ರಾಸ್ತ್ರದಿಂದ ಏಕಾಏಕಿ ಗುಂಡು ಹಾರಿಸಿದ್ದಾನೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಶೂಟರ್‌ನ ವಿವರಣೆ ಪ್ರಾಥಮಿಕವಾಗಿದೆ ಎಂದು ಪೊಲೀಸರು ಎಚ್ಚರಿಸಿದ್ದಾರೆ. ಯಾವುದೇ ಹೆಚ್ಚಿನ ಗುರುತು ವಿವರಗಳು ಲಭ್ಯವಾಗಿಲ್ಲ. ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ ತುಣುಕುಗಳಲ್ಲಿ ಆಂಬುಲೆನ್ಸ್ ಬಳಿಗೆ ಗಾಯಾಳುಗಳನ್ನು ಸ್ಟ್ರೆಚರ್‌ಗಳಲ್ಲಿ ಮೂಲಕ ಕೊಂಡೊಯ್ಯುತ್ತಿರುವುದನ್ನು ಕಾಣಬಹುದು.

Written by - Bhavishya Shetty | Last Updated : Jan 23, 2023, 08:47 AM IST
    • ಹತ್ತು ಮಂದಿಯನ್ನು ಕೊಂದ ದಾಳಿಕೋರ ಬಳಿಕ ಗುಂಡು ಹಾರಿಸಿಕೊಂಡು ಆತ್ಮಹತ್ಯೆ
    • ಲಾಸ್ ಏಂಜಲೀಸ್‌ನ ಪೂರ್ವಕ್ಕೆ 12 ಕಿಲೋಮೀಟರ್ ದೂರದಲ್ಲಿರುವ ಮಾಂಟೆರಿ ಪಾರ್ಕ್‌ನಲ್ಲಿ ಈ ಗುಂಡಿನ ದಾಳಿ ನಡೆದಿದೆ
    • ದಾಳಿಕೋರ ಅರೆ-ಸ್ವಯಂಚಾಲಿತ ಶಸ್ತ್ರಾಸ್ತ್ರದಿಂದ ಏಕಾಏಕಿ ಗುಂಡು ಹಾರಿಸಿದ್ದಾನೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ
US Shootout: ಡ್ಯಾನ್ಸ್ ಕ್ಲಬ್ ಮೇಲೆ ಗುಂಡಿನ ದಾಳಿ: 10 ಮಂದಿ ದಾರುಣ ಸಾವು; ಶಂಕಿತ ಆತ್ಮಹತ್ಯೆಗೆ ಶರಣು!  title=
US shooting

America California shootout: ಅಮೆರಿಕದ ಕ್ಯಾಲಿಫೋರ್ನಿಯಾದ ಡ್ಯಾನ್ಸ್ ಕ್ಲಬ್ ಒಂದರಲ್ಲಿ ಮನಬಂದಂತೆ ಗುಂಡಿನ ದಾಳಿ ನಡೆಸಿ, ಹತ್ತು ಮಂದಿಯನ್ನು ಕೊಂದ ದಾಳಿಕೋರ ಬಳಿಕ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಲಾಸ್ ಏಂಜಲೀಸ್ ಕೌಂಟಿ ಶೆರಿಫ್ ಹೇಳಿದ್ದಾರೆ, ಶಂಕಿತನನ್ನು ಹು ಕ್ಯಾನ್ ಟ್ರಾನ್ (72) ಎಂದು ಗುರುತಿಸಲಾಗಿದೆ.

ಲಾಸ್ ಏಂಜಲೀಸ್‌ನ ಪೂರ್ವಕ್ಕೆ 12 ಕಿಲೋಮೀಟರ್ ದೂರದಲ್ಲಿರುವ ಮಾಂಟೆರಿ ಪಾರ್ಕ್‌ನಲ್ಲಿ ಈ ಗುಂಡಿನ ದಾಳಿ ನಡೆದಿದೆ. ಚೀನಾದ ಹೊಸ ವರ್ಷಾಚರಣೆಯನ್ನು ಇಲ್ಲಿ ಆಯೋಜಿಸಲಾಗುತ್ತಿದ್ದು, ಸಾವಿರಾರು ಜನರು ಜಮಾಯಿಸಿದ್ದರು.

ಇದನ್ನೂ ಓದಿ: Viral Video: ಡ್ರಗ್ ಸೇವಿಸಲ್ಲ ಅಂದಿದ್ದಕ್ಕೆ ವಿದ್ಯಾರ್ಥಿಯ ಜುಟ್ಟು ಹಿಡಿದು ನೆಲಕ್ಕೆ ಬಡಿದ ಸಹಪಾಠಿ: ಕ್ಲಾಸ್ ರೂಂ ವಿಡಿಯೋ ವೈರಲ್

ದಾಳಿಕೋರ ಅರೆ-ಸ್ವಯಂಚಾಲಿತ ಶಸ್ತ್ರಾಸ್ತ್ರದಿಂದ ಏಕಾಏಕಿ ಗುಂಡು ಹಾರಿಸಿದ್ದಾನೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಶೂಟರ್‌ನ ವಿವರಣೆ ಪ್ರಾಥಮಿಕವಾಗಿದೆ ಎಂದು ಪೊಲೀಸರು ಎಚ್ಚರಿಸಿದ್ದಾರೆ. ಯಾವುದೇ ಹೆಚ್ಚಿನ ಗುರುತು ವಿವರಗಳು ಲಭ್ಯವಾಗಿಲ್ಲ. ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ ತುಣುಕುಗಳಲ್ಲಿ ಆಂಬುಲೆನ್ಸ್ ಬಳಿಗೆ ಗಾಯಾಳುಗಳನ್ನು ಸ್ಟ್ರೆಚರ್‌ಗಳಲ್ಲಿ ಮೂಲಕ ಕೊಂಡೊಯ್ಯುತ್ತಿರುವುದನ್ನು ಕಾಣಬಹುದು.

ಅಧ್ಯಕ್ಷ ಬಿಡೆನ್ ಟ್ವೀಟ್:

ಘಟನೆಯ ನಂತರ, ಯುಎಸ್ ಅಧ್ಯಕ್ಷ ಜೋ ಬಿಡೆನ್ ಅವರು ಮತ್ತು ಅವರ ಪತ್ನಿ ಜಿಲ್ ಅವರು ಟ್ವೀಟ್ ಮಾಡಿದ್ದು, "ಕಳೆದ ರಾತ್ರಿ ಮಾಂಟೆರಿ ಪಾರ್ಕ್‌ನಲ್ಲಿ ನಡೆದ ಮಾರಣಾಂತಿಕ ಸಾಮೂಹಿಕ ಗುಂಡಿನ ದಾಳಿಯಲ್ಲಿ ಸಾವನ್ನಪ್ಪಿದ ಜನರ ಆತ್ಮಕ್ಕೆ ಶಾಂತಿ ಕೋರುತ್ತೇನೆ. ಗಾಯಗೊಂಡವರು ಶೀಘ್ರ ಚೇತರಿಸಿಕೊಳ್ಳಲಿ. ನಾನು ಈ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇನೆ" ಎಂದು ಹೇಳಿದ್ದಾರೆ. "

ಮೇ 24 ರಂದು ಟೆಕ್ಸಾಸ್‌ನ ಉವಾಲ್ಡೆಯ ಪ್ರಾಥಮಿಕ ಶಾಲೆಯಲ್ಲಿ 22 ಜನರು ಸಾವನ್ನಪ್ಪಿದ ನಂತರ ಯುಎಸ್‌ನಲ್ಲಿ ನಡೆದ ಅತ್ಯಂತ ಭೀಕರ ಗುಂಡಿನ ದಾಳಿಯಾಗಿದೆ.

ಇದನ್ನೂ ಓದಿ: ಕ್ರಿಸ್ಟಿಯಾನೋ ರೊನಾಲ್ಡೊಗೆ ಅಡುಗೆ ಕೆಲಸದವರು ಬೇಕಾಗಿದ್ದಾರೆ..! ಸ್ಯಾಲರಿ ಕೇಳಿದ್ರೆ ಬೆಚ್ಚಿ ಬಿಳ್ತೀರಾ

ಅಮೆರಿಕದಲ್ಲಿ ಬಂದೂಕು ಹಿಂಸೆ ದೊಡ್ಡ ಸಮಸ್ಯೆ:

ಆರ್ಕೈವ್ ವೆಬ್‌ಸೈಟ್‌ನ ಪ್ರಕಾರ, ಕಳೆದ ವರ್ಷ 647 ಸಾಮೂಹಿಕ ಗುಂಡಿನ ದಾಳಿಗಳು ನಡೆದಿವೆ. ಅದೆಷ್ಟೋ ಜನರು ಇದರಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News