ಅಫ್ಘಾನಿಸ್ತಾನ: ಕಾಬೂಲ್ ವಿಮಾನ ನಿಲ್ದಾಣದಲ್ಲಿ ಪ್ರಬಲ ಸ್ಫೋಟ, 14 ಮರಣ

ಅಫ್ಘಾನಿಸ್ತಾನದ ಕಾಬೂಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪ ಆತ್ಮಹತ್ಯಾ ದಾಳಿ ನಡೆದಿದೆ.  

Last Updated : Jul 23, 2018, 09:18 AM IST
ಅಫ್ಘಾನಿಸ್ತಾನ: ಕಾಬೂಲ್ ವಿಮಾನ ನಿಲ್ದಾಣದಲ್ಲಿ ಪ್ರಬಲ ಸ್ಫೋಟ, 14 ಮರಣ title=
Pic: Reuters

ಕಾಬೂಲ್: ಅಫ್ಘಾನಿಸ್ತಾನದ ಉಪಾಧ್ಯಕ್ಷ ಅಬ್ದುಲ್ ರಶೀದ್ ದೊಸ್ತಮ್ ಅವರು ಪದಚ್ಯುತಿಗೊಂಡ ಒಂದು ವರ್ಷದ ನಂತರ ಕಾಬೂಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪ ಆತ್ಮಹತ್ಯಾ ದಾಳಿ ನಡೆದಿದೆ. ಇದರಲ್ಲಿ 14 ಮಂದಿ ಮೃತಪಟ್ಟಿದ್ದಾರೆ ಮತ್ತು 60 ಮಂದಿ ಗಾಯಗೊಂಡಿದ್ದಾರೆ. 

ಕಾಬೂಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ  ಉಪಾಧ್ಯಕ್ಷ  ಅಬ್ದುಲ್ ರಶೀದ್ ದೋಸ್ತಮ್ ಆಗಮನದ ನಂತರ ಆತ್ಮಹತ್ಯಾ ಬಾಂಬರ್ ದಾಳಿ ನಡೆದಿದ್ದು, ಅಬ್ದುಲ್ ರಶೀದ್ ದೋಸ್ತಮ್  ಸ್ವಾಗತಿಸಲು  ಸರ್ಕಾರದ ಹಿರಿಯ ಅಧಿಕಾರಿಗಳು, ರಾಜಕೀಯ ನಾಯಕರು ಮತ್ತು ಅವರ ಬೆಂಬಲಿಗರು ಆಗಮಿಸಿದ್ದರು.  ಈ ಸಂದರ್ಭದಲ್ಲಿ ದಾಳಿ ನಡೆದಿದೆ. ಮೊದಲ ಬಾರಿಗೆ ಇಂತಹ ದಾಳಿ ನೋಡುತ್ತಿರುವುದಾಗಿ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಡೋಸ್ತಮ್ ವಕ್ತಾರ ಬಶೀರ್ ಅಹ್ಮದ್ ಟಿಯಾಂಗ್ ಮಾತನಾಡುತ್ತಾ, ದೋಸ್ತಮ್ನ ಬೆಂಗಾವಲು ಸಮಯದಲ್ಲಿ ಸ್ಫೋಟದ ಶಬ್ದವು ಕೇಳಿಬಂತು ಎಂದು ಹೇಳಿದರು. ಈ ದಾಳಿಯಲ್ಲಿ 14 ಜನರು ಮೃತಪಟ್ಟಿದ್ದಾರೆ ಮತ್ತು 60 ಮಂದಿ ಗಾಯಗೊಂಡಿದ್ದಾರೆ ಎಂದು ಕಾಬೂಲ್ ಪೊಲೀಸ್ ವಕ್ತಾರ ಹಶ್ಮಾತ್ ಸ್ನಾನಿಕ್ಜೈ ಹೇಳಿದ್ದಾರೆ.
 

Trending News