ಶುಕ್ರವಾರದ ಪ್ರಾರ್ಥನೆ ನಂತರ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸರ್ಕಾರ ರಚನೆ

ತಾಲಿಬಾನ್ ಕಾಬೂಲ್ ನಲ್ಲಿ ಇರಾನ್ ರೀತಿಯಲ್ಲಿ ಹೊಸ ಸರ್ಕಾರ ರಚನೆಯನ್ನು ಘೋಷಿಸಲು ಸಜ್ಜಾಗಿದೆ.ತಾಲಿಬಾನ್‌ನ ಅತಿದೊಡ್ಡ ನಾಯಕ ಮುಲ್ಲಾ ಹೆಬತುಲ್ಲಾ ಅಖುಂಡಜಾದನನ್ನು ಅಫ್ಘಾನಿಸ್ತಾನದ ಸರ್ವೋಚ್ಚ ನಾಯಕನಾಗಲಿದ್ದಾರೆ ಎಂದು ತಿಳಿದುಬಂದಿದೆ. 

Written by - Zee Kannada News Desk | Last Updated : Sep 2, 2021, 11:13 PM IST
  • ತಾಲಿಬಾನ್ ಕಾಬೂಲ್ ನಲ್ಲಿ ಇರಾನ್ ರೀತಿಯಲ್ಲಿ ಹೊಸ ಸರ್ಕಾರ ರಚನೆಯನ್ನು ಘೋಷಿಸಲು ಸಜ್ಜಾಗಿದೆ.
  • ತಾಲಿಬಾನ್‌ನ ಅತಿದೊಡ್ಡ ನಾಯಕ ಮುಲ್ಲಾ ಹೆಬತುಲ್ಲಾ ಅಖುಂಡಜಾದನನ್ನು ಅಫ್ಘಾನಿಸ್ತಾನದ ಸರ್ವೋಚ್ಚ ನಾಯಕನಾಗಲಿದ್ದಾರೆ ಎಂದು ತಿಳಿದುಬಂದಿದೆ.
ಶುಕ್ರವಾರದ ಪ್ರಾರ್ಥನೆ ನಂತರ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸರ್ಕಾರ ರಚನೆ  title=
file photo

ನವದೆಹಲಿ: ತಾಲಿಬಾನ್ ಕಾಬೂಲ್ ನಲ್ಲಿ ಇರಾನ್ ರೀತಿಯಲ್ಲಿ ಹೊಸ ಸರ್ಕಾರ ರಚನೆಯನ್ನು ಘೋಷಿಸಲು ಸಜ್ಜಾಗಿದೆ.ತಾಲಿಬಾನ್‌ನ ಅತಿದೊಡ್ಡ ನಾಯಕ ಮುಲ್ಲಾ ಹೆಬತುಲ್ಲಾ ಅಖುಂಡಜಾದನನ್ನು ಅಫ್ಘಾನಿಸ್ತಾನದ ಸರ್ವೋಚ್ಚ ನಾಯಕನಾಗಲಿದ್ದಾರೆ ಎಂದು ತಿಳಿದುಬಂದಿದೆ. 

ಈ ಕುರಿತಾಗಿ ಪ್ರತಿಕ್ರಿಯಿಸಿರುವ ತಾಲಿಬಾನ್ (Taliban) ಮಾಹಿತಿ ಮತ್ತು ಸಂಸ್ಕೃತಿ ಆಯೋಗದ ಹಿರಿಯ ಅಧಿಕಾರಿ ಮುಫ್ತಿ ಇನಾಮುಲ್ಲಾ ಸಮಂಗಾನಿ, "ಹೊಸ ಸರ್ಕಾರ ರಚನೆಯ ಮಾತುಕತೆಗಳು ಬಹುತೇಕ ಅಂತಿಮ ಹಂತದಲ್ಲಿದೆ ಮತ್ತು ಕ್ಯಾಬಿನೆಟ್ ಬಗ್ಗೆಯೂ ಚರ್ಚಿಸಲಾಗಿದೆ" ಎಂದು ಹೇಳಿದರು.

ಇದನ್ನೂ ಓದಿ: ಅಫ್ಘಾನಿಸ್ತಾನದ ಪಂಜಶೀರ ಪ್ರಾಂತ್ಯಕ್ಕೆ ನುಗ್ಗಿದ ತಾಲಿಬಾನ್, 350 ತಾಲಿಬಾನಿಗಳನ್ನು ಹೊಡೆದುರುಳಿಸಿರುವುದಾಗಿ ಹೇಳಿದ Northern Alliance

ಮುಂದಿನ ಮೂರು ದಿನಗಳಲ್ಲಿ ಕಾಬೂಲ್‌ನಲ್ಲಿ ಹೊಸ ಸರ್ಕಾರ ರಚಿಸಲು ಗುಂಪು ಸಂಪೂರ್ಣವಾಗಿ ಸಿದ್ಧವಾಗಿದೆ ಎಂದು ಇನಾಮುಲ್ಲಾ ಹೇಳಿದರು. ಮಾಧ್ಯಮ ವರದಿಗಳ ಪ್ರಕಾರ, ತಾಲಿಬಾನ್ ಶುಕ್ರವಾರದ ಪ್ರಾರ್ಥನೆಯ ನಂತರ ಅಫ್ಘಾನಿಸ್ತಾನದಲ್ಲಿ ಹೊಸ ಸರ್ಕಾರವನ್ನು ರಚಿಸಲಿದೆ.

ಹೊಸ ಸರ್ಕಾರದಲ್ಲಿ, 60 ವರ್ಷದ ಮುಲ್ಲಾ ಅಖುಂಡಜಾದ ಅವರು ತಾಲಿಬಾನ್ ಸರ್ಕಾರದ ಸರ್ವೋಚ್ಚ ನಾಯಕರಾಗಿರುತ್ತಾರೆ. ಈ ವ್ಯವಸ್ಥೆಯನ್ನು ಇರಾನ್‌ನಲ್ಲಿ ನಾಯಕತ್ವದ ಮಾದರಿಯಲ್ಲಿ ಮಾಡಲಾಗುತ್ತದೆ, ಅಲ್ಲಿ ಸರ್ವೋಚ್ಚ ನಾಯಕ ದೇಶದ ಅತಿದೊಡ್ಡ ರಾಜಕೀಯ ಮತ್ತು ಧಾರ್ಮಿಕ ಪ್ರಾಧಿಕಾರವಾಗಿದೆ. ಅವರ ಸ್ಥಾನವು ಅಧ್ಯಕ್ಷ ಸ್ಥಾನಕ್ಕಿಂತ ಮೇಲಿರುತ್ತದೆ ಮತ್ತು ಅವರು ಸೇನೆ, ಸರ್ಕಾರ ಮತ್ತು ನ್ಯಾಯಾಂಗದ ಮುಖ್ಯಸ್ಥರನ್ನು ನೇಮಿಸುತ್ತಾರೆ. ದೇಶದ ರಾಜಕೀಯ, ಧಾರ್ಮಿಕ ಮತ್ತು ಸೇನಾ ವ್ಯವಹಾರಗಳಲ್ಲಿ ಸರ್ವೋಚ್ಚ ನಾಯಕನ ನಿರ್ಧಾರವೇ ಅಂತಿಮ.

ಇದನ್ನೂ ಓದಿ: Taliban On Kashmir: ಕಾಶ್ಮೀರದ ಕುರಿತು ತಾಲಿಬಾನ್ ಹೇಳಿಕೆ, ಪಾಕಿಸ್ತಾನಕ್ಕೆ ದೊಡ್ಡ ಹೊಡೆತ

"ಮುಲ್ಲಾ ಅಖುಂಡಜಾದ ಅವರು ಸರ್ಕಾರದ ಸರ್ವೋಚ್ಚ ನಾಯಕರಾಗುತ್ತಾರೆ ಮತ್ತು ಅದರ ಬಗ್ಗೆ ಯಾವುದೇ ಪ್ರಶ್ನೆಯಿಲ್ಲ" ಎಂದು ಸಮಂಗನಿ ಹೇಳಿದರು. ಮುಲ್ಲಾ ಅಖುಂಡಜಾದ ತಾಲಿಬಾನ್ ನ ಅತಿದೊಡ್ಡ ಧಾರ್ಮಿಕ ಮುಖಂಡನಾಗಿದ್ದು, ಕಳೆದ 15 ವರ್ಷಗಳಿಂದ ಬಲೂಚಿಸ್ತಾನ ಪ್ರಾಂತ್ಯದ ಕಚ್ಲಾಕ್ ಪ್ರದೇಶದ ಮಸೀದಿಯಲ್ಲಿ ಕೆಲಸ ಮಾಡುತ್ತಿದ್ದಾರೆ.

ಇದನ್ನೂ ಓದಿ: ಇಂದು ಅಥವಾ ನಾಳೆ ಅಫ್ಘಾನಿಸ್ತಾನದಲ್ಲಿ ‘ತಾಲಿಬಾನ್ 2.0’ ಹೊಸ ಸರ್ಕಾರ..!

ಹೊಸ ಸರ್ಕಾರದ ಅಡಿಯಲ್ಲಿ, ರಾಜ್ಯಪಾಲರು ಪ್ರಾಂತ್ಯಗಳ ಮುಖ್ಯಸ್ಥರಾಗಿರುತ್ತಾರೆ ಮತ್ತು 'ಜಿಲ್ಲಾ ಗವರ್ನರ್' ಅವರ ಜಿಲ್ಲೆಯ ಉಸ್ತುವಾರಿ ವಹಿಸುತ್ತಾರೆ ಎಂದು ಸಮಂಗಾನಿ ಹೇಳಿದರು. ತಾಲಿಬಾನ್ ಈಗಾಗಲೇ ಪ್ರಾಂತ್ಯಗಳು ಮತ್ತು ಜಿಲ್ಲೆಗಳಿಗೆ ರಾಜ್ಯಪಾಲರು, ಪೊಲೀಸ್ ಮುಖ್ಯಸ್ಥರು ಮತ್ತು ಪೊಲೀಸ್ ಕಮಾಂಡರ್‌ಗಳನ್ನು ನೇಮಿಸಿದೆ. ಹೊಸ ಆಡಳಿತ ವ್ಯವಸ್ಥೆಯ ಹೆಸರು, ರಾಷ್ಟ್ರ ಧ್ವಜ ಮತ್ತು ರಾಷ್ಟ್ರಗೀತೆ ಇನ್ನೂ ನಿರ್ಧಾರವಾಗಿಲ್ಲ. ಏತನ್ಮಧ್ಯೆ, ಹೊಸ ಸರ್ಕಾರವು ಎಲ್ಲಾ ಅಫ್ಘಾನ್ ಬುಡಕಟ್ಟುಗಳು ಮತ್ತು ಮಹಿಳೆಯರನ್ನು ಒಳಗೊಂಡಿರುತ್ತದೆ ಎಂದು ದೋಹಾದಲ್ಲಿರುವ ತಾಲಿಬಾನ್‌ನ ರಾಜಕೀಯ ಕಚೇರಿಯ ಉಪ ನಾಯಕ ಶೇರ್ ಮೊಹಮ್ಮದ್ ಅಬ್ಬಾಸ್ ಸ್ಟಾನಿಕ್‌ಜಾಯ್ ಗುರುವಾರ ವಿದೇಶಿ ಮಾಧ್ಯಮ ಚಾನೆಲ್‌ಗಳಿಗೆ ತಿಳಿಸಿದರು.

"ಕಳೆದ 20 ವರ್ಷಗಳಲ್ಲಿ ಅಫ್ಘಾನಿಸ್ತಾನದಲ್ಲಿ ಹಿಂದಿನ ಸರ್ಕಾರಗಳಲ್ಲಿ ಭಾಗಿಯಾಗಿದ್ದ ಯಾರಿಗೂ ಹೊಸ ತಾಲಿಬಾನ್ ಆಡಳಿತದಲ್ಲಿ ಸ್ಥಾನ ಸಿಗುವುದಿಲ್ಲ ಎಂದು  ಮುಫ್ತಿ ಇನಾಮುಲ್ಲಾ ಸಮಂಗಾನಿ ಹೇಳಿದರು

ತಾಲಿಬಾನ್ ಯುರೋಪಿಯನ್ ಯೂನಿಯನ್, ಯುಎಸ್ ಮತ್ತು ಭಾರತದೊಂದಿಗೆ ಸೌಹಾರ್ದಯುತ ಸಂಬಂಧವನ್ನು ಬಯಸುತ್ತದೆ ಮತ್ತು ಇದಕ್ಕಾಗಿ, ದೋಹಾದಲ್ಲಿರುವ ತಾಲಿಬಾನ್ ರಾಜಕೀಯ ಕಚೇರಿ ವಿವಿಧ ದೇಶಗಳೊಂದಿಗೆ ಸಂಪರ್ಕದಲ್ಲಿದೆ ಎಂದು ಸಮಂಗಾನಿ ಹೇಳಿದರು. ಮುಂದಿನ 48 ಗಂಟೆಗಳಲ್ಲಿ ಹಮೀದ್ ಕರ್ಜೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಆರಂಭಿಸುವ ಯೋಜನೆಯೂ ಇದೆ ಎನ್ನಲಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

Trending News