ವಾಷಿಂಗ್ಟನ್: ಮೆಸೇಜಿಂಗ್ ಅಪ್ಲಿಕೇಶನ್ ವೀಚಾಟ್ (WeChat) ಮತ್ತು ವೀಡಿಯೊ ಹಂಚಿಕೆ ಅಪ್ಲಿಕೇಶನ್ ಟಿಕ್‌ಟಾಕ್(TikTok) ವಿರುದ್ಧ ಅಮೇರಿಕಾ ಕೈಗೊಂಡ ಕಾಮದ ಬಳಿಕ ಬೀಜಿಂಗ್ ತೀವ್ರ ಕಳವಳ ವ್ಯಕ್ತಪಡಿಸಿದ್ದು , ಯುಎಸ್ ದಮನಕಾರಿ ಕ್ರಮ ಕೈಗೊಳ್ಳುತ್ತಿದೆ ಎಂದು ಚೀನಾ ಆರೋಪಿಸಿದೆ. ಈ ಕುರಿತು ಶುಕ್ರವಾರ ಬೆದರಿಕೆ ನೀಡಿರುವ ಟಿಕ್ ಟಾಕ್ , ಟ್ರಂಪ್ ಜಾರಿಗೊಳಿಸಿರುವ ಎಕ್ಷಿಕ್ಯೂಟಿವ್ ಆದೇಶವನ್ನು ಅಮೆರಿಕಾದ ನ್ಯಾಯಾಲಯದಲ್ಲಿ ಪ್ರಶ್ನಿಸಲಾಗುವುದು. ಟ್ರಂಪ್ ಸರ್ಕಾರ ಜಾರಿಗೊಳಿಸಿರುವ ಆದೇಶದಲ್ಲಿ ಮುಂದಿನ 45 ದಿನಗಳ ಕಾಲ ನಿಷೇಧಿಸಲಾಗುವುದು ಹಾಗೂ ಅಮೆರಿಕಾದಲ್ಲಿರುವ ಕಾನೂನಿನ ಪ್ರಕಾರವೇ ಅದನ್ನು ಪುನರಾರಂಭಿಸಲು ಅನುಮತಿ ನೀಡಲಾಗುವುದು ಎಂಬುದನ್ನು ಸ್ಪಷ್ಟಪಡಿಸಲಾಗಿದೆ.
ಚೀನಾ ಸರ್ಕಾರದ ಪ್ರಕಾರ, ಟ್ರಂಪ್ ಆಡಳಿತವು ತನ್ನ ಅನಿಯಂತ್ರಿತ ಮನೋಭಾವದಿಂದ ಕಾನೂನುಬದ್ಧ ಚಟುವಟಿಕೆಗಳನ್ನು ನಿಗ್ರಹಿಸಲು ರಾಜಕೀಯ ತಂತ್ರಗಳನ್ನು ಬಳಸುತ್ತಿದೆ. ಅಮೇರಿಕನ್ ಅಧ್ಯಕ್ಷರಿಂದ ಬಂದಿರುವ ಪ್ರಸ್ತುತ ಆದೇಶದ ಬಳಿಕ ಚೀನಾ ತನ್ನ ಪ್ರತಿಕ್ರಿಯೆಯಲ್ಲಿ, ಸ್ವರಕ್ಷಣೆಗಾಗಿ ಕಾನೂನು ಮಾರ್ಗಗಳನ್ನು ಆಶ್ರಯಿಸುವ ಬಗ್ಗೆ ಹೇಳಿಕೊಳ್ಳಲಾಗಿದೆ.
ಇನ್ನೊಂದೆಡೆ ಅಮೇರಿಕಾದ ರಾಷ್ಟ್ರಪತಿ ಡೊನಾಲ್ಡ್ ಟ್ರಂಪ್, ಟಿಕ್ ಟಾಕ್ ಬಳಕೆದಾರರ ಮಾಹಿತಿಯನ್ನು ಒಂದು ಸ್ವಯಂಚಾಲಿತ ಸಿಸ್ಟಮ್ ಮೂಲಕ ಕಲೆಹಾಕುತ್ತದೆ. ಈ ಮಾಹಿತಿಗಳಲ್ಲಿ ಲೋಕೇಶನ್, ಬ್ರೌಸಿಂಗ್ ಜೊತೆಗೆ ಸರ್ಚ್ ಹಿಸ್ಟರಿಗಳಂತಹ ಮಾಹಿತಿ ಕೂಡ ಶಾಮೀಲಾಗಿದೆ ಎಂದು ಆರೋಪಿಸಿದ್ದರು. ಇದಕ್ಕೂ ಮೊದಲು ಡೊನಾಲ್ಡ್ ಟ್ರಂಪ್ ಟಿಕ್ ಟಾಕ್ ಗೆ 15 ಸೆಪ್ಟೆಂಬರ್ ವರೆಗೆ ಸಮಯಾವಕಾಶ ನೀಡಿದ್ದು, ಅಮೆರಿಕಾದ ಕಂಪನಿ ಮೈಕ್ರೋಸಾಫ್ಟ್ ಜೊತೆಗೆ ಸೆಲ್ ಡೀಲ್ ಪೂರ್ಣಗೊಳಿಸಲು ಸೂಚಿಸಿದೆ.