Viral Video: ಪಾಕಿಸ್ತಾನದ (Pakistan) ಪ್ರಧಾನಿ ಇಮ್ರಾನ್ ಖಾನ್ (Imran Khan) ಅವರು ತಮ್ಮ ದೇಶದ ಜನತೆಯನ್ನುದ್ದೇಶಿಸಿ ಮಾತನಾಡಿದ್ದು ವಿಶ್ವದ ಹಾಗೂ ಪಾಕಿಸ್ತಾನದಲ್ಲಿನ ಹಣದುಬ್ಬರದ (Inflation) ಕುರಿತು ಹಲವು ವಿಷಯಗಳನ್ನು ತಿಳಿಸಿದ್ದಾರೆ. ಈ ವೇಳೆ ಅವರು ಭಾರತದಲ್ಲಿನ ಪೆಟ್ರೋಲ್ ಬೆಲೆಯ ಕುರಿತು ಕೂಡ ಉಲ್ಲೇಖಿಸಿದ್ಧಾರೆ. ಈ ಸಂದರ್ಭದಲ್ಲಿ ಇತರ ದೇಶಗಳಲ್ಲಿನ ಪೆಟ್ರೋಲ್-ಡಿಸೇಲ್ ಬೆಲೆಯ (Petrol-Diesel Price) ಕುರಿತು ಮಾಹಿತಿ ನೀಡಿರುವ ಇಮ್ರಾನ್ ಪಾಕಿಸ್ತಾನದಲ್ಲಿನ ಪ್ರತಿ ಲೀಟರ್ ಪೆಟ್ರೋಲ್ ದರ ಕಡಿಮೆ ಇಟ್ಟಿರುವುದಕ್ಕಾಗಿ ಸಮರ್ಥಿಸಿಕೊಂಡಿದ್ದಾರೆ.
ಪಾಕ್ ನಲ್ಲಿ ನಡೆದ ರಾಲಿಯಯನ್ನುದ್ದೇಶಿಸಿ ಮಾತನಾಡಿದ ಇಮ್ರಾನ್ ಖಾನ್, 'ಪೆಟ್ರೋಲ್ ಬೆಲೆಗೆ ಸಂಬಂಧಿಸಿದಂತೆ ಭಾರತದಲ್ಲಿ (India) ಭಾರಿ ಕೋಲಾಹಲ ನಡೆಯುತ್ತಿದೆ. ಭಾರತದಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 250 ರೂ.ಗೆ ಏರಿದೆ. ಬಾಂಗ್ಲಾದೇಶದಲ್ಲಿ ಪೆಟ್ರೋಲ್ 200 ರೂ. ಆದರೆ ಪಾಕಿಸ್ತಾನದಲ್ಲಿ ಪೆಟ್ರೋಲ್ ಪ್ರತಿ ಲೀಟರ್‌ಗೆ 146 ರೂ ಇದೆ ಮತ್ತು ಇದು ಅತ್ಯಂತ ಕಡಿಮೆ ದರವಾಗಿದೆ' ಎಂದು ಹೇಳಿದ್ದಾರೆ.
ತಮ್ಮ ಸರ್ಕಾರ ಪೆಟ್ರೋಲ್ ಮೇಲಿನ ತೆರಿಗೆ ಮತ್ತು ಹಲವು ವಿಧದ ಸುಂಕಗಳನ್ನು ತೆಗೆದುಹಾಕಿರುವುದರಿಂದ ಪಾಕಿಸ್ತಾನದಲ್ಲಿ ಪೆಟ್ರೋಲ್ ಅಗ್ಗವಾಗಿದೆ ಎಂದು ಇಮ್ರಾನ್ ಖಾನ್ ಹೇಳಿದ್ದಾರೆ. ಹಣದುಬ್ಬರಕ್ಕೆ ಕೊರೊನಾ ವೈರಸ್(Coronavirus) ಕಾರಣ ಎಂದು ಇಮ್ರಾನ್ ಖಾನ್ ಹೇಳಿದ್ದಾರೆ. ಲಾಕ್‌ಡೌನ್ (Lockdown) ಕಾರಣ ಈ ಹಿಂದೆ ವಸ್ತುಗಳು ಅಗ್ಗವಾಗಿದ್ದವು ಮತ್ತು ಇದೀಗ ಇದ್ದಕ್ಕಿದ್ದಂತೆ ಮತ್ತೆ ದುಬಾರಿಯಾಗಿವೆ. ಇತರ ದೇಶಗಳಿಗೆ ಹೋಲಿಸಿದರೆ ಪಾಕಿಸ್ತಾನದಲ್ಲಿ ಹಣದುಬ್ಬರ ಕಡಿಮೆ ಇದೆ ಎಂದು ಇಮ್ರಾನ್ ತಮ್ಮ ದೇಶದ ಜನರಿಗೆ ದಾರಿತಪ್ಪಿಸುವ ಹೇಳಿಕೆಗಳನ್ನು ಹೇಳಿದ್ದಾರೆ.
" پاکستان میں پیٹرول کی قیمت دیگر تیل درآمدی ممالک کی نسبت سب سے کم ہے،"
وزیر اعظم عمران خان
اٹک میں زچہ بچہ ہسپتال کے سنگ بنیاد کی تقریب سے خطاب۔ pic.twitter.com/iV6jo7PMTr— Prime Minister's Office, Pakistan (@PakPMO) November 5, 2021
ಇದನ್ನೂ ಓದಿ-Pakistan: ಪಾಕಿಸ್ತಾನಕ್ಕೆ ಕಹಿಯಾದ ‘ಸಿಹಿ’, ಪೆಟ್ರೋಲ್ ಗಿಂತಲೂ ಸಕ್ಕರೆ ದುಬಾರಿ..!
ಭಾರತದಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 250 ರೂ ಇದೆ ಎಂದು ಇಮ್ರಾನ್ ಖಾನ್ ಹೇಳಿದ್ದಾರೆ. ಆದರೆ ಭಾರತದಲ್ಲಿ ಪೆಟ್ರೋಲ್ ಬೆಲೆಗಳು ಇದಕ್ಕಿಂತ ಕಡಿಮೆಯಾಗಿದೆ. ಭಾರತದಲ್ಲಿ ಪೆಟ್ರೋಲ್ ಬೆಲೆ 100 ರಿಂದ 120 ರೂ. ಗೆ ತಲುಪಿದ್ದವು. ಕೆಲ ದಿನಗಳ ಹಿಂದೆ ಕೇಂದ್ರ ಸರ್ಕಾರ ಕೂಡ ಬೆಲೆಯಲ್ಲಿ ಸ್ವಲ್ಪ ಕಡಿತ ಮಾಡಿದೆ. ಇಮ್ರಾನ್ ಖಾನ್ ಅವರ ಈ ಹೇಳಿಕೆಯನ್ನು ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ಗುರಿಯಾಗಿಸಲಾಗುತ್ತಿದೆ.
ಇದನ್ನೂ ಓದಿ-Afghanistan: ಇಸ್ಲಾಮಿಕ್ ಸ್ಟೇಟ್ ದಾಳಿಯಲ್ಲಿ ತಾಲಿಬಾನ್ ವಿಶೇಷ ಕಮಾಂಡರ್ ಹತ್ಯೆ, ಪಾಕಿಸ್ತಾನಕ್ಕೂ ದೊಡ್ಡ ಹೊಡೆತ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.