ನಾವು ಉತ್ತರ ಕೊರಿಯಾ 2018ರ ಚಳಿಗಾಲದ ಒಲಂಪಿಕ್ಸ್ನಲ್ಲಿ ಭಾಗವಹಿಸಬೇಕೆಂದು ಇಚ್ಚಿಸುತ್ತೇವೆ -ಡೊನಾಲ್ಡ್ ಟ್ರಂಪ್

    

Last Updated : Jan 7, 2018, 02:43 PM IST
ನಾವು ಉತ್ತರ ಕೊರಿಯಾ 2018ರ ಚಳಿಗಾಲದ ಒಲಂಪಿಕ್ಸ್ನಲ್ಲಿ ಭಾಗವಹಿಸಬೇಕೆಂದು ಇಚ್ಚಿಸುತ್ತೇವೆ -ಡೊನಾಲ್ಡ್ ಟ್ರಂಪ್  title=
Photo Courtesy: PTI

ವಾಷಿಂಗ್ಟನ್:  ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾನುವಾರದಂದು ಮಾತನಾಡುತ್ತಾ  ಉತ್ತರ ಕೊರಿಯಾವು  ದಕ್ಷಿಣ ಕೊರಿಯಾದಲ್ಲಿ ನಡೆಯಲಿರುವ ಚಳಿಗಾಲದ ಒಲಿಂಪಿಕ್ಸ್ನಲ್ಲಿ ಭಾಗಿಯಾಗಬೇಕೆಂದು ಬಯಸುತ್ತಿದ್ದು, ಆ ಮೂಲಕ  ಎರಡು ಕೊರಿಯಾ ಸೇರಿ ಒಲಂಪಿಕ್ಸ್ ನನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.  

ಮಂಗಳವಾರದಂದು ಮೊದಲ ಮಾತುಕತೆ ನಡೆಸಲು ಸಿದ್ದತೆ ನಡೆಸಿರುವ ಉತ್ತರ ಮತ್ತು ದಕ್ಷಿಣ ಕೊರಿಯಾ ದೇಶಗಳ  ಬಗ್ಗೆ ಟ್ರಂಪ್ ಈ ರೀತಿಯಾಗಿ ಪ್ರತಿಕ್ರಿಯಿಸಿದ್ದಾರೆ. ಅಲ್ಲದೆ  ಉತ್ತರ ಕೊರಿಯಾ ದೇಶದ ವಿರುದ್ದ ತೆಗೆದುಕೊಂಡ ಕಠಿಣ ಕ್ರಮಗಳಲ್ಲಿ ತಮ್ಮ ಪಾತ್ರವಿದೆ ಎಂದು ಅಮೇರಿಕಾದ ಅಧ್ಯಕ್ಷ ಟ್ರಂಪ್ ಹೇಳಿದ್ದಾರೆ 

ಉಭಯ ದೇಶಗಳು ಒಲಿಂಪಿಕ್ಸ್ನಲ್ಲಿ ಭಾಗವಹಿಸುವುದನ್ನು ಇಚ್ಚಿಸುತ್ತೇನೆ, ಆ ಮೂಲಕ ಬಹುಶಃ  ಎರಡು ದೇಶಗಳ ನಡುವಿನ ಭಿನ್ನಾಭಿಪ್ರಾಯ ಸರಿಹೋಗಬಹುದು , ಹಾಗಾಗಿ ನಾನು ಈ ಎರಡು ದೇಶಗಳ ನಡುವಿನ ಮಾತುಕತೆಗೆ ಬೆಂಬಲ ನೀಡಿದ್ದೇನೆ ಎಂದು ಮೇರಿಲ್ಯಾಂಡ್ನಲ್ಲಿರುವ ಅಧ್ಯಕ್ಷೀಯ ರೆಸಾರ್ಟ್ ಕ್ಯಾಂಪ್ ಡೇವಿಡ್ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಟ್ರಂಪ್ ತಿಳಿಸಿದ್ದಾರೆ.

 

Trending News