ತನ್ನ ಹೇಳಿಕೆಯಿಂದ ಉಲ್ಟಾ ಹೊಡೆದ WHO, Coronavirus ಕುರಿತು ಚೀನಾ ಮಾಹಿತಿಯೇ ನೀಡಿರಲಿಲ್ಲವಂತೆ...!

ಇದಕ್ಕೂ ಮೊದಲು ಚೀನಾ ಮೇಲೆ ಆರೋಪ ಮಾಡಿರುವ ಅಮೇರಿಕಾ, ಕೊರೊನಾ ವೈರಸ್ ಕುರಿತು ಚೀನಾ ಮಾಹಿತಿ ಮರೆಮಾಚಿದೆ ಎಂದು ಆರೋಪ ಮಾಡಿದ್ದು, ಸದ್ಯ WHO ನಿಂದ ಕೂಡ ಅಂತರ ಕಾಯ್ದುಕೊಂಡಿದೆ. ಆದೆ, ಇದೀಗ ವಿಶ್ವ ಆರೋಗ್ಯ ಸಂಸ್ಥೆ ತನ್ನ ಹೇಳಿಕೆಗೆ ಉಲ್ಟಾ ಹೊಡೆದಿದೆ.

Last Updated : Jul 5, 2020, 06:44 PM IST
ತನ್ನ ಹೇಳಿಕೆಯಿಂದ ಉಲ್ಟಾ ಹೊಡೆದ WHO, Coronavirus ಕುರಿತು ಚೀನಾ ಮಾಹಿತಿಯೇ ನೀಡಿರಲಿಲ್ಲವಂತೆ...! title=

ನವದೆಹಲಿ:ವಿಶ್ವ ಆರೋಗ್ಯ ಸಂಸ್ಥೆ ಇದೀಗ ತಾನು ಈ ಮೊದಲು ಚೀನಾ ಹಾಗೂ ಕೊರೊನಾ ವೈರಸ್ ಕುರಿತು ನೀಡಿರುವ ಹೇಳಿಕೆಯಿಂದ ಹಿಂದೆ ಸರೆದಿದೆ. ಕೊವಿಡ್ 19 ಮಹಾಮಾರಿ ಬೆಳಕಿಗೆ ಬರುತ್ತಲೇ ಈ ಕುರಿತು ಹೇಳಿಕೆ ನೀಡಿದ್ದ ವಿಶ್ವ ಆರೋಗ್ಯ ಸಂಸ್ಥೆ, ಚೀನಾ ವಿಶ್ವಸಂಸ್ಥೆಗೆ ಈ ಕುರಿತು ಮಾಹಿತಿ ನೀಡಿದೆ ಎಂದು ಹೇಳಿತ್ತು. ಆದರೆ, ಇದೀಗ WHO ತನ್ನ ಈ ಹೇಳಿಕೆಯಿಂದ ಹಿಂದೆ ಸರೆದಿದೆ. ಅಮೆರ್ಕಾದ ವಾರಪತ್ರಿಕೆ 'ವಾಶಿಂಗ್ಟನ್ ಎಕ್ಸಾಮಿನರ್'ನಲ್ಲಿ ಪ್ರಕಟಗೊಂಡ ಒಂದು ವರದಿಯ ಪ್ರಕಾರ WHO ತನ್ನ ವೆಬ್ಸೈಟ್ ನಿಂದ ಈ ಕುರಿತಾದ ಮಾಹಿತಿಯನ್ನು ತೆಗೆದುಹಾಕಿದ್ದು, ಮಾಹಿತಿಯಲ್ಲಿ ಚೀನಾ ವುಹಾನ್ ನಲ್ಲಿನ ಕೊರೊನಾ ವೈರಸ್ ಪ್ರಕರಣಗಳ ಕುರಿತು ಉಲ್ಲೇಖಿಸಿತ್ತು ಎಂದು ಹೇಳಿತ್ತು.

ವರದಿಗಳ ಪ್ರಕಾರ ವೆಬ್ ಸೈಟ್ ನಲ್ಲಿನ 'ಟೈಮ್ ಲೈನ್ ಆಫ್ WHO'S ರೆಸ್ಪಾನ್ಸ್ ಟು ಕೊವಿಡ್-19' ಅನ್ನು ಗೌಪ್ಯವಾಗಿ ಅಪ್ಡೇಟ್ ಮಾಡಲಾಗಿದ್ದು, ಹೊಸ ಮಾಹಿತಿಯಲ್ಲಿ 'ಜನರಿಗೆ ಮಾಹಿತಿ ಇದ್ದರೂ ಕೂಡ ಚೀನಾ WHOಗೆ ವುಹಾನ್ ನಲ್ಲಿ ಹರಡಿದ ಮಹಾಮಾರಿಯ ಕುರಿತು ಮಾಹಿತಿ ನೀಡಿಲ್ಲ' ಎಂದು ಹೇಳಲಾಗಿದೆ.

ಇದಕ್ಕೂ ಮೊದಲು ಡಿಸೆಂಬರ್ 31, 2019 ರಲ್ಲಿ ಈ ಟೈಮ್ ಲೈನ್ ನಲ್ಲಿ ಬರೆದುಕೊಂಡಿದ್ದ WHO, 'ಚೀನಾದ ಮುನಿಸಿಪಲ್ ಹೆಲ್ತ್ ಕಮಿಷನರ್ ವುಹಾನ್ ನಲ್ಲಿ ಕೊರೊನಾ ಪ್ರಕರಣಗಳಿರುವ ಕುರಿತು ಮಾಹಿತಿ ನೀಡಿದ್ದರು. ಆದರೆ, ನಂತರ ಕೊರೊನಾ ವೈರಸ್ ಅನ್ನು ಪತ್ತೆಹಚ್ಚಲಾಯಿತು' ಎಂದು ಬರೆದಿತ್ತು. ಆದರೆ, ಇದೀಗ WHO 'ಚೀನಾದ ಅಧಿಕಾರಿಯೊಬ್ಬರು ಅಲ್ಲಿನ ಮಾಧ್ಯಮಗಳಲ್ಲಿ ಬಂದ ವರದಿಯೊಂದರ ಪ್ರಕಾರ ಈ ಕುರಿತು ವರದಿ ನೀಡಿದ್ದರು' ಎಂದಿದೆ.

ಇಂದು ವಿಶ್ವಾದ್ಯಂತ ಸುಮಾರು 10,992,462 ಜನರನ್ನು ಈ ಮಾರಕ ವೈರಸ್ ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಇದರಲ್ಲಿ ಸುಮಾರು 6,140,758 ಜನರು ಗುಣಮುಖರಾಗಿ ತಮ್ಮ ತಮ್ಮ ಮನೆಗಳಿಗೆ ತೆರಳಿದ್ದರೆ, 524,039 ಜನರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಈ ಮಾರಕ ವೈರಸ್ ದಾಳಿಗೆ ಅತಿ ಹೆಚ್ಚು ತುತ್ತಾಗಿರುವ ದೇಶ ಅಂದರೆ ಅದು ಅಮೇರಿಕಾ. ಈ ದೇಶದಲ್ಲಿ ಸುಮಾರು 2,836,875ಜನರು ಈ ಮಾರಕ ಸೋಂಕಿಗೆ ಗುರಿಯಾಗಿದ್ದರು, ಸುಮಾರು 131,477 ಜನ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿ ಬ್ರೆಜಿಲ್ ಇದ್ದು, ಬ್ರೆಜಿಲ್ ನಲ್ಲಿ 1,501,353 ಪ್ರಕರಣಗಳಿದ್ದರೆ,  61, 990 ಜನರು ಬಲಿಯಾಗಿದ್ದಾರೆ. ರಷ್ಯಾದಲ್ಲಿ  661,165 ಪ್ರಕರಣಗಳಿದ್ದು 9,683 ಜನರು ಈ ಮಾರಕ ವೈರಸ್ ಗೆ ಬಲಿಯಾಗಿದ್ದಾರೆ.

Trending News