COVID-19 ಚಿಕಿತ್ಸೆಗಾಗಿ ಭಾರತದ ಸಹಾಯವನ್ನು ಮರೆಯಲಾಗುವುದಿಲ್ಲ: ಡೊನಾಲ್ಡ್ ಟ್ರಂಪ್

ಕಷ್ಟದ ಸಮಯದಲ್ಲಿ ಸ್ನೇಹಿತರ ನಡುವೆ ಸಹಕಾರದ ಅಗತ್ಯವಿದೆ. ಎಚ್‌ಸಿಕ್ಯೂ (HCQ) ನಿರ್ಧಾರಕ್ಕೆ ಭಾರತ ಮತ್ತು ಭಾರತೀಯ ಜನರಿಗೆ ಧನ್ಯವಾದಗಳು ಎಂದು ಡೊನಾಲ್ಡ್ ಟ್ರಂಪ್ ಟ್ವೀಟ್ ಮಾಡಿದ್ದಾರೆ.

Last Updated : Apr 9, 2020, 09:25 AM IST
COVID-19 ಚಿಕಿತ್ಸೆಗಾಗಿ ಭಾರತದ ಸಹಾಯವನ್ನು ಮರೆಯಲಾಗುವುದಿಲ್ಲ: ಡೊನಾಲ್ಡ್ ಟ್ರಂಪ್ title=

ವಾಷಿಂಗ್ಟನ್: ಕರೋನವೈರಸ್ COVID-19  ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟದಲ್ಲಿ ಗೇಮ್ ಚೇಂಜರ್ ಎಂದು ಕರೆಯಲ್ಪಡುವ ಮಲೇರಿಯಾ ವಿರೋಧಿ ಔಷಧ ಹೈಡ್ರಾಕ್ಸಿಕ್ಲೋರೋಕ್ವಿನ್ (Hydroxychloroquine) ರಫ್ತಿಗೆ ಅನುಮತಿ ನೀಡಿದ್ದಕ್ಕಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬುಧವಾರ ಭಾರತಕ್ಕೆ ಧನ್ಯವಾದ ಅರ್ಪಿಸಿದ್ದಾರೆ. ಈ ಹೋರಾಟದಲ್ಲಿ ಭಾರತಕ್ಕೆ ಮಾತ್ರವಲ್ಲ, ಮಾನವೀಯತೆಯಿಂದ ಸಹಾಯ ಮಾಡುವಲ್ಲಿ ಮುಂದೆ ಬಂದ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ "ಬಲವಾದ ನಾಯಕತ್ವ"ವನ್ನು ಅಧ್ಯಕ್ಷ ಟ್ರಂಪ್ ಪ್ರಶಂಸಿಸಿದ್ದಾರೆ.

"ಕಷ್ಟದ ಸಮಯದಲ್ಲಿ ಸ್ನೇಹಿತರ ನಡುವೆ ಸಹಕಾರದ ಅಗತ್ಯವಿದೆ. ಎಚ್‌ಸಿಕ್ಯೂ (HCQ) ನಿರ್ಧಾರಕ್ಕೆ ಭಾರತ ಮತ್ತು ಭಾರತೀಯ ಜನರಿಗೆ ಧನ್ಯವಾದಗಳು. ಭಾರತದ ಸಹಕಾರವನ್ನು ಎಂದಿಗೂ ಮರೆಯಲಾಗುವುದಿಲ್ಲ! ಈ ಹೋರಾಟದಲ್ಲಿ ಭಾರತಕ್ಕೆ ಮಾತ್ರವಲ್ಲ, ಮಾನವೀಯತೆ ದೃಷ್ಟಿಯಿಂದ ಸಹಾಯ ಮಾಡಿದ ನಿಮ್ಮ ಪ್ರಬಲ ನಾಯಕ ಪ್ರಧಾನಿ ನರೇಂದ್ರ ಮೋದಿ ಅವರಿಗೂ ಧನ್ಯವಾದಗಳು!" ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಟ್ವೀಟ್ ಮಾಡಿದ್ದಾರೆ.

ಈ ಮೂಲಕ ಭಾರತ ಸರ್ಕಾರವು ಎಚ್‌ಸಿಕ್ಯು ಅನ್ನು ಭಾಗಶಃ ರಫ್ತು ಮಾಡುವ ನಿರ್ಧಾರವನ್ನು ಕೇವಲ ಮಾನವೀಯ ನೆಲೆಯಲ್ಲಿ ಮಾತ್ರ ತೆಗೆದುಕೊಂಡಿದ್ದು ಅಮೆರಿಕದ ಅಂತರರಾಷ್ಟ್ರೀಯ ವ್ಯಾಪಾರದ ಮೇಲಿನ  "ಪ್ರತೀಕಾರದ ಬೆದರಿಕೆ"ಯಿಂದ ಅಲ್ಲ ಎಂಬುದು ಟ್ರಂಪ್ ಟ್ವೀಟ್ ನಿಂದ ಸ್ಪಷ್ಟವಾದಂತಾಗಿದೆ.

ಇದಕ್ಕೂ ಮುನ್ನ  ಕರೋನಾವೈರಸ್ (Coronavirus) ಚಿಕಿತ್ಸೆಯಲ್ಲಿ ಬಳಸಲ್ಪಡುವ ಮಲೇರಿಯಾ ವಿರೋಧಿ ಔಷಧವಾದ ಹೈಡ್ರಾಕ್ಸಿಕ್ಲೋರೋಕ್ವಿನ್ ಅನ್ನು ಅಮೆರಿಕಕ್ಕೆ ರಫ್ತು ಮಾಡದಿದ್ದರೆ ವಾಷಿಂಗ್ಟನ್ ಭಾರತದ ವಿರುದ್ಧ ಪ್ರತೀಕಾರಕ್ಕೆ ಮುಂದಾಗಬೇಕಾಗುತ್ತದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಏಪ್ರಿಲ್ 6ರಂದು ಎಚ್ಚರಿಸಿದ್ದರು. 

"ಒಂದೊಮ್ಮೆ ಇದು ಪ್ರಧಾನಿ ನರೇಂದ್ರ ಮೋದಿ ನಿರ್ಧಾರವಾಗಿದ್ದರೆ ನನಗೆ ಆಶ್ಚರ್ಯವಾಗುತ್ತದೆ. ಅವರು ಅದನ್ನು ನನಗೆ ಹೇಳಬೇಕಾಗಿತ್ತು. ನಾನು ಭಾನುವಾರ ಬೆಳಿಗ್ಗೆ ಅವರೊಂದಿಗೆ ಮಾತನಾಡಿದೆ.  ಔಷಧಿ ಪೂರೈಕೆಗೆ ನೀವು ಅವಕಾಶ ನೀಡಿದ್ದನ್ನು ನಾವು ಪ್ರಶಂಸಿಸುತ್ತೇವೆ ಎಂದಿದ್ದರು. ಆದರೆ ಈಗ ಔಷಧಿ ರಫ್ತು ನಿಷೇಧಿಸಿದರೆ ಇದು ಭಾರತದ ಪ್ರತೀಕಾರವಲ್ಲದೆ ಮತ್ತೇನು" ಎಂದು ಟ್ರಂಪ್ ಅನುಮಾನದ ಮಾತುಗಳನ್ನಾಡಿದ್ದರು.

Trending News