ಕರೋನಾವೈರಸ್ ಚಿಕಿತ್ಸೆಯಲ್ಲಿ ಈಗ ಹೈಡ್ರಾಕ್ಸಿಕ್ಲೋರೋಕ್ವಿನ್ ಬದಲಿಗೆ ಐವರ್ಮೆಕ್ಟಿನ್ ಮಾತ್ರೆಗಳನ್ನು ಬಳಸಲಾಗುತ್ತದೆ. ಐವರ್ಮೆಕ್ಟಿನ್ ಮಾತ್ರೆಗಳನ್ನು ದೇಶದ ಅನೇಕ ಆಸ್ಪತ್ರೆಗಳಲ್ಲಿ ಹಾಗೂ ಏಮ್ಸ್, ಲೇಡಿ ಹಾರ್ಡಿಂಗ್ ವೈದ್ಯಕೀಯ ಕಾಲೇಜು ಮತ್ತು ದೆಹಲಿಯ ಮ್ಯಾಕ್ಸ್ ಆಸ್ಪತ್ರೆಯಲ್ಲಿ ಬಳಸಲಾಗುತ್ತಿದೆ.
ಕೋವಿಡ್ -19 ತುರ್ತು ಚಿಕಿತ್ಸೆಗಾಗಿ ಮಲೇರಿಯಾ ವಿರೋಧಿ ಔಷಧಿಗಳಾದ ಕ್ಲೋರೊಕ್ವಿನ್ ಮತ್ತು ಹೈಡ್ರಾಕ್ಸಿಕ್ಲೋರೋಕ್ವಿನ್ ಅನ್ನು ಬಳಸಲು ಎಫ್ಡಿಎ ಸೋಮವಾರ ಅನುಮೋದನೆಯನ್ನು ಹಿಂತೆಗೆದುಕೊಂಡಿತು. ವೈರಸ್ ಸೋಂಕನ್ನು ತಡೆಗಟ್ಟುವಲ್ಲಿ ಈ ಔಷಧಿಗಳು ಬಹುಶಃ ಪರಿಣಾಮಕಾರಿಯಲ್ಲ ಎಂದು ಅದು ಹೇಳಿದೆ.
ಲ್ಯಾನ್ಸೆಟ್ ಅಧ್ಯಯನದ ವರದಿಯ ನಂತರವೇ ವಿಶ್ವ ಆರೋಗ್ಯ ಸಂಸ್ಥೆ (WHO ಎಚ್ಸಿಕ್ಯು ವೈದ್ಯಕೀಯ ಪರೀಕ್ಷೆಯನ್ನು ನಿಲ್ಲಿಸಲು ಸೂಚನೆಗಳನ್ನು ನೀಡಿತು. ಈ ಔಷಧಿ ಸಾವಿನ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಅಧ್ಯಯನ ಹೇಳಿದೆ.
ಕೊರೊನಾವೈರಸ್ ಚಿಕಿತ್ಸೆಗಳ ಹುಡುಕಾಟದಲ್ಲಿ ಸುರಕ್ಷತಾ ಪರಿಶೀಲನೆ ಬಾಕಿ ಇರುವುದರಿಂದ ಅಮಾನತುಗೊಳಿಸಲಾಗಿರುವ ಹೈಡ್ರಾಕ್ಸಿಕ್ಲೋರೋಕ್ವಿನ್ (Hydroxychloroquine) ಔಷಧದ ಕ್ಲಿನಿಕಲ್ ಪ್ರಯೋಗಗಳು ಪುನರಾರಂಭಗೊಳ್ಳಲಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಬುಧವಾರ ತಿಳಿಸಿದೆ.
ಕರೋನವೈರಸ್ ಸೋಂಕುಗಳಿಗೆ ಚಿಕಿತ್ಸೆ ನೀಡಲು ಅಥವಾ ತಡೆಗಟ್ಟಲು ಕ್ಲೋರೊಕ್ವಿನ್ ಮತ್ತು ಹೈಡ್ರಾಕ್ಸಿಕ್ಲೋರೋಕ್ವಿನ್ ಅನ್ನು ಉಪಯೋಗಿಸದಂತೆ ಕೆನಡಾದ ಆರೋಗ್ಯ ಅಧಿಕಾರಿಗಳು ಎಚ್ಚರಿಸಿದ್ದಾರೆ.
ಕೊರೋನಾವೈರಸ್ ವಿರುದ್ಧ ಹೋರಾಡಲು ಹೈಡ್ರಾಕ್ಸಿಕ್ಲೋರೋಕ್ವಿನ್ ಕೇಳುವ 25 ದೇಶಗಳ ಮನವಿಯನ್ನು ಭಾರತ ಅಂಗೀಕರಿಸಿದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ. ಸಮಗ್ರ ಸ್ಟಾಕ್ ನ್ನು ಪರಿಶೀಲಿಸಿದ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಕಷ್ಟದ ಸಮಯದಲ್ಲಿ ಸ್ನೇಹಿತರ ನಡುವೆ ಸಹಕಾರದ ಅಗತ್ಯವಿದೆ. ಎಚ್ಸಿಕ್ಯೂ (HCQ) ನಿರ್ಧಾರಕ್ಕೆ ಭಾರತ ಮತ್ತು ಭಾರತೀಯ ಜನರಿಗೆ ಧನ್ಯವಾದಗಳು ಎಂದು ಡೊನಾಲ್ಡ್ ಟ್ರಂಪ್ ಟ್ವೀಟ್ ಮಾಡಿದ್ದಾರೆ.
ಇಡೀ ಜಗತ್ತನ್ನೇ ಬೆಚ್ಚಿ ಬಿಳಿಸಿರುವ ಕೊರೊನಾ ವೈರಸ್ ಸೋಂಕಿತ ರೋಗಿಗಳನ್ನು ಗುಣಪಡಿಸಲು ಮಲೇರಿಯಾ ನಿಯಂತ್ರಣಕ್ಕೆ ಬಳಸುವ ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧಿಯನ್ನು ನೀಡಲಾಗಿದೆ ಎಂದು ಐಸಿಎಂಆರ್ ತಿಳಿಸಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.