ರೈತರ ಸಾಲ‌ಮನ್ನಾ ವಿಷಯದಲ್ಲಿ ಯಾವುದೇ ಯೂ ಟರ್ನ್ ತೆಗೆದುಕೊಂಡಿಲ್ಲ-HDK

ನನ್ನ‌ ಪಕ್ಷದ ಕಾರ್ಯಕ್ರಮಗಳ ಜಾರಿಗೆ ಮುನ್ನ ಕಾಂಗ್ರೆಸ್ ನಾಯಕರ ಜತೆ ಮಾತುಕತೆ ಮಾಡಬೇಕಾಗುತ್ತದೆ. ರೈತರು ಆತಂಕ ಪಡುವ ಅಗತ್ಯವಿಲ್ಲ- ಎಚ್.ಡಿ. ಕುಮಾರಸ್ವಾಮಿ

Last Updated : May 23, 2018, 09:25 AM IST
ರೈತರ ಸಾಲ‌ಮನ್ನಾ ವಿಷಯದಲ್ಲಿ ಯಾವುದೇ ಯೂ ಟರ್ನ್ ತೆಗೆದುಕೊಂಡಿಲ್ಲ-HDK title=
Pic: ANI

ಬೆಂಗಳೂರು: ರೈತರ ಸಾಲ ಮನ್ನಾ ವಿಷಯದಲ್ಲಿ ನಾನು ಯಾವುದೇ ಯೂ ಟರ್ನ್ ತೆಗೆದುಕೊಂಡಿಲ್ಲ. ಆದರೆ ಸಾಲ ಮನ್ನಾ ಘೋಷಣೆಗೆ ಮುನ್ನ ನನ್ನ ಸಹವರ್ತಿ ಪಕ್ಷದೊಂದಿಗೆ ಮಾತುಕತೆ ನಡೆಸಬೇಕಾಗುತ್ತದೆ ಎಂದು ಹೇಳಿದ್ದೇನೆ. ಹಾಗಾಗಿ ರೈತರು ಆತಂಕ ಪಡುವ ಅಗತ್ಯವಿಲ್ಲ ಎಂದು ನಿಯೋಜಿತ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.

ಈ ಬಗ್ಗೆ ಮಾತನಾಡಿರುವ ಎಚ್ ಡಿಕೆ, ನಾನು ರೈತರ ಸಾಲ‌ಮನ್ನಾ ವಿಷಯದಲ್ಲಿ ಯಾವುದೇ ಯೂ ಟರ್ನ್ ತೆಗೆದುಕೊಂಡಿಲ್ಲ. ಆದರೆ ಸಾಲ ಮನ್ನಾ ಘೋಷಣೆಗೆ ಮುನ್ನ ನನ್ನ ಸಹವರ್ತಿ ಪಕ್ಷದೊಂದಿಗೆ ಮಾತುಕತೆ ನಡೆಸಬೇಕಾಗುತ್ತದೆ ಎಂದು ಹೇಳಿದ್ದೇನೆ. ರಾಷ್ಟ್ರೀಕೃತ ಬ್ಯಾಂಕ್ ಮಾತ್ರವಲ್ಲ ಖಾಸಗಿಯವರ ಬಳಿಯೂ ರೈತರು ಮಾಡಿರುವ ಸಾಲ ಮನ್ನಾ ಮಾಡುವ ಚಿಂತನೆ ಇದೆ.ನಾನು ಅವಕಾಶವಾದಿ ರಾಜಕಾರಣಕ್ಕಾಗಿ ಮುಖ್ಯಮಂತ್ರಿ ಆಗುತ್ತಿಲ್ಲ. ಜನ‌ಬೆಂಬಲ ಕೊಡದೇ ಇದ್ದರೂ ದೇವರ ದಯೆಯಿಂದ ಮುಖ್ಯಮಂತ್ರಿ ಆಗುತ್ತಿದ್ದೇನೆ ಎಂದು ತಿಳಿಸಿದರು.

ನನ್ನ ಜತೆ ಕಾಂಗ್ರೆಸ್ ನ ಒಬ್ಬರು ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ
ಬುಧವಾರ(ಮೇ.23) ನಾನು ಮತ್ತು ಕಾಂಗ್ರೆಸ್ ನಿಂದ ಒಬ್ಬರು ಉಪಮುಖ್ಯಮಂತ್ರಿ ಆಗಿ ಪ್ರಮಾಣ ವಚನ ಸ್ವೀಕರಿಸುತ್ತೇವೆ. ನಾಳೆ ಗಣ್ಯರು ಬರುತ್ತಿರುವ ಹಿನ್ನೆಯಲ್ಲಿ ಮಾಧ್ಯಮ ಮಿತ್ರರನ್ನು ಭೇಟಿ ಮಾಡಲು ಆಗುತ್ತಿಲ್ಲ. ಮೇ.24 ರಂದು ಮಾಧ್ಯಮ ಮಿತ್ರರನ್ನು ಭೇಟಿ ಮಾಡುತ್ತೇವೆ. ಮೇ. 25ರಂದು ಸ್ಪೀಕರ್ ಮತ್ತು ಡೆಪ್ಯೂಟಿ ಸ್ಪೀಕರ್ ಆಯ್ಕೆ ಆಗುತ್ತದೆ. ಮಧ್ಯಾಹ್ನದ ನಂತರ ಅಂದೇ ವಿಶ್ವಾಸ ಮತ ಪಡೆಯುತ್ತೇನೆ. ಸ್ಪೀಕರ್ ಸ್ಥಾನ ಕಾಂಗ್ರೆಸ್ ಗೆ, ಡೆಪ್ಯುಟಿ ಸ್ಪೀಕರ್ ಸ್ಥಾನ ಜೆಡಿಎಸ್ ಗೆ ಹಂಚಿಕೆಯಾಗಿದೆ. ಯಾರು ಸ್ಪೀಕರ್ ಮತ್ತು ಡೆಪ್ಯುಟಿ ಸ್ಪೀಕರ್ ಆಗಬೇಕು ಎಂಬುದನ್ನು  ಬುಧವಾರ ನಿರ್ಧರಿಸುತ್ತೇವೆ ಎಂದು ಎಚ್.ಡಿ. ಕುಮಾರಸ್ವಾಮಿ ತಿಳಿಸಿದರು.

Trending News