ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತೆ ರಾಜ್ಯಕ್ಕೆ ಆಗಮಿಸುತ್ತಿದ್ದು, ತುಮಕೂರು, ಗದಗ, ಶಿವಮೊಗ್ಗ ಜಿಲ್ಲೆಗಳಲ್ಲಿಂದು ಮೋದಿ ಮೇನಿಯಾಕ್ಕೆ ವೇದಿಕೆ ಸಜ್ಜಾಗಿದೆ.
ಇಂದು ಬೆಳಿಗ್ಗೆ 11:00ಕ್ಕೆ ಹೆಲಿಕಾಫ್ಟರ್ ಮೂಲಕ ತುಮಕೂರಿಗೆ ಆಗಮಿಸಲಿರುವ ಮೋದಿ ತುಮಕೂರು, ಹಾಸನ ಹಾಗೂ ನೆಲಮಂಗಲ ಅಭ್ಯರ್ಥಿಗಳ ಪರ ಅಬ್ಬರದ ಪ್ರಚಾರ ನಡೆಸಲಿದ್ದಾರೆ. ನಂತರ ಇದೇ ಮೊದಲ ಬಾರಿಗೆ ಗದಗ ಜಿಲ್ಲೆಗೆ ಮೋದಿ ತೆರಳಲಿದ್ದು, ಮಧ್ಯಾಹ್ನ 02:00ಕ್ಕೆ ಗದಗಿನ ಮುಂಡರಗಿ ರಸ್ತೆಯ ಮೈದಾನದಲ್ಲಿ ಹಮ್ಮಿಕೊಂಡಿರುವ ಸಾರ್ವಜನಿಕ ಸಮಾವೇಶದಲ್ಲಿ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಮತಬೇಟೆ ನಡೆಸಲಿದ್ದಾರೆ.
ಅಲ್ಲಿಂದ ಶಿವಮೊಗ್ಗಕ್ಕೆ ತೆರಳಲಿರುವ ಪ್ರಧಾನಿ ಸಂಜೆ 04:00ಕ್ಕೆ ಶಿವಮೊಗ್ಗದಲ್ಲಿ ಆಯೋಜಿಸಿರುವ ಸಾರ್ವಜನಿಕ ಸಭೆಯಲ್ಲಿ ಅಭ್ಯರ್ಥಿಗಳ ಪರ ಮತಯಾಚನೆ ನಡೆಸಲಿದ್ದಾರೆ.
ಸಂಜೆ 06:30ಕ್ಕೆ ಕಡಲ ನಗರಿ ಮಂಗಳೂರಿನಲ್ಲಿ ಮೋದಿ ಅಲೆ ಮುಂದುವರೆಯಲಿದೆ.
Here is the schedule of Shri @narendramodi’s public rallies in Karnataka on 5th May, 2018.
Watch live at https://t.co/vpP0MInUi4https://t.co/DhKx7Dasbrhttps://t.co/lcXkSnNPDnYou may also listen the speeches live by dialling 9345015401.
Get live updates at @BJPLive too. pic.twitter.com/WTBZTvJnvi
— BJP (@BJP4India) May 4, 2018