ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಯಲ್ಲಿ ರಾಜ್ಯ ಪ್ರವಾಸ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಗದಗ ಜಿಲ್ಲೆಯಲ್ಲಿ ಮಾತನಾಡುತ್ತಾ, ಮಹದಾಯಿ ವಿಚಾರವನ್ನು ನಾವು ಮಾತುಕತೆ ಮುಖಾಂತರ ಪರಿಹರಿಸಲು ಬದ್ಧರಾಗಿದ್ದೇವೆ ಎಂದು ತಿಳಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಅಂತಿಮವಾಗಿ ಮಹದಾಯಿ ವಿಚಾರವಾಗಿ ಮೌನ ಮುರಿದಿದ್ದಕ್ಕೆ ಪ್ರಧಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ.
ಗೋವಾ, ಮಹಾರಾಷ್ಟ್ರ ಮತ್ತು ಕರ್ನಾಟಕದ ಮುಖ್ಯಮಂತ್ರಿಗಳನ್ನು ಮಾತುಕತೆಗಾಗಿ ಆಹ್ವಾನಿಸಲು ಒತ್ತಾಯಿಸಿ ಬರೆದ ಪತ್ರಗಳಿಗೆ ನೀವು ಉತ್ತರಿಸಿದ್ದೀರಾ? ಎಂದು ಪಶ್ನಿಸಿರುವ ಸಿದ್ದರಾಮಯ್ಯ, ರೈತರ ಬಗೆಗಿನ ನಿಮ್ಮ ಕಾಳಜಿ ನಿಜವೇ ಅಥವಾ ಇದು ಚುನಾವಣಾ ಜುಮ್ಲಾನಾ ಎಂದು ವ್ಯಂಗ್ಯವಾಡಿದ್ದಾರೆ.
Dear PM Modi ಅವರೇ,
Thank you for finally breaking your silence on Mahadayi.
Would’ve been grateful had you replied to the letters urging you to invite CMs of Goa, Maharashtra & Karnataka for a dialogue.
Is your concern for farmers real or a ‘Chunavi Jumla’? #NijaHeliModi https://t.co/GQ34OJTU2Q
— Siddaramaiah (@siddaramaiah) May 5, 2018