Gold Price Today : ಚಿನ್ನ ಖರೀದಿಗೆ ಶುಭ ಸಮಯ , ಇಳಿಕೆಯಾಗಿದೆ ಬಂಗಾರದ ಬೆಲೆ , ಬೆಳ್ಳಿ ಕೂಡಾ ಅಗ್ಗ

Gold Price Today: ನಿನ್ನೆ ಏರಿಕೆ ಕಂಡಿದ್ದ ಚಿನ್ನದ ಬೆಲೆಯಲ್ಲಿ ಇಂದು ಇಳಿಕೆ ಕಂಡು ಬಂದಿದೆ.  ಗುಡ್ ರಿಟರ್ನ್ ಮಾಹಿತಿ ಪ್ರಕಾರ ಚಿನ್ನ್ನದ ಬೆಲೆಯಲ್ಲಿ ಇಂದು 270 ರೂ. ಗಳ ಕುಸಿತ ಕಂಡು ಬಂದಿದೆ. ಚಿನ್ನ ಬೆಳ್ಳಿ ಖರೀದಿ ಮಾಡುವುದಾದರೆ ಮೊದಲು ಮಾರುಕಟ್ಟೆಯಲ್ಲಿ ಇಂದಿನ ಬೆಲೆ ಎಷ್ಟಿದೆ ಎಂದು ತಿಳಿದುಕೊಳ್ಳುವುದು ಒಳ್ಳೆಯದು. 

Written by - Ranjitha R K | Last Updated : Jun 8, 2022, 09:15 AM IST
  • ಚಿನ್ನದ ಬೆಲೆಯಲ್ಲಿ ಇಳಿಕೆ
  • ಬೆಳ್ಳಿ ಕೂಡಾ ಅಗ್ಗ
  • ಇಂದಿನ ದರ ಎಷ್ಟು ತಿಳಿಯಿರಿ
Gold Price Today : ಚಿನ್ನ ಖರೀದಿಗೆ ಶುಭ ಸಮಯ , ಇಳಿಕೆಯಾಗಿದೆ ಬಂಗಾರದ ಬೆಲೆ , ಬೆಳ್ಳಿ ಕೂಡಾ ಅಗ್ಗ  title=
Gold Price Today (file photo)

ಬೆಂಗಳೂರು : Gold Price Today : ನಿನ್ನೆ ಏರಿಕೆ ಕಂಡಿದ್ದ ಚಿನ್ನದ ಬೆಲೆಯಲ್ಲಿ ಇಂದು ಭಾರೀ ಇಳಿಕೆ ಕಂಡು ಬಂದಿದೆ. ನಿನ್ನೆ 110 ರೂ. ಗಳ ಏರಿಕೆ ಕಂಡಿದ್ದ ಹಳದಿ ಲೋಹ ಇಂದು 270 ರೂ.ಗಳಷ್ಟು ಇಳಿಕೆ ಕಂಡಿದೆ.  24 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ 270  ರೂ.ಗಳ ಇಳಿಕೆಯೊಂದಿಗೆ 10 ಗ್ರಾಂ ಚಿನ್ನದ ಬೆಲೆ  51,930 ರೂ. ಆಗಿದೆ. ಇನ್ನು 22 ಕ್ಯಾರೆಟ್ ಬಂಗಾರದ ಬೆಲೆ 10 ಗ್ರಾಂ ಗೆ 47, 600  ರೂ. ಆಗಿದೆ.  

ಗುಡ್ ರಿಟರ್ನ್ ಮಾಹಿತಿ ಪ್ರಕಾರ ದೇಶದ ಪ್ರಮುಖ ನಗರಗಳಲ್ಲಿ 24 ಕ್ಯಾರೆಟ್ ಮತ್ತು 22 ಕ್ಯಾರೆಟ್ ಚಿನ್ನದ ಬೆಲೆ ಹೀಗಿದೆ.

ನಗರ  22 ಕ್ಯಾರೆಟ್ ಚಿನ್ನದ ಬೆಲೆ 24 ಕ್ಯಾರೆಟ್ ಚಿನ್ನದ ಬೆಲೆ 
 ಚೆನ್ನೈ 47,720 52,060
ದೆಹಲಿ 47,600 51,930
ಮುಂಬಯಿ 47,600 51,930
ಕೋಲ್ಕತ್ತಾ  47,600 51,930
ಬೆಂಗಳೂರು  47,600 51,930
ಹೈದರಾಬಾದ್  47,600 51,930
ಕೇರಳ  47,600 51,930

ಇದನ್ನೂ ಓದಿ : Indian Railways: ರೈಲಿನಲ್ಲಿ ಈ ಸಮಯದಲ್ಲಿ ಯಾರೂ ನಿಮ್ಮ ಸೀಟಿನಲ್ಲಿ ಕೂರುವಂತಿಲ್ಲ

ಗುಡ್ ರಿಟರ್ನ್ ಮಾಹಿತಿ ಪ್ರಕಾರ ಬೆಳ್ಳಿ ಬೆಲೆಯಲ್ಲಿಯೂ ಕುಸಿತ ಕಂಡು ಬಂದಿದೆ.  ನಿನ್ನೆ ಬೆಳ್ಳಿ ಬೆಲೆಯಲ್ಲಿ 700 ರೂ.ಗಳಷ್ಟು ಹೆಚ್ಚಳ ಕಂಡು ಬಂದಿದತ್ತು. ಆದರೆ ಇಂದು ಬೆಳ್ಳಿ ಕೂಡಾ 500  ರೂ.ಯಷ್ಟು ಅಗ್ಗವಾಗಿದೆ. ಈ ಲೇಖನ ಬರೆಯುವ ಹೊತ್ತಿಗೆ ಬೆಳ್ಳಿ ಬೆಲೆ ಎಷ್ಟಿತ್ತು ನೋಡೋಣ. 

ನಗರ  ಇಂದಿನ ಬೆಳ್ಳಿ ಬೆಲೆ 
 ಚೆನ್ನೈ 67,700
ದೆಹಲಿ 61,900
ಮುಂಬಯಿ 61,900
ಕೋಲ್ಕತ್ತಾ  61,900
ಬೆಂಗಳೂರು  67,700
ಹೈದರಾಬಾದ್  67,700
ಕೇರಳ  67,700

ಇದನ್ನೂ ಓದಿ : PPF ನಲ್ಲಿ ಸರ್ಕಾರದ ವತಿಯಿಂದ 5 ಮಹತ್ವದ ಬದಲಾವಣೆಗಳು, ಹೂಡಿಕೆ ಮಾಡುವ ಮೊದಲು ಈ ಸುದ್ದಿ ಓದಿ

ಚಿನ್ನ ಮತ್ತು ಬೆಳ್ಳಿಯ ದರವನ್ನು ಪರಿಶೀಲಿಸುವುದು  ಹೇಗೆ ?
ನೀವು ಚಿನ್ನ ಮತ್ತು ಬೆಳ್ಳಿಯ ದರವನ್ನು ಪರಿಶೀಲಿಸಬೇಕಾದರೆ 8955664433 ಮೊಬೈಲ್ ಸಂಖ್ಯೆ ಗೆ ಮಿಸ್ಡ್ ಕಾಲ್ ನೀಡಿ. ಮಿಸ್ಡ್ ಕಾಲ್ ನೀಡಿದ ಕೂಡಲೇ ಇತ್ತೀಚಿನ ದರಗಳನ್ನು  ಸಂದೇಶ ರೂಪದಲ್ಲಿ ಸ್ವೀಕರಿಸುವುದು ಸಾಧ್ಯವಾಗುತ್ತದೆ ಆದರೆ ನೆನಪಿರಲಿ ಗುಡ್ ರಿಟರ್ನ್ ನಲ್ಲಿ ನೀಡಲಾದ ದರವನ್ನು ಹೊರತುಪಡಿಸಿ, ಗ್ರಾಹಕರು GSTಯನ್ನು ಸಹ ಪಾವತಿಸಬೇಕಾಗುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News