ದೇಶದ ಈ ಪ್ರದೇಶಗಳಲ್ಲಿ SBI- Bank of Baroda ದ 300 ಹೊಸ ಶಾಖೆ ಓಪನ್

ಮೂಲಗಳಿಂದ ಬಂದ ಮಾಹಿತಿಯ ಆಧಾರದ ಮೇಲೆ ಇಲ್ಲಿಯವರೆಗೆ ಬ್ಯಾಂಕಿಂಗ್ ಸೇವೆಯಿಂದ ಮುಕ್ತವಾಗಿರುವ ಎಲ್ಲಾ ಗ್ರಾಮಗಳಲ್ಲಿ ಹೊಸ ಶಾಖೆಗಳನ್ನು ತೆರೆಯಲಾಗುತ್ತಿದೆ

Written by - Bhavishya Shetty | Last Updated : Sep 5, 2022, 09:36 AM IST
    • ಸಾರ್ವಜನಿಕ ವಲಯದ ಬ್ಯಾಂಕ್‌ಗಳು ಹಣಕಾಸು ಸೇರ್ಪಡೆ ಅಭಿಯಾನ
    • ಅಭಿಯಾನದಡಿಯಲ್ಲಿ ಡಿಸೆಂಬರ್ 2022 ರೊಳಗೆ ಸುಮಾರು 300 ಶಾಖೆಗಳು ಓಪನ್
    • 3000ಕ್ಕಿಂತ ಹೆಚ್ಚು ಜನಸಂಖ್ಯೆ ಇರುವ ಗ್ರಾಮಗಳಲ್ಲಿ ಈ ಶಾಖೆಗಳನ್ನು ತೆರೆಯಲಾಗುವುದು
ದೇಶದ ಈ ಪ್ರದೇಶಗಳಲ್ಲಿ SBI- Bank of Baroda ದ 300 ಹೊಸ ಶಾಖೆ ಓಪನ್ title=
Banking

ದೇಶದ ಮೂಲೆ ಮೂಲೆಯಲ್ಲಿರುವ ಜನರಿಗೆ ಬ್ಯಾಂಕಿಂಗ್ ಸೌಲಭ್ಯ ಕಲ್ಪಿಸುವುದು ಸರ್ಕಾರದ ಯೋಜನೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕ ವಲಯದ ಬ್ಯಾಂಕ್‌ಗಳು ಹಣಕಾಸು ಸೇರ್ಪಡೆ ಅಭಿಯಾನದಡಿಯಲ್ಲಿ ಡಿಸೆಂಬರ್ 2022 ರೊಳಗೆ ಸುಮಾರು 300 ಶಾಖೆಗಳನ್ನು ತೆರೆಯಲಿದೆ. ಇದು ಬ್ಯಾಂಕಿಂಗ್ ಸೇವೆ ತಲುಪದ ಪ್ರದೇಶಗಳಲ್ಲಿ ಅನುಷ್ಠಾನಗೊಳ್ಳಲಿದೆ. 3,000ಕ್ಕಿಂತ ಹೆಚ್ಚು ಜನಸಂಖ್ಯೆ ಇರುವ ಗ್ರಾಮಗಳಲ್ಲಿ ಈ ಶಾಖೆಗಳನ್ನು ತೆರೆಯಲಾಗುವುದು ಎಂದು ತಿಳಿದುಬಂದಿದೆ. 

ಇದನ್ನೂ ಓದಿ: ಚಾರ್ಟ್ ಸಿದ್ಧವಾದ ನಂತರ ಟಿಕೆಟ್ ಕ್ಯಾನ್ಸಲ್ ಮಾಡಿದರೂ ಸಿಗುವುದು ರಿಫಂಡ್ .! ರೈಲ್ವೆಯ ಈ ನಿಯಮವನ್ನು ತಿಳಿಯಿರಿ

ಮೂಲಗಳಿಂದ ಬಂದ ಮಾಹಿತಿಯ ಆಧಾರದ ಮೇಲೆ ಇಲ್ಲಿಯವರೆಗೆ ಬ್ಯಾಂಕಿಂಗ್ ಸೇವೆಯಿಂದ ಮುಕ್ತವಾಗಿರುವ ಎಲ್ಲಾ ಗ್ರಾಮಗಳಲ್ಲಿ ಹೊಸ ಶಾಖೆಗಳನ್ನು ತೆರೆಯಲಾಗುತ್ತಿದೆ. ರಾಜಸ್ಥಾನದಲ್ಲಿ ಗರಿಷ್ಠ 95 ಶಾಖೆಗಳು ಮತ್ತು ಮಧ್ಯಪ್ರದೇಶದಲ್ಲಿ 54 ಶಾಖೆಗಳನ್ನು ತೆರೆಯಲಾಗುತ್ತದೆ. ಗುಜರಾತ್‌ನಲ್ಲಿ 38, ಮಹಾರಾಷ್ಟ್ರದಲ್ಲಿ 33, ಜಾರ್ಖಂಡ್‌ನಲ್ಲಿ 32 ಮತ್ತು ಉತ್ತರ ಪ್ರದೇಶದಲ್ಲಿ 31 ಸಾರ್ವಜನಿಕ ವಲಯದ ಬ್ಯಾಂಕ್‌ಗಳ ಶಾಖೆಗಳನ್ನು ತೆರೆಯಲಾಗುತ್ತಿದೆ. ಈ ಪ್ರದೇಶಗಳಲ್ಲಿ ಬ್ಯಾಂಕ್ ಆಫ್ ಬರೋಡಾ 76 ಶಾಖೆಗಳನ್ನು ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 60 ಶಾಖೆಗಳನ್ನು ತೆರೆಯುತ್ತದೆ.

ಮತ್ತೊಂದೆಡೆ, ಐಡಿಬಿಐ ಬ್ಯಾಂಕ್‌ನಲ್ಲಿನ ತನ್ನ ಪಾಲನ್ನು ಮಾರಾಟ ಮಾಡಲು ಸರ್ಕಾರ ಯೋಜಿಸಿದೆ. ಇದಕ್ಕಾಗಿ ಸೆಪ್ಟೆಂಬರ್ ಅಂತ್ಯದವರೆಗೆ ಬಿಡ್ ಆಹ್ವಾನಿಸಬಹುದು. ಮೂಲಗಳ ಪ್ರಕಾರ, ಆರ್‌ಬಿಐ ಜೊತೆ ಈ ಕುರಿತು ಮಾತುಕತೆ ಅಂತಿಮ ಹಂತದಲ್ಲಿದೆ. ಕೆಲವು ವಿಷಯಗಳ ಬಗ್ಗೆ ಆರ್‌ಬಿಐ ಮತ್ತು ಸೆಬಿಯೊಂದಿಗೆ ಚರ್ಚಿಸಬೇಕಾಗಿದೆ. 

ಇದನ್ನೂ ಓದಿ: Free Ration: ಉಚಿತ ಪಡಿತರ ಯೋಜನೆಯಲ್ಲಿ ಭಾರೀ ಬದಲಾವಣೆ, ಈ ತಿಂಗಳಿನಿಂದಲೇ ನಿಯಮ ಜಾರಿ

ಪ್ರಸ್ತುತ ಐಡಿಬಿಐ ಬ್ಯಾಂಕ್‌ನಲ್ಲಿ ಸರ್ಕಾರದ ಪಾಲು 45.48%. ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ಇದರಲ್ಲಿ 49.24% ಪಾಲನ್ನು ಹೊಂದಿದೆ. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News