Aadhaar Card Update: ದೇಶಾದ್ಯಂತ ಇರುವ ಕೋಟ್ಯಾಂತರ ಆಧಾರ್ ಕಾರ್ಡ್ ಧಾರಕರಿಗೆ ಮಹತ್ವದ ಸುದ್ದಿಯೊಂದು ಪ್ರಕಟವಾಗಿದೆ. ನಿಮ್ಮ ಬಳಿಯೂ ಆಧಾರ್ ಕಾರ್ಡ್ ಇದ್ದರೆ, ಸರ್ಕಾರ ನೀಡುವ 4,78,000 ರೂಪಾಯಿ ಸಾಲದ ಕುರಿತಾದ ಸುದ್ದಿಯ ಬಗ್ಗೆ ನೀವು ತಿಳಿದುಕೊಳ್ಳಲೇಬೇಕು. ಇಂದಿನ ಕಾಲದಲ್ಲಿ ಯಾವುದೇ ಕೆಲಸ ಮಾಡಲು ಆಧಾರ್ ಕಾರ್ಡ್ ಅನ್ನು ಬಳಸಲಾಗುತ್ತದೆ ಎಂಬುದು ಇಲ್ಲಿ ಗಮನಾರ್ಹ. ಹೀಗಿರುವಾಗ ಕೇಂದ್ರ ಸರ್ಕಾರ ಆಧಾರ್ ಕಾರ್ಡ್ ಮೇಲೆ ಸಾಲ ಸೌಲಭ್ಯ ನೀಡುತ್ತಿದೆಯೇ? ಎಂಬುದನ್ನು ನೀವೊಮ್ಮೆ ಪರಿಶೀಲಿಸಲೇಬೇಕು. ಕಾರಣ ತಿಳಿಯಲು ಈ ಸುದ್ದಿ ಓದಿ..
ಸರ್ಕಾರ ಸಾಲ ನೀಡುತ್ತಿದೆಯೇ?
ಇತ್ತೀಚಿಗೆ, ಸಾಮಾಜಿಕ ಜಾಲತಾಣಗಳಲ್ಲಿ ಒಂದು ಸಂದೇಶವು ಸಕತ್ ವೈರಲ್ ಆಗುತ್ತದೆ. ಈ ಸಂದೇಶದಲ್ಲಿ ಸರ್ಕಾರವು ಆಧಾರ್ ಹೊಂದಿರುವವರಿಗೆ 4,78,000 ರೂ ಸಾಲವನ್ನು ನೀಡುತ್ತಿದೆ ಎಂದು ಹೇಳಲಾಗುತ್ತಿದೆ. ಈ ಸಂದೇಶದ ಹಿಂದಿನ ಸತ್ಯಾಸತ್ಯತೆಯನ್ನು ಪಿಐಬಿ ಕಂಡುಹಿಡಿದಿದೆ.
ಪಿಐಬಿ ಟ್ವೀಟ್ ಮಾಡುವ ಮೂಲಕ ಮಾಹಿತಿ ನೀಡಿದೆ
ಪಿಐಬಿ ಅದರ ಸತ್ಯಾಸತ್ಯತೆಯನ್ನು ಸತ್ಯಾಂಶ ತಪಾಸಣೆಯ ಮೂಲಕ ಪತ್ತೆಹಚ್ಚಿದೆ. ಈ ಬಗ್ಗೆ ಪಿಐಬಿ ತನ್ನ ಅಧಿಕೃತ ಟ್ವೀಟ್ನಲ್ಲಿ ಮಾಹಿತಿ ನೀಡಿದೆ. ಈ ವೈರಲ್ ಸಂದೇಶದ ಸತ್ಯವನ್ನು ಖಚಿತಪಡಿಸಿದ ನಂತರ, ಪಿಐಬಿ ಈ ಪೋಸ್ಟ್ ಸಂಪೂರ್ಣ ನಕಲಿ ಎಂದು ಹೇಳಿದೆ.
It is being claimed that the central government is providing a loan of ₹4,78,000 to all Aadhar card owners#PibFactCheck
▶️ This claim is #fake
▶️ Do not forward such messages
▶️ Never share your personal/financial details with anyone pic.twitter.com/fMdLewGxsF
— PIB Fact Check (@PIBFactCheck) November 19, 2022
ಇದನ್ನೂ ಓದಿ-LPG Cylinder : LPG ಗ್ಯಾಸ್ ಸಿಲಿಂಡರ್ ಬಳಸುವವರಿಗೆ ಬಿಗ್ ನ್ಯೂಸ್!
ಈ ಸುದ್ದಿ ಸುಳ್ಳು
ಇಂತಹ ಯಾವುದೇ ಯೋಜನೆಯನ್ನು ಕೇಂದ್ರ ಸರ್ಕಾರ ನಡೆಸುತ್ತಿಲ್ಲ ಎಂದು ಪಿಐಬಿ ಫ್ಯಾಕ್ಟ್ ಚೆಕ್ ತನ್ನ ತನಿಖೆಯಲ್ಲಿ ಪತ್ತೆಹಚ್ಚಿದ್ದು, ಇದೊಂದು ಶುದ್ಧ ಸುಳ್ಳು ಸುದ್ದಿ ಎಂದು ಹೇಳಿದೆ. ಇದರೊಂದಿಗೆ, ಇಂತಹ ವೈರಲ್ ಪೋಸ್ಟ್ಗಳನ್ನು ಯಾರೊಂದಿಗೂ ಕೂಡ ಹಂಚಿಕೊಳ್ಳದಂತೆ ಎಚ್ಚರಿಕೆ ವಹಿಸುವಂತೆ ದೇಶದ ನಾಗರಿಕರನ್ನು ಕೋರಿದೆ.
ಇದನ್ನೂ ಓದಿ-Gold Price Today: ಗ್ರಾಹಕರೇ ಗಮನಿಸಿ ಇಲ್ಲಿದೆ ಸಿಹಿಸುದ್ದಿ… ಚಿನ್ನ-ಬೆಳ್ಳಿ ಬೆಲೆಯಲ್ಲಿ ಭಾರೀ ಇಳಿಕೆ!
ಈ ರೀತಿ ಸತ್ಯವನ್ನು ಪರೀಕ್ಷಿಸಿ
ಸಾಮಾಜಿಕ ಮಾಧ್ಯಮದ ಯುಗದಲ್ಲಿ ಅನೇಕ ಬಾರಿ ತಪ್ಪು ಸುದ್ದಿಗಳು ವೈರಲ್ ಆಗಲು ಪ್ರಾರಂಭಿಸುತ್ತವೆ. ನಿಮ್ಮ ಸಾಮಾಜಿಕ ಮಾಧ್ಯಮ ಖಾತೆ ಅಥವಾ WhatsApp ನಲ್ಲಿ ಬರುವ ಯಾವುದೇ ಸುದ್ದಿಗಳ ಬಗ್ಗೆ ನಿಮಗೆ ಸಂದೇಹವಿದ್ದರೆ, ನೀವು PIB ಮೂಲಕ ಸತ್ಯವನ್ನು ಪರಿಶೀಲಿಸಬಹುದು. ಇದಕ್ಕಾಗಿ ನೀವು ಅಧಿಕೃತ ಲಿಂಕ್ https://factcheck.pib.gov.in/ ಗೆ ಭೇಟಿ ನೀಡಬೇಕು. ಇದಲ್ಲದೆ, ನೀವು WhatsApp ಸಂಖ್ಯೆ 8799711259 ಅಥವಾ ಇಮೇಲ್: pibfactcheck@gmail.com ಗೆ ಮಾಹಿತಿಯನ್ನು ಕಳುಹಿಸಬಹುದು.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.