Amazon Great Freedom Festival Sale: ಆಗಸ್ಟ್ 4-8ರವರೆಗೆ ಭರ್ಜರಿ ಡೀಲ್‍ಗಳು, ಶೇ.60ರವರೆಗೆ ಡಿಸ್ಕೌಂಟ್!

Amazon Great Freedom Festival Sale 2023: ಅಮೆಜಾನ್ ಪ್ರೈಮ್ ಚಂದಾದಾರರಿಗೆ ಗ್ರೇಟ್ ಫ್ರೀಡಂ ಫೆಸ್ಟಿವಲ್ ಸೇಲ್‍ 24 ಗಂಟೆ ಮುಂಚಿತವಾಗಿಯೇ ಲಭ್ಯವಿರಲಿದ್ದು, ಇಂದು(ಆಗಸ್ಟ್ 3) ಮಧ್ಯಾಹ್ನ 12 ಗಂಟೆಯಿಂದಲೇ ಆಫರ್‍ಗಳು ಲೈವ್ ಆಗಿರಲಿವೆ.

Written by - Puttaraj K Alur | Last Updated : Aug 3, 2023, 06:00 PM IST
  • ಆಗಸ್ಟ್ 4 ರಿಂದ 8ರವರೆಗೆ ಅಮೆಜಾನ್ ಗ್ರೇಟ್ ಫ್ರೀಡಂ ಫೆಸ್ಟಿವಲ್ ಸೇಲ್
  • ಸ್ಮಾರ್ಟ್​ಫೋನ್,​ ಎಲೆಕ್ಟ್ರಾನಿಕ್ ಗ್ಯಾಜೆಟ್‌ ಸೇರಿ ಇತರ ಉತ್ಪನ್ನಗಳ ಮೇಲೆ ಭರ್ಜರಿ ಡಿಸ್ಕೌಂಟ್
  • ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕಾರ್ಡ್‌ ಬಳಸುವ ಗ್ರಾಹಕರಿಗೆ 10% ತ್ವರಿತ ರಿಯಾಯಿತಿ
Amazon Great Freedom Festival Sale: ಆಗಸ್ಟ್ 4-8ರವರೆಗೆ ಭರ್ಜರಿ ಡೀಲ್‍ಗಳು, ಶೇ.60ರವರೆಗೆ ಡಿಸ್ಕೌಂಟ್! title=
ಅಮೆಜಾನ್ ಗ್ರೇಟ್ ಫ್ರೀಡಂ ಫೆಸ್ಟಿವಲ್ ಸೇಲ್!

ನವದೆಹಲಿ: ನಾಳೆ ಅಂದರೆ ಆಗಸ್ಟ್ 4 ರಿಂದ 8ರವರೆಗೆ ಅಮೆಜಾನ್ ಗ್ರೇಟ್ ಫ್ರೀಡಂ ಫೆಸ್ಟಿವಲ್ ಸೇಲ್ ನಡೆಯಲಿದೆ. ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಅಮೆಜಾನ್ ಈ ಮೇಳ ಹಮ್ಮಿಕೊಂಡಿದ್ದು, ಪ್ರೈಮ್ ಬಳಕೆದಾರರಿಗೆ ಈಗಾಗಲೇ ಖರೀದಿಗೆ ಅವಕಾಶ ನೀಡಲಾಗಿದೆ.   

ಆಗಸ್ಟ್ 8ರವರೆಗೆ ನಡೆಯಲಿರುವ ಈ ಸೇಲ್‍ನಲ್ಲಿ ನೀವು ಕಡಿಮೆ ಬೆಲೆಗೆ ಹಲವಾರು ರೀತಿಯ ಉತ್ಪನ್ನಗಳನ್ನು ಖರೀದಿಸಬಹುದಾಗಿದೆ. ಈ ಸೇಲ್​ನಲ್ಲಿ ಸ್ಮಾರ್ಟ್​ಫೋನ್​ಗಳ ಮೇಲೆ ಆಕರ್ಷಕ ರಿಯಾಯಿತಿ ಘೋಷಿಸಲಾಗಿದೆ. ಇದಲ್ಲದೆ ಲ್ಯಾಪ್‌ಟಾಪ್‌ಗಳು, ಆಡಿಯೋ ಪರಿಕರಗಳು, ಸ್ಮಾರ್ಟ್ ಹೋಮ್ ಸಾಧನಗಳು ಮತ್ತು ಇತರ ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳ ಮೇಲೆ ಆಕರ್ಷಕ ರಿಯಾಯಿತಿಗಳನ್ನು ನೀಡಲಾಗುತ್ತದೆ.

ಇದನ್ನೂ ಓದಿ: ಸರ್ಕಾರಿ ನೌಕರರಿಗೆ ಬಂಪರ್ ! ವೇತನ ಹೆಚ್ಚಳಕ್ಕೆ ಸರ್ಕಾರ ಈ ದಿನ ನೀಡಲಿದೆ ಅನುಮೋದನೆ

ಪ್ರೈಮ್ ಸದಸ್ಯರಿಗೆ ಇಂದೇ ಅವಕಾಶ

Amazon Prime ಸದಸ್ಯರಿಗೆ ಈ ಮಾರಾಟವು ನಿಗದಿತ ದಿನಕ್ಕಿಂದ 24 ಗಂಟೆಗಳ ಮುಂಚಿತವಾಗಿಯೇ ಲೈವ್ ಆಗುತ್ತದೆ. Prime subscribersಗಳಿಗೆ ಈ ಮಾರಾಟವು ಇಂದು(ಆಗಸ್ಟ್ 3) ಮಧ್ಯಾಹ್ನ 12 ಗಂಟೆಯಿಂದಲೇ ಪ್ರಾರಂಭವಾಗಿದೆ. ಯಾವಾಗಲೂ ಹಾಗೆ ಪ್ರೈಮ್ ಸದಸ್ಯತ್ವ ಹೊಂದಿರುವ ಗ್ರಾಹಕರಿಗೆ ಅಮೆಜಾನ್ ಮುಂಚಿತವಾಗಿಯೇ ಖರೀದಿಗೆ ಅವಕಾಶ ಮಾಡಿಕೊಡುತ್ತದೆ.

ಬ್ಯಾಂಕ್ ಕೊಡುಗೆಗಳು

ಅಮೆಜಾನ್ ಗ್ರೇಟ್ ಫ್ರೀಡಂ ಫೆಸ್ಟಿವಲ್ ಸೇಲ್‍ನಲ್ಲಿ ನೀವು ಖರೀದಿಸುವ ವಸ್ತುಗಳ ಮೇಲೆ ಭರ್ಜರಿ ಬ್ಯಾಂಕ್ ಆಫರ್ ಲಭ್ಯವಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಕಾರ್ಡ್‌ಗಳನ್ನು ಬಳಸುವ ಗ್ರಾಹಕರು ತಮ್ಮ ಖರೀದಿಗಳ ಮೇಲೆ 10% ತ್ವರಿತ ರಿಯಾಯಿತಿ ಪಡೆಯಬಹುದು. ಇನ್ನೂ ಹಲವಾರು ಬ್ಯಾಂಕುಗಳು ಸಹ ಆಫರ್ ನೀಡುತ್ತಿವೆ.

ಇದನ್ನೂ ಓದಿ: ಪಿಎಂ ಕಿಸಾನ್ ಕಂತಿನ ಹಣ ಬಿಡುಗಡೆ ಬೆನ್ನಲ್ಲೇ ರೈತರಿಗೆ ಸಿಹಿ ಸುದ್ದಿ ! ಪ್ರತಿ ತಿಂಗಳು ಖಾತೆಗೆ ಬರುವುದು 3 ಸಾವಿರ ರೂ.

ಭರ್ಜರಿ ಡೀಲ್‌ಗಳು!

ಇ-ಕಾಮರ್ಸ್ ದೈತ್ಯ ಅಮೆಜಾನ್ ಭಾರತೀಯ ಗ್ರಾಹಕರಿಗೆ ಅಮೆಜಾನ್ ಗ್ರೇಟ್ ಫ್ರೀಡಂ ಫೆಸ್ಟಿವಲ್ ಸೇಲ್‍ನಲ್ಲಿ ಭರ್ಜರಿ ಡೀಲ್‍ಗಳನ್ನು ನೀಡುತ್ತಿದೆ. ಲ್ಯಾಪ್‌ಟಾಪ್‌ಗಳು, ಇಯರ್‌ಫೋನ್‌ಗಳು, ಸ್ಮಾರ್ಟ್‌ವಾಚ್‌ಗಳ ಮೇಲೆ 75%ವರೆಗೆ ರಿಯಾಯಿತಿ ನೀಡುತ್ತಿದೆ. ಅದೇ ರೀತಿ Apple ಮತ್ತು ಇತರ ಕಂಪನಿಗಳ ಟ್ಯಾಬ್ಲೆಟ್‌ಗಳು 50%ರಷ್ಟು ರಿಯಾಯಿತಿಯಲ್ಲಿ ಸಿಗಲಿವೆ. ಮತ್ತೊಂದೆಡೆ ಸ್ಮಾರ್ಟ್ ಟಿವಿಗಳನ್ನು 60%ರಷ್ಟು ರಿಯಾಯಿತಿಯಲ್ಲಿ ಖರೀದಿಸಬಹುದು. ಸೋನಿಯ ಪ್ಲೇಸ್ಟೇಷನ್ 5 ಸೇರಿದಂತೆ ಗೇಮಿಂಗ್ ಉತ್ಪನ್ನಗಳ ಪ್ರಸ್ತುತ ಮಾರುಕಟ್ಟೆ ದರದ ಮೇಲೆ ಶೇ.50ರವರೆಗೆ ಡಿಸ್ಕೌಂಟ್ ಲಭ್ಯವಿರುತ್ತದೆ.

ಸ್ಮಾರ್ಟ್‌ಫೋನ್‌ಗಳ ಮೇಲೆ ಭರ್ಜರಿ ಡಿಸ್ಕೌಂಟ್!  

ಈ ಸೇಲ್‍ನಲ್ಲಿ ಸ್ಮಾರ್ಟ್‌ಫೋನ್‌ಗಳು 40% ರಿಯಾಯಿತಿಯಲ್ಲಿ ಲಭ್ಯವಿರುತ್ತವೆ. iPhone 14 (Apple), Nord 3 5G (OnePlus), 11R 5G (OnePlus), Galaxy M13 (Samsung), Galaxy S20 FE (Samsung), Narzo 60 5G (Realme), Neo 7 Pro (iQOO), Redmi 12 ಮತ್ತು Razr 40 (Motorola) ಸೇರಿದಂತೆ ಇನ್ನೂ ಹಲವಾರು ಕಂಪನಿಗಳ ಸ್ಮಾರ್ಟ್‍ಫೋನ್‍ಗಳ ಖರೀದಿ ಮೇಲೆ ಗ್ರಾಹಕರಿಗೆ ಭರ್ಜರಿ ಡಿಸ್ಕೌಂಟ್ ಸಿಗಲಿದೆ.  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News