Share Market Update: ಇಂದು ಷೇರು ಮಾರುಕಟ್ಟೆಯಲ್ಲಿ ಕುಸಿತಕ್ಕೆ ಬಿತ್ತು ಬ್ರೇಕ್, ಹಸಿರು ಅಂಕಿಗಳಲ್ಲಿ ದಿನದಾಂತ್ಯ ಕಂಡ ನಿಫ್ಟಿ-ಸೆನ್ಸೆಕ್ಸ್

Stock Market Update: ಇಂದಿನ ದಿನದ ವಹಿವಾಟಿನಲ್ಲಿ 30 ಷೇರುಗಳನ್ನು ಹೊಂದಿರುವ ಬಿಎಸ್‌ಇ ಸೆನ್ಸೆಕ್ಸ್ 159.40 ಪಾಯಿಂಟ್‌ಗಳು ಅಥವಾ ಶೇ.0.25 ಶೇಕಡಾ ಏರಿಕೆಯಾಗಿ 63,327.70 ಕ್ಕೆ ತಲುಪಿದೆ. ಇನ್ನೊಂದೆಡೆ ರಾಷ್ಟ್ರೀಯ ಷೇರು ಸೂಚ್ಯಂಕ ನಿಫ್ಟಿ ಕುರಿತು ಹೇಳುವುದಾದರೆ, ನಿಫ್ಟಿಯಲ್ಲಿಯೂ ಕೂಡ ಉತ್ಕರ್ಷ ಕಂಡುಬಂದಿದೆ. ನಿಫ್ಟಿ 61.25 ಪಾಯಿಂಟ್ ಅಥವಾ ಶೇ.0.33 ರಷ್ಟು ಏರಿಕೆಯಾಗಿ 18,816.70 ಕ್ಕೆ ತನ್ನ ದಿನದಾಂತ್ಯವನ್ನು ಕಂಡಿದೆ.   

Written by - Nitin Tabib | Last Updated : Jun 20, 2023, 08:40 PM IST
  • ಏಷ್ಯಾದ ಇತರ ಮಾರುಕಟ್ಟೆಗಳಲ್ಲಿ, ಜಪಾನ್‌ನ ನಿಕ್ಕಿ ಏರಿಕೆಯೊಂದಿಗೆ ಮುಕ್ತಾಯಗೊಂಡರೆ,
  • ದಕ್ಷಿಣ ಕೊರಿಯಾದ ಕಾಸ್ಪಿ, ಚೀನಾದ ಶಾಂಘೈ ಕಾಂಪೋಸಿಟ್ ಮತ್ತು ಹಾಂಗ್ ಕಾಂಗ್‌ನ ಹ್ಯಾಂಗ್‌ಸೆಂಗ್ ನಷ್ಟದಲ್ಲಿ ವಹಿವಾಟನ್ನು ನಡೆಸಿವೆ.
  • ಯುರೋಪ್‌ನ ಹೆಚ್ಚಿನ ಮಾರುಕಟ್ಟೆಗಳು ಮಧ್ಯಾಹ್ನದ ವಹಿವಾಟಿನಲ್ಲಿ ಕುಸಿತದ ಪ್ರವೃತ್ತಿ ಮುಂದುವರೆದಿತ್ತು.
Share Market Update: ಇಂದು ಷೇರು ಮಾರುಕಟ್ಟೆಯಲ್ಲಿ ಕುಸಿತಕ್ಕೆ ಬಿತ್ತು ಬ್ರೇಕ್, ಹಸಿರು ಅಂಕಿಗಳಲ್ಲಿ ದಿನದಾಂತ್ಯ ಕಂಡ ನಿಫ್ಟಿ-ಸೆನ್ಸೆಕ್ಸ್ title=

Share Market Update: ಷೇರುಪೇಟೆಯಲ್ಲಿನ ಸತತ ಕುಸಿತಕ್ಕೆ ಇಂದು ಬ್ರೇಕ್ ಬಿದ್ದಿದೆ. ಮಂಗಳವಾರದ ವಹಿವಾಟಿನ ನಂತರ ಸೆನ್ಸೆಕ್ಸ್ ಮತ್ತು ನಿಫ್ಟಿ ಹಸಿರು ಅಂಕಗಳಲ್ಲಿ ತನ್ನ ದಿನದ ವಹಿವಾಟನ್ನು ಮುಗಿಸಿವೆ.  ಐಟಿ ಕ್ಷೇತ್ರ, ವಿದ್ಯುತ್ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಉತ್ತಮ ಖರೀದಿ ಕಂಡು ಬಂದಿದ್ದು, ನಂತರ ಮಾರುಕಟ್ಟೆ ಭಾರಿ ಏರಿಳಿತ ಕಂಡುಬಂದಿದೆ. ಈ ಅವಧಿಯಲ್ಲಿ, 30-ಷೇರುಗಳ ಬಿಎಸ್‌ಇ ಸೆನ್ಸೆಕ್ಸ್ 159.40 ಪಾಯಿಂಟ್‌ಗಳು ಅಥವಾ ಶೇ. 0.25 ರಷ್ಟು ಏರಿಕೆಯಾಗಿ 63,327.70 ಕ್ಕೆ ತಲುಪಿದೆ. ದಿನದ ಬಹುತೇಕ ವಹಿವಾಟಿನಲ್ಲಿ ಸೆನ್ಸೆಕ್ಸ್ ನಷ್ಟದಲ್ಲಿದ್ದು, ಒಂದು ಹಂತದಲ್ಲಿ 62,801.91ರ ಕನಿಷ್ಠ ಮಟ್ಟಕ್ಕೆ ಇಳಿದಿತ್ತು. ಆದಾಗ್ಯೂ, ವಹಿವಾಟಿನ ಕೊನೆಯಲ್ಲಿ ಮಾರುಕಟ್ಟೆಯು ಪ್ರಬಲ ಕಮ್ ಬ್ಯಾಕ್ ಮಾಡಿದೆ.

ಇನ್ನೊಂದೆಡೆ ನಾವು ರಾಷ್ಟ್ರೀಯ ಸೂಚ್ಯಂಕವಾಗಿರುವ ನಿಫ್ಟಿ ಕುರಿತು ಹೇಳುವುದಾದರೆ, ಅದರಲ್ಲಿಯೂ ಉತ್ಕರ್ಷ ಕಂಡುಬಂದಿದೆ. ನಿಫ್ಟಿ 61.25 ಪಾಯಿಂಟ್ ಅಥವಾ ಶೇ. 0.33 ರಷ್ಟು ಏರಿಕೆಯಾಗಿ 18,816.70 ಕ್ಕೆ ತನ್ನ ದಿನದ ವಹಿವಾಟನ್ನು ಅಂತ್ಯಗೊಳಿಸಿದೆ

ಯಾವ ಸ್ಟಾಕ್‌ನ ಸ್ಥಿತಿ ಹೇಗಿತ್ತು?
ಟಾಟಾ ಮೋಟಾರ್ಸ್, ಎಚ್‌ಸಿಎಲ್ ಟೆಕ್ನಾಲಜೀಸ್, ಪವರ್ ಗ್ರಿಡ್, ಟೆಕ್ ಮಹೀಂದ್ರಾ, ಎನ್‌ಟಿಪಿಸಿ, ಆಕ್ಸಿಸ್ ಬ್ಯಾಂಕ್, ಕೋಟಕ್ ಮಹೀಂದ್ರಾ ಬ್ಯಾಂಕ್, ಲಾರ್ಸೆನ್ ಅಂಡ್ ಟೂಬ್ರೊ, ವಿಪ್ರೋ, ನೆಸ್ಲೆ, ಟಿಸಿಎಸ್ ಮತ್ತು ಇನ್ಫೋಸಿಸ್ ಸೆನ್ಸೆಕ್ಸ್‌ ನ ಇಂದಿನ ವಹಿವಾಟಿನಲ್ಲಿ  ಪ್ರಮುಖ ಲಾಭ ಗಳಿಸಿವೆ. ಮತ್ತೊಂದೆಡೆ, ಬಜಾಜ್ ಫೈನಾನ್ಸ್, ಬಜಾಜ್ ಫಿನ್‌ಸರ್ವ್, ಮಹೀಂದ್ರ ಮತ್ತು ಮಹೀಂದ್ರಾ, ಅಲ್ಟ್ರಾಟೆಕ್ ಸಿಮೆಂಟ್, ಇಂಡಸ್‌ಇಂಡ್ ಬ್ಯಾಂಕ್ ಮತ್ತು ಎಸ್‌ಬಿಐ ಷೇರುಗಳು ನೆಲಕಚ್ಚಿವೆ.

ಜಾಗತಿಕ ಮಾರುಕಟ್ಟೆಯ ಸ್ಥಿತಿ ಹೇಗಿತ್ತು?
ಏಷ್ಯಾದ ಇತರ ಮಾರುಕಟ್ಟೆಗಳಲ್ಲಿ, ಜಪಾನ್‌ನ ನಿಕ್ಕಿ ಏರಿಕೆಯೊಂದಿಗೆ ಮುಕ್ತಾಯಗೊಂಡರೆ, ದಕ್ಷಿಣ ಕೊರಿಯಾದ ಕಾಸ್ಪಿ, ಚೀನಾದ ಶಾಂಘೈ ಕಾಂಪೋಸಿಟ್ ಮತ್ತು ಹಾಂಗ್ ಕಾಂಗ್‌ನ ಹ್ಯಾಂಗ್‌ಸೆಂಗ್ ನಷ್ಟದಲ್ಲಿ ವಹಿವಾಟನ್ನು ನಡೆಸಿವೆ. ಯುರೋಪ್‌ನ ಹೆಚ್ಚಿನ ಮಾರುಕಟ್ಟೆಗಳು ಮಧ್ಯಾಹ್ನದ ವಹಿವಾಟಿನಲ್ಲಿ ಕುಸಿತದ ಪ್ರವೃತ್ತಿ ಮುಂದುವರೆದಿತ್ತು. ಯುಎಸ್ ಮಾರುಕಟ್ಟೆಗಳು ಸೋಮವಾರ ಮುಚ್ಚಿದ್ದವು.

ಇದನ್ನೂ ಓದಿ-July 1 ರಿಂದ ಚಪ್ಪಲ್-ಸ್ಯಾಂಡಲ್ ಗಳಿಗೆ ಈ ನಿಯಮಗಳು ಅನ್ವಯಿಸಲಿವೆ ಎಚ್ಚರ!

ತಜ್ಞರ ಅಭಿಪ್ರಾಯವೇನು ಗೊತ್ತಾ?
ಜಿಯೋಜಿತ್ ಫೈನಾನ್ಷಿಯಲ್ ಸರ್ವಿಸಸ್‌ನ ಸಂಶೋಧನಾ ಮುಖ್ಯಸ್ಥ ವಿನೋದ್ ನಾಯರ್, ದುರ್ಬಲ ಜಾಗತಿಕ ಸೂಚನೆಗಳಿಂದಾಗಿ ಭಾರತೀಯ ಮಾರುಕಟ್ಟೆಗಳು ಎಚ್ಚರಿಕೆಯಿಂದ ಆಂಭಗೊಂಡಿವೆ ಎಂದು ಹೇಳಿದ್ದಾರೆ. 10 ತಿಂಗಳ ವಿರಾಮದ ನಂತರ ಚೀನಾ ಬಡ್ಡಿದರಗಳನ್ನು ಕಡಿತಗೊಳಿಸಿದ ನಂತರ ಆರ್ಥಿಕತೆಯ ಬಗ್ಗೆ ಕಳವಳ ವ್ಯಕ್ತಪಡಿಸಲಾಗಿತ್ತು. ಯುಎಸ್ ಫೆಡರಲ್ ರಿಸರ್ವ್ ದರ ಏರಿಕೆಯ ಭಯವೂ ಆತಂಕವನ್ನು ಹೆಚ್ಚಿಸಿದೆ. ಆದರೆ, ಐಟಿ ಮತ್ತು ವಾಹನ ಷೇರುಗಳ ಖರೀದಿಯಿಂದಾಗಿ ಮಾರುಕಟ್ಟೆ ತೀವ್ರ ಚೇತರಿಕೆ ಕಂಡಿದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ-Airbus ಅತಿ ದೊಡ್ಡ ಆರ್ಡರ್ ನೀಡಿದ IndiGo, 500 ವಿಮಾನಗಳ ಖರೀದಿಗೆ ಆರ್ಡರ್

ಸೋಮವಾರ ಮಾರುಕಟ್ಟೆಯ ಸ್ಥಿತಿ ಹೇಗಿತ್ತು?
ಜಾಗತಿಕ ತೈಲ ಮಾನದಂಡ ಬ್ರೆಂಟ್ ಕಚ್ಚಾ ತೈಲವು ಪ್ರತಿ ಬ್ಯಾರೆಲ್‌ಗೆ $ 77.02 ರಷ್ಟು ಅಂದರೆ ಶೇ.1.22 ಏರಿಕೆಯಾಗಿದೆ. ಷೇರು ಮಾರುಕಟ್ಟೆ ಮಾಹಿತಿ ಪ್ರಕಾರ, ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ) ಸೋಮವಾರ ನಿವ್ವಳ ಆಧಾರದ ಮೇಲೆ 1,030.90 ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ. ಸೋಮವಾರದಂದು, ಸೆನ್ಸೆಕ್ಸ್ 216.28 ಪಾಯಿಂಟ್ ಅಥವಾ ಶೇ.0.34 ರಷ್ಟು ಕುಸಿದು 63,168.30 ಕ್ಕೆ ತಲುಪಿದರೆ, ನಿಫ್ಟಿ 70.55 ಪಾಯಿಂಟ್ ಅಥವಾ ಶೇ. 0.37 ರಷ್ಟು ಕಡಿಮೆಯಾಗಿ 18,755.45 ಕ್ಕೆ ತಲುಪಿದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News