Big Update: ಆಧಾರ್ ನಿಂದ ಇನ್ಮುಂದೆ ನೀವು ಈ ಕೆಲಸ ಮಾಡ್ಬಹುದು, ಅನುಮತಿ ನೀಡಿದ ಕೇಂದ್ರ ವಿತ್ತ ಸಚಿವಾಲಯ

Aadhaar Card Latest Update: ಅಮೆಜಾನ್ ಪೇ (ಇಂಡಿಯಾ) ಮತ್ತು ಹೀರೋ ಫಿನ್‌ಕಾರ್ಪ್ ಸೇರಿದಂತೆ 22 ಹಣಕಾಸು ಕಂಪನಿಗಳಿಗೆ ಆಧಾರ್ ಸಂಖ್ಯೆಗಳ ಮೂಲಕ ಗ್ರಾಹಕರನ್ನು ಪರಿಶೀಲಿಸಲು ಹಣಕಾಸು ಸಚಿವಾಲಯ ಅನುಮತಿ ನೀಡಿದೆ. ಈ 22 ಕಂಪನಿಗಳು ಇನ್ಮುಂದೆ ಆಧಾರ್ ಸಂಖ್ಯೆಯನ್ನು ಬಳಸಿಕೊಂಡು ಗ್ರಾಹಕರ ಗುರುತು ಮತ್ತು ಫಲಾನುಭವಿಗಳ ವಿವರಗಳನ್ನು ಪರಿಶೀಲಿಸಲು ಸಾಧ್ಯವಾಗಲಿದೆ ಎಂದು ಸಚಿವಾಲಯ ಅಧಿಸೂಚನೆಯಲ್ಲಿ ತಿಳಿಸಿದೆ. ಇಂತಹ ಪರಿಸ್ಥಿತಿಯಲ್ಲಿ, ಆಧಾರ್‌ನೊಂದಿಗೆ ಪರಿಶೀಲನೆ ಪ್ರಕ್ರಿಯೆಯು ಸ್ವಲ್ಪ ಸುಲಭವಾಗಲಿದೆ.  

Written by - Nitin Tabib | Last Updated : May 5, 2023, 06:46 PM IST
  • ಅನೇಕ ಸರ್ಕಾರಿ ಮತ್ತು ಸರ್ಕಾರೇತರ ಕೆಲಸಗಳಿಗೆ ಆಧಾರ್ ಕಾರ್ಡ್ ಅಗತ್ಯ.
  • ಆಧಾರ್ ಕಾರ್ಡ್‌ ಹಲವಾರು ರೀತಿಯ ಮಾಹಿತಿಯನ್ನು ಒಳಗೊಂಡಿರುವುದರಿಂದ ಜನರ ಪರಿಶೀಲನೆಯನ್ನು ಆಧಾರ್ ಕಾರ್ಡ್ ಮೂಲಕವೂ ಮಾಡಬಹುದು.
  • ಹೀಗಿರುವಾಗ ಇದೀಗ ಆಧಾರ್ ಕಾರ್ಡ್ ಗೆ ಸಂಬಂಧಿಸಿದಂತೆ ಮಹತ್ವದ ಮಾಹಿತಿ ಹೊರಬಿದ್ದಿದೆ.
  • ಇದು ದೇಶಾದ್ಯಂತ ಇರುವ ಕೋಟ್ಯಾಂತರ ಆಧಾರ್ ಕಾರ್ಡ್ ಧಾರಕರ ಮೇಲೆ ಪ್ರಭಾವ ಬೀರಲಿದೆ.
Big Update: ಆಧಾರ್ ನಿಂದ ಇನ್ಮುಂದೆ ನೀವು ಈ ಕೆಲಸ ಮಾಡ್ಬಹುದು, ಅನುಮತಿ ನೀಡಿದ ಕೇಂದ್ರ ವಿತ್ತ ಸಚಿವಾಲಯ title=
ಆಧಾರ್ ಅಪ್ಡೇಟ್

Aadhaar Latest News: ಇಂದು ಜನರ  ಬಳಿ ಹಲವು ಪ್ರಮುಖ ದಾಖಲೆಗಳಿವೆ. ಈ ದಾಖಲೆಗಳ ಮೂಲಕ ಜನರ ಹಲವು ಕೆಲಸಗಳು ಸುಲಭವಾಗಿ ಮಾಡಿಕೊಳ್ಳಬಹುದು. ಈ ಪ್ರಮುಖ ದಾಖಲೆಗಳಲ್ಲಿ ಆಧಾರ್ ಕಾರ್ಡ್ ಅನ್ನು ಸಹ ಸೇರಿಸಲಾಗಿದೆ. ಭಾರತದಲ್ಲಿ ಆಧಾರ್ ಕಾರ್ಡ್ ಒಂದು ಮುಖ್ಯವಾದ ದಾಖಲೆಯಾಗಿದೆ. ಅನೇಕ ಸರ್ಕಾರಿ ಮತ್ತು ಸರ್ಕಾರೇತರ ಕೆಲಸಗಳಿಗೆ ಆಧಾರ್ ಕಾರ್ಡ್ ಅಗತ್ಯ. ಆಧಾರ್ ಕಾರ್ಡ್‌ ಹಲವಾರು ರೀತಿಯ ಮಾಹಿತಿಯನ್ನು ಒಳಗೊಂಡಿರುವುದರಿಂದ ಜನರ ಪರಿಶೀಲನೆಯನ್ನು ಆಧಾರ್ ಕಾರ್ಡ್ ಮೂಲಕವೂ ಮಾಡಬಹುದು. ಹೀಗಿರುವಾಗ ಇದೀಗ ಆಧಾರ್ ಕಾರ್ಡ್ ಗೆ ಸಂಬಂಧಿಸಿದಂತೆ ಮಹತ್ವದ ಮಾಹಿತಿ ಹೊರಬಿದ್ದಿದೆ. ಇದು ದೇಶಾದ್ಯಂತ ಇರುವ ಕೋಟ್ಯಾಂತರ ಆಧಾರ್ ಕಾರ್ಡ್ ಧಾರಕರ ಮೇಲೆ ಪ್ರಭಾವ ಬೀರಲಿದೆ.

ಆಧಾರ್ ಕಾರ್ಡ್
ವಾಸ್ತವದಲ್ಲಿ, ಹಣಕಾಸು ಸಚಿವಾಲಯವು ಅಮೆಜಾನ್ ಪೇ (ಇಂಡಿಯಾ) ಮತ್ತು ಹೀರೋ ಫಿನ್‌ಕಾರ್ಪ್ ಸೇರಿದಂತೆ 22 ಹಣಕಾಸು ಕಂಪನಿಗಳಿಗೆ ಆಧಾರ್ ಸಂಖ್ಯೆಗಳ ಮೂಲಕ ಗ್ರಾಹಕರನ್ನು ಪರಿಶೀಲಿಸಲು ಅನುಮತಿ ನೀಡಿದೆ. ಈ 22 ಕಂಪನಿಗಳು ಇನ್ಮುಂದೆ ಆಧಾರ್ ಸಂಖ್ಯೆಯನ್ನು ಬಳಸಿಕೊಂಡು ಗ್ರಾಹಕರ ಗುರುತು ಮತ್ತು ಫಲಾನುಭವಿಗಳ ವಿವರಗಳನ್ನು ಪರಿಶೀಲಿಸಲು ಸಾಧ್ಯವಾಗಲಿದೆ ಎಂದು ಸಚಿವಾಲಯ ತನ್ನ ಅಧಿಸೂಚನೆಯಲ್ಲಿ ತಿಳಿಸಿದೆ. ಇಂತಹ ಪರಿಸ್ಥಿತಿಯಲ್ಲಿ, ಆಧಾರ್‌ನೊಂದಿಗೆ ಪರಿಶೀಲನೆ ಪ್ರಕ್ರಿಯೆಯು ಸ್ವಲ್ಪ ಸುಲಭವಾಗಲಿದೆ.

ಇದನ್ನೂ ಓದಿ-DA Hike: ಶೇ.45ಕ್ಕೆ ತಲುಪಿದ ತುಟ್ಟಿಭತ್ಯೆ, ಸರ್ಕಾರಿ ನೌಕರರಿಗೊಂದು ಭರ್ಜರಿ ಸುದ್ದಿ!

ಬ್ಯಾಂಕಿಂಗ್ ವಲಯ
ಬ್ಯಾಂಕಿಂಗ್ ವಲಯದಲ್ಲಿ ಆಧಾರ್ ಮೂಲಕ ಜನರನ್ನು ಪರಿಶೀಲಿಸಬಹುದು. ಇಂತಹ ಪರಿಸ್ಥಿತಿಯಲ್ಲಿ ಇದೀಗ ಸರ್ಕಾರವೂ ಮಹತ್ವದ ಹೆಜ್ಜೆ ಇಟ್ಟಿದ್ದು, ಆಧಾರ್ ಪರಿಶೀಲನೆ ಪ್ರಕ್ರಿಯೆ ಮತ್ತಷ್ಟು ಸುಲಭವಾಗಿಸಿದೆ.  ಈ 22 ಹಣಕಾಸು ಕಂಪನಿಗಳಲ್ಲಿ ಗೋದ್ರೇಜ್ ಫೈನಾನ್ಸ್, ಅಮೆಜಾನ್ ಪೇ (ಇಂಡಿಯಾ) ಪ್ರೈವೇಟ್ ಲಿಮಿಟೆಡ್, ಆದಿತ್ಯ ಬಿರ್ಲಾ ಹೌಸಿಂಗ್ ಫೈನಾನ್ಸ್, ಟಾಟಾ ಮೋಟಾರ್ಸ್ ಫೈನಾನ್ಸ್ ಸೊಲ್ಯೂಷನ್ಸ್, ಐಐಎಫ್‌ಎಲ್ ಫೈನಾನ್ಸ್ ಮತ್ತು ಮಹೀಂದ್ರಾ ರೂರಲ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ ಶಾಮೀಲಾಗಿವೆ. 

ಇದನ್ನೂ ಓದಿ-New Bike Launch! ಶೀಘ್ರದಲ್ಲೇ ತನ್ನ ಗ್ರಾಹಕರಿಗೆ ಅಗ್ಗದ ಬೈಕ್ ಉಡುಗೊರೆ ನೀಡಲಿದೆ ಹೀರೋ, ಸ್ಪೋರ್ಟಿ ಲುಕ್ ಜೊತೆಗೆ ಅತ್ಯುತ್ತಮ ಮೈಲೇಜ್!

ಆಧಾರ್ ಪರಿಶೀಲನೆ
ಬ್ಯಾಂಕಿಂಗ್ ಕಂಪನಿಗಳು ಇನ್ಮುಂದೆ ಆಧಾರ್ ದೃಢೀಕರಣದ ಮೂಲಕ ಗ್ರಾಹಕರನ್ನು ಪರಿಶೀಲಿಸಲು ಸಾಧ್ಯವಾಗುತ್ತದೆ ಎಂದು ನಂಗಿಯಾ ಆಂಡರ್ಸನ್ ಎಲ್‌ಎಲ್‌ಪಿ ಪಾಲುದಾರ ಸಂದೀಪ್ ಜುಂಜುನ್‌ವಾಲಾ ಹೇಳಿದ್ದಾರೆ. "ಗ್ರಾಹಕರು/ಫಲಾನುಭವಿಗಳ ಗುರುತನ್ನು ಪರಿಶೀಲಿಸಲು ಆಧಾರ್ ದೃಢೀಕರಣವನ್ನು ಬಳಸಲು ಅನುಮತಿಸಲಾದ 22 ಹಣಕಾಸು ಸಂಸ್ಥೆಗಳ ಪಟ್ಟಿಯನ್ನು ಸೂಚಿಸಲಾಗಿದೆ" ಎಂದು ಅವರು ಹೇಳಿದ್ದಾರೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News