Gold Price: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ದರ ಕುಸಿತ, ನಿಮ್ಮ ನಗರದ ಬೆಲೆ ಪರಿಶೀಲಿಸಿ

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅಮೆರಿಕನ್ ಡಾಲರ್ ಏರಿಕೆಯಾದಂತೆ ಚಿನ್ನದ ಬೆಲೆಗಳು ಕುಸಿತ ಕಂಡಿದೆ.

Written by - Puttaraj K Alur | Last Updated : Oct 5, 2021, 11:40 AM IST
  • ಚಿನ್ನವು ದಾಖಲೆಯ ಗರಿಷ್ಠ ಮಟ್ಟದಿಂದ 10 ಸಾವಿರ ರೂ.ಗಿಂತಲೂ ಕಡಿಮೆ ಇದೆ
  • ಬೆಂಗಳೂರಿನಲ್ಲಿ ಚಿನ್ನದ ದರ 22 ಕ್ಯಾರೆಟ್‌ನ 10 ಗ್ರಾಂಗೆ 43,510 ರೂ. ಇದೆ
  • ಕಡಿಮೆ ಬೆಲೆಯಲ್ಲಿ ಚಿನ್ನ ಸಿಗುತ್ತಿರುವುದರಿಂದ ಮಾರುಕಟ್ಟೆಯಲ್ಲಿ ಖರೀದಿ ಭರಾಟ ಜೋರಾಗಿದೆ
Gold Price: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ದರ ಕುಸಿತ, ನಿಮ್ಮ ನಗರದ ಬೆಲೆ ಪರಿಶೀಲಿಸಿ

ನವದೆಹಲಿ: ಅಂತಾರಾಷ್ಟ್ರೀಯ ಮಾರುಕಟ್ಟೆ(International Market)ಯಲ್ಲಿ ಮಂಗಳವಾರ ಮತ್ತೆ ಚಿನ್ನದ ದರ ಕುಸಿತ ಕಂಡಿದೆ. ಚಿನ್ನದ ಬೆಲೆ ಇಂದು(ಅ.5) ಪ್ರತಿ 10 ಗ್ರಾಂನ 22 ಕ್ಯಾರೆಟ್‌ಗೆ 45,490 ರೂ.ನಲ್ಲಿ ವಹಿವಾಟು ನಡೆಸುತ್ತಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ದರ ಸತತವಾಗಿ ಇಳಿಕೆಯಾಗುತ್ತಿದ್ದು, ಖರೀದಿದಾರರ ಮೊಗದಲ್ಲಿ ಮಂದಹಾಸ ಮೂಡಿಸಿದೆ.

ಬೇಡಿಕೆ ಕಡಿಮೆ ಹಿನ್ನೆಲೆ ಚಿನ್ನದ ಫ್ಯೂಚರ್ಸ್ ನಲ್ಲಿಯೂ ಹಳದಿ ಲೋಹದ ಬೆಲೆ ಕುಸಿತಗೊಂಡಿದೆ. ಭಾರತದ ಬಹು ಸರಕು ವಿನಿಮಯ ಕೇಂದ್ರ(Multi Commodity Exchange of India)ದಲ್ಲಿ 1,469 ಲಾಟ್‌ಗಳ ವ್ಯಾಪಾರ ವಹಿವಾಟಿನಲ್ಲಿ ಚಿನ್ನದ ದರ 102 ರೂ. ಅಥವಾ ಶೇ.0.22ರಷ್ಟು ಕಡಿಮೆಯಾಗಿ ಪ್ರತಿ 10 ಗ್ರಾಂಗೆ 46,404 ರೂ. ತಲುಪಿದೆ. Participants ತಮ್ಮ ಸ್ಥಾನಗಳನ್ನು ಕಡಿತಗೊಳಿಸುವುದರಿಂದ ಚಿನ್ನದ ಬೆಲೆ ಕುಸಿತವಾಗಿದೆ ಎಂದು ವಿಶ್ಲೇಷಕರು ತಿಳಿಸಿದ್ದಾರೆ.

ಇದನ್ನೂ ಓದಿ: Earn Money : ನಿಮ್ಮ ಬಳಿ ಈ 50 ಪೈಸೆ ನಾಣ್ಯ ಇದ್ದರೆ ನೀವು ಗಳಿಸಬಹುದು 1 ಲಕ್ಷ ರೂ. : ಹೇಗೆ ಇಲ್ಲಿದೆ ನೋಡಿ

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅಮೆರಿಕನ್ ಡಾಲರ್(American Dollar Price) ಏರಿಕೆಯಾದಂತೆ ಚಿನ್ನದ ಬೆಲೆಗಳು ಕುಸಿತ ಕಂಡಿದೆ. ಸ್ಪಾಟ್ ಚಿನ್ನವು ಪ್ರತಿ ಔನ್ಸ್‌ ಗೆ ಶೇ.0.4ರಷ್ಟು ಇಳಿಕೆಯಾಗಿದ್ದು, 1,761.69  ಅಮೆರಿಕನ್ ಡಾಲರ್‌ಗೆ ‍ತಲುಪಿದೆ. ಇತ್ತೀಚಿನ ದಿನಗಳಲ್ಲಿ ಹಳದಿ ಲೋಹದ ದರದಲ್ಲಿ ಸತತ ಕುಸಿತ ಕಾಣುತ್ತಿದ್ದು, ಇದು ಚಿನ್ನ ಖರೀದಿದಾರರ ಮೊಗದಲ್ಲಿ ಮತ್ತಷ್ಟು ಖುಷಿಯನ್ನು ಹೆಚ್ಚಿಸುವಂತೆ ಮಾಡಿದೆ. ದಾಖಲೆಯ ಗರಿಷ್ಠ ಮಟ್ಟದಿಂದ ಸುಮಾರು 10 ಸಾವಿರ ರೂ.ಗಿಂತಲೂ ಕಡಿಮೆ ಬೆಲೆಯಲ್ಲಿ ಚಿನ್ನ ಸಿಗುತ್ತಿರುವುದರಿಂದ ಮಾರುಕಟ್ಟೆಯಲ್ಲಿ ಖರೀದಿಯ ಭರಾಟಯೂ ಜೋರಾಗಿದೆ.   

ದೇಶದ ವಿವಿಧ ನಗರಗಳಲ್ಲಿ ಇಂದಿನ ಚಿನ್ನದ ದರ

 ಚೆನ್ನೈನಲ್ಲಿ ಚಿನ್ನದ ದರ 22 ಕ್ಯಾರೆಟ್‌ನ ಪ್ರತಿ 10 ಗ್ರಾಂಗೆ 43,810 ರೂ.

ಮುಂಬೈನಲ್ಲಿ ಚಿನ್ನದ ಬೆಲೆ ಪ್ರತಿ 10 ಗ್ರಾಂ 22 ಕ್ಯಾರೆಟ್‌ಗೆ 45,490 ರೂ.

ದೆಹಲಿಯಲ್ಲಿ ಚಿನ್ನದ ದರ ಪ್ರತಿ 10 ಗ್ರಾಂ 22 ಕ್ಯಾರೆಟ್‌ಗೆ 45,650 ರೂ.

ಕೋಲ್ಕತ್ತಾದಲ್ಲಿ ಚಿನ್ನದ ಬೆಲೆ 22 ಕ್ಯಾರೆಟ್‌ನ ಪ್ರತಿ 10 ಗ್ರಾಂಗೆ 46,000 ರೂ.

ಬೆಂಗಳೂರಿನಲ್ಲಿ ಚಿನ್ನದ ದರ 22 ಕ್ಯಾರೆಟ್‌ನ 10 ಗ್ರಾಂಗೆ 43,510 ರೂ.

ಹೈದರಾಬಾದ್‌ನಲ್ಲಿ ಚಿನ್ನದ ಬೆಲೆ ಪ್ರತಿ 10 ಗ್ರಾಂ 22 ಕ್ಯಾರೆಟ್‌ಗೆ 43,510 ರೂ.

ಕೇರಳದಲ್ಲಿ ಚಿನ್ನದ ದರ 22 ಕ್ಯಾರೆಟ್‌ನ 10 ಗ್ರಾಂಗೆ 43,510 ರೂ.

ಪುಣೆಯಲ್ಲಿ ಚಿನ್ನದ ಬೆಲೆ ಪ್ರತಿ 10 ಗ್ರಾಂ 22 ಕ್ಯಾರೆಟ್‌ಗೆ 44,800 ರೂ.

ಅಹಮದಾಬಾದ್‌ನಲ್ಲಿ ಚಿನ್ನದ ದರ ಪ್ರತಿ 10 ಗ್ರಾಂ 22 ಕ್ಯಾರೆಟ್‌ಗೆ 44,380 ರೂ.

ಜೈಪುರದಲ್ಲಿ ಚಿನ್ನದ ಬೆಲೆ 22 ಕ್ಯಾರೆಟ್‌ನ 10 ಗ್ರಾಂಗೆ 45,500 ರೂ.

ಲಕ್ನೋದಲ್ಲಿ ಚಿನ್ನದ ದರ 22 ಕ್ಯಾರೆಟ್‌ನ 10 ಗ್ರಾಂಗೆ 44,300 ರೂ.

ಪಾಟ್ನಾದಲ್ಲಿ ಚಿನ್ನದ ಬೆಲೆ ಪ್ರತಿ 10 ಗ್ರಾಂ 22 ಕ್ಯಾರೆಟ್‌ಗೆ 44,800 ರೂ.

ನಾಗ್ಪುರದಲ್ಲಿ ಚಿನ್ನದ ದರವು 10 ಕ್ಯಾರೆಟ್‌ಗಳ ಪ್ರತಿ ಗ್ರಾಂಗೆ 45,590 ರೂ. ಇದೆ.

ಮೇಲೆ ಉಲ್ಲೇಖಿಸಿರುವ ಚಿನ್ನದ ಬೆಲೆ ಆಭರಣ ಅಂಗಡಿಯಲ್ಲಿನ ದರಗಳಿಗೆ ಹೊಂದಿಕೆಯಾಗುವುದಿಲ್ಲ ಎಂಬುದನ್ನು ಗ್ರಾಹಕರು ದಯವಿಟ್ಟು ಗಮನಿಸಬೇಕು.

ಇದನ್ನೂ ಓದಿ: Petrol, Diesel Price: ಪೆಟ್ರೋಲ್-ಡೀಸೆಲ್ ಬೆಲೆ ಮತ್ತೆ ಏರಿಕೆ; ನಿಮ್ಮ ನಗರದ ಇಂಧನ ದರ ಪರಿಶೀಲಿಸಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

More Stories

Trending News