7th Pay Commission :ಇನ್ನು ಕೇವಲ 12 ದಿನಗಳಲ್ಲಿ ಹೊರ ಬೀಳುವುದು ನಿರ್ಧಾರ !ದುಪ್ಪಟ್ಟಾಗುವುದು ಸರ್ಕಾರಿ ನೌಕರರ ವೇತನ

7th pay commission, DA Hike Updates:ಜನವರಿ 1, 2024 ರಿಂದ ಜಾರಿಗೆ ಬರುವಂತೆ ಸರ್ಕಾರಿ ನೌಕರರಿಗೆ ಶೇಕಡಾ 50 ರಷ್ಟು ತುಟ್ಟಿಭತ್ಯೆ ಹೆಚ್ಚಳ ಮಾಡಲಾಗುವುದು.   ಡಿಸೆಂಬರ್ AICPI ಸೂಚ್ಯಂಕದ ಆಧಾರದ ಮೇಲೆ ಇದನ್ನು ಜನವರಿ 30 ರೊಳಗೆ ಬಿಡುಗಡೆ ಮಾಡಲಾಗುವುದು.   

Written by - Ranjitha R K | Last Updated : Jan 19, 2024, 12:33 PM IST
  • ನೌಕರರಿಗೆ ಶೇ 50ರಷ್ಟು ತುಟ್ಟಿಭತ್ಯೆ ನೀಡಲಾಗುವುದು
  • ಟಿಎ-ಎಚ್‌ಆರ್‌ಎ ಭತ್ಯೆ ಹೆಚ್ಚಳವೂ ಸಾಧ್ಯ
  • ವೇತನದಲ್ಲಿ ಭರ್ಜರಿ ಹೆಚ್ಚಳ
7th Pay Commission :ಇನ್ನು ಕೇವಲ 12 ದಿನಗಳಲ್ಲಿ ಹೊರ ಬೀಳುವುದು ನಿರ್ಧಾರ !ದುಪ್ಪಟ್ಟಾಗುವುದು ಸರ್ಕಾರಿ ನೌಕರರ ವೇತನ    title=

7th pay commission, DA Hike Updates : ಕೇಂದ್ರ ನೌಕರರು ಮತ್ತು ಪಿಂಚಣಿದಾರರಿಗೆ ಒಳ್ಳೆಯ ಸುದ್ದಿ ಇದೆ. ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆ ಶೇ.3ರಿಂದ 4ರಷ್ಟು ಹೆಚ್ಚಾಗಲಿದೆ. ಕಾರ್ಮಿಕ ಸಚಿವಾಲಯವು ಬಿಡುಗಡೆ ಮಾಡಿರುವ ಜುಲೈ-ನವೆಂಬರ್ ಎಐಸಿಪಿಐ ಸೂಚ್ಯಂಕ ದತ್ತಾಂಶವನ್ನು ಆಧರಿಸಿ ಈ ಲೆಕ್ಕಾಚಾರವನ್ನು ಅಂದಾಜು ಮಾಡಲಾಗಿದೆ. ಡಿಸೆಂಬರ್ ಅಂಕಿಅಂಶಗಳು ಜನವರಿ 30 ರಂದು ಬಿಡುಗಡೆಯಾಗಲಿದೆ.   ಇದಾದ ನಂತರ ಎಷ್ಟು ಪ್ರಮಾಣದಲ್ಲಿ ತುಟ್ಟಿಭತ್ಯೆ ಹೆಚ್ಚಳವಾಗಲಿದೆ ಎನ್ನುವ ಅಂಶ ಸ್ಪಷ್ಟವಾಗಲಿದೆ. 

ತುಟ್ಟಿಭತ್ಯೆಯಲ್ಲಿ  50 ಪ್ರತಿಶತ ಹೆಚ್ಚಳ:
ಕಳೆದ ವರ್ಷ 2023, ಜನವರಿ ಮತ್ತು ಜುಲೈ ಸೇರಿದಂತೆ ಒಟ್ಟು  8% ದಷ್ಟು ಡಿಎ ಹೆಚ್ಚಳವಾಗಿತ್ತು. ಜುಲೈನಿಂದ ಡಿಸೆಂಬರ್ 2023 ರವರೆಗಿನ AICPI ಸೂಚ್ಯಂಕ ಡೇಟಾವನ್ನು ಅವಲಂಬಿಸಿ ಮುಂದಿನ ಡಿಎಯನ್ನು ಜನವರಿ 2024 ರಿಂದ ಪರಿಷ್ಕರಿಸಲಾಗುವುದು. ನವೆಂಬರ್ ವೇಳೆಗೆ, ಈ ಅಂಕಿ ಅಂಶ 139.1 ತಲುಪಿದ್ದು, ಡಿಎ ಸ್ಕೋರ್ ಶೇಕಡಾ 49.68ಕ್ಕೆ ತಲುಪಿದೆ. ಆದ್ದರಿಂದ ಡಿಎಯಲ್ಲಿ ಶೇಕಡಾ 4 ಹೆಚ್ಚಳ ಖಚಿತ ಎಂದೇ ಹೇಳಲಾಗುತ್ತಿದೆ. ಪ್ರಸ್ತುತ ಕೇಂದ್ರ ನೌಕರರು 46% ಡಿಎ ಪ್ರಯೋಜನವನ್ನು ಪಡೆಯುತ್ತಿದ್ದಾರೆ. ಇದೀಗ 4% ಹೆಚ್ಚಳವಾದರೆ ತುಟ್ಟಿಭತ್ಯೆ 50% ಕ್ಕೆ ಏರುತ್ತದೆ. ಮುಂದಿನ ಡಿಎ ಜನವರಿ 2024 ರಿಂದ ಹೆಚ್ಚಿಸಲಾಗುವುದು. ಇದು ಮುಂದಿನ ಜೂನ್ ವರೆಗೆ ಅನ್ವಯವಾಗುತ್ತದೆ. ಹೋಳಿ, ಲೋಕಸಭೆ ಚುನಾವಣೆ ದಿನಾಂಕಗಳು ಮತ್ತು ನೀತಿ ಸಂಹಿತೆ ಜಾರಿಗೆ ಬರುವ ಮೊದಲು ಹೊಸ ದರಗಳು ಯಾವಾಗ ಬೇಕಾದರೂ ಪ್ರಕಟವಾಗಬಹುದು ಎದ್ನು ಹೇಳಲಾಗುತ್ತಿದೆ.

ಇದನ್ನೂ ಓದಿ : 2024ರಲ್ಲಿಯೂ ಭಾರತದ ಪ್ರಬಲ ಬ್ರ್ಯಾಂಡ್ ಆಗಿ ಮುಂದುವರಿದ ಜಿಯೋ: ಬ್ರ್ಯಾಂಡ್ ಫೈನಾನ್ಸ್ ವರದಿ

ಮಾಧ್ಯಮ ವರದಿಗಳ ಪ್ರಕಾರ, DA 50% ಅಥವಾ 51% ತಲುಪಿದರೆ, ನೌಕರರ ವೇತನವನ್ನು ಪರಿಷ್ಕರಿಸಲಾಗುವುದು. 7 ನೇ ವೇತನ ಆಯೋಗದ ರಚನೆಯೊಂದಿಗೆ, DA ಅನ್ನು ಪರಿಷ್ಕರಿಸುವ ನಿಯಮಗಳನ್ನು ಕೇಂದ್ರ ಸರ್ಕಾರ ನಿರ್ಧರಿಸಿತ್ತು. ಈ ಹಿನ್ನೆಲೆಯಲ್ಲಿ  DA 50% ತಲುಪಿದಾಗ ಅದನ್ನು ಮೂಲ ವೇತನಕ್ಕೆ ಸೇರಿಸಲಾಗುವುದು. ಇದಾದ ನಂತರ ತುಟ್ಟಿಭತ್ಯೆಯನ್ನು ಶೂನ್ಯದಿಂದ ಲೆಕ್ಕಾಚಾರ ಹಾಕಲಾಗುವುದು. 

ಟಿಎ-ಎಚ್‌ಆರ್‌ಎ ಭತ್ಯೆಯಲ್ಲಿಯೂ ಹೆಚ್ಚಳ ಸಾಧ್ಯ:
ತುಟ್ಟಿಭತ್ಯೆ ಹೆಚ್ಚಳದ ಜತೆಗೆ ಕೇಂದ್ರದ ಮೋದಿ ಸರ್ಕಾರ ಮನೆ ಬಾಡಿಗೆ ಭತ್ಯೆಯನ್ನೂ ಶೇ.3ರಷ್ಟು ಹೆಚ್ಚಿಸಬಹುದು ಎಂದು ಹೇಳಲಾಗುತ್ತಿದೆ. ಇದಾದ ಬಳಿಕ ಎಚ್‌ಆರ್‌ಎ ಶೇ.27ರಿಂದ 30ಕ್ಕೆ ಏರಿಕೆಯಾಗಲಿದೆ. ಇದರೊಂದಿಗೆ ಗ್ರೇಡ್ ಗೆ ಅನುಸಾರವಾಗಿ ಪ್ರಯಾಣ ಭತ್ಯೆಯಲ್ಲಿ ಕೂಡಾ ಹೆಚ್ಚಳವಾಗಲಿದೆ. 

ಇದನ್ನೂ ಓದಿ :  ಕೆಲಸ ಬದಲಾಯಿಸುವಾಗ EPFಗೆ ಸಬಂಧಿಸಿದ ಈ ಕೆಲಸವನ್ನು ತಪ್ಪದೇ ಮಾಡಬೇಕು

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

 

Trending News