PM Svanidhi Yojana : ದೇಶದಲ್ಲಿ ಕರೋನಾ ಬಿಕ್ಕಟ್ಟಿನ ಸಂದರ್ಭದಲ್ಲಿ ಸಣ್ಣ ವ್ಯಾಪಾರಿಗಳಿಗೆ ಹಣಕಾಸಿನ ನೆರವು ನೀಡುವ ಸಲುವಾಗಿ ಕೇಂದ್ರ ಸರ್ಕಾರ ಅನೇಕ ಕ್ರಮಗಳನ್ನು ಕೈಗೆತ್ತಿಕೊಂಡಿದೆ. ಅವುಗಳಲ್ಲಿ ಪ್ರಧಾನ ಮಂತ್ರಿ ಸ್ವಾನಿಧಿ ಯೋಜನೆಯೂ ಒಂದು. ಸಣ್ಣ ಉದ್ಯಮ ಆರಂಭಿಸಲು ಬಯಸುವವರಿಗೆ ಸಾಲದ ನೆರವು ನೀಡುವ ಯೋಜನೆ ಇದಾಗಿದೆ. ಸರ್ಕಾರದ ಈ ಯೋಜನೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಯೋಜನೆ ವಿಸ್ತರಿಸಿದ ಸರ್ಕಾರ :
ಕರೋನಾ ಅವಧಿಯಲ್ಲಿ ಹೆಚ್ಚು ತೊಂದರೆಗೆ ಒಳಗಾಗಿದ್ದವರಲ್ಲಿ ಬೀದಿ ವ್ಯಾಪಾರಿಗಳು ಕೂಡಾ ಸೇರಿದ್ದಾರೆ. ಸಂಪೂರ್ಣ ನಷ್ಟಕ್ಕೆ ಗುರಿಯಾದ ಅವರ ವ್ಯಾಪಾರವನ್ನು ಮೇಲೆತ್ತುವ ಮತ್ತು ಅವರ ಜೀವನೋಪಾಯವನ್ನು ಸುಧಾರಿಸುವ ನಿಟ್ಟಿನಲ್ಲಿ ಸರ್ಕಾರ ಪ್ರಧಾನ ಮಂತ್ರಿ ಸ್ವಾನಿಧಿ ಯೋಜನೆ ಜಾರಿಗೆ ತಂದಿದೆ. ಈ ಯೋಜನೆಗೆ ಜನರಿಂದ ಸಿಗುತ್ತಿರುವ ಭಾರೀ ಪ್ರತಿಕ್ರಿಯೆಯಿಂದಾಗಿ ಈ ಯೋಜನೆಯನ್ನು ಮತ್ತಷ್ಟು ವಿಸ್ತರಿಸಲಾಗಿದೆ.
ಇದನ್ನೂ ಓದಿ : LIC Amritbal Policy: ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಅಮೃತಬಲ್ ಪಾಲಿಸಿ, ಇದರ ವಿಶೇಷತೆ ಬಗ್ಗೆ ಮಹತ್ವದ ಮಾಹಿತಿ
ಯಾರಿಗೆ ಸಿಗುತ್ತದೆ ಸಾಲ ? :
ಪ್ರಧಾನ ಮಂತ್ರಿ ಸ್ವಾನಿಧಿ ಯೋಜನೆಯಡಿ, ಬೀದಿ ವ್ಯಾಪಾರಿಗಳು ತಮ್ಮ ವ್ಯವಹಾರಗಳನ್ನು ನಡೆಸಲು ಸರ್ಕಾರದಿಂದ ಸಾಲವನ್ನು ಪಡೆಯಬಹುದು. ತರಕಾರಿ ಮಾರಾಟಗಾರರು, ಹಣ್ಣು ಮತ್ತು ಹೂವು ಮಾರಾಟಗಾರರು, ಬೀದಿ ಬದಿ ವ್ಯಾಪಾರಿಗಳು ಮತ್ತು ಸಣ್ಣ ಫಾಸ್ಟ್ ಫುಡ್ ಮಳಿಗೆಗಳನ್ನು ನಡೆಸುವವರು ಈ ಸಾಲವನ್ನು ಪಡೆಯಬಹುದು.
50 ಸಾವಿರ ಸಾಲ ಪಡೆಯುವುದು ಹೇಗೆ? :
ಪ್ರಧಾನ ಮಂತ್ರಿ ಸ್ವಾನಿದಿ ಯೋಜನೆಯಡಿ ಕೇಂದ್ರ ಸರ್ಕಾರ 50 ಸಾವಿರದವರೆಗೆ ಸಾಲ ನೀಡುತ್ತದೆ. ಆದರೆ, 50 ಸಾವಿರ ರೂಪಾಯಿ ಸಾಲವನ್ನು ಪಡೆಯಬೇಕಾದರೆ ನೀವು ಮೊದಲು ತೆಗೆದುಕೊಂಡಿರುವ ಸಾಲವನ್ನು ಸರಿಯಾದ ಸಮಯಕ್ಕೆ ತೀರಿಸುವ ಮೂಲಕ ವಿಶ್ವಾಸಾರ್ಹತೆಯನ್ನು ಸಾಬೀತುಪಡಿಸಬೇಕು. ಈ ಯೋಜನೆಯಡಿಯಲ್ಲಿ, ಮೊದಲು 10,000 ರೂ ಸಾಲ ನೀಡಲಾಗುತ್ತದೆ. ಈ ಸಾಲವನ್ನು ನಿಯಮಿತ ಅವಧಿಯೊಳಗೆ ಪಾವತಿಸಿದರೆ ನಂತರ ಎರಡನೇ ಸಾಲವಾಗಿ 20,000 ರೂ. ನೀಡಲಾಗುತ್ತದೆ.
ಅದನ್ನೂ ಸಕಾಲದಲ್ಲಿ ಮರುಪಾವತಿ ಮಾಡಿದರೆ ನಂತರ 50 ಸಾವಿರ ಸಾಲ ಸಿಗುತ್ತದೆ. ಈ ಯೋಜನೆಯ ಮತ್ತೊಂದು ವೈಶಿಷ್ಟ್ಯವೆಂದರೆ ಈ ಸಾಲವು ಸರ್ಕಾರದ ಸಹಾಯಧನದೊಂದಿಗೆ ಲಭ್ಯವಿದೆ.
ಇದನ್ನೂ ಓದಿ : Tax Demand: ತೆರಿಗೆ ಪಾವತಿದಾರರಿಗೆ 1 ಲಕ್ಷ ರೂ.ಗಳ ತೆರಿಗೆ ಬಾಕಿ ಪಾವತಿಯಿಂದ ಸಿಕ್ತು ಮುಕ್ತಿ, ಇಲ್ಲಿದೆ ನಿಮಗೊಂದು ಲಾಭದ ಸುದ್ದಿ
ಡಿಜಿಟಲ್ ವಹಿವಾಟಿನ ಮೂಲಕ ಹಣ ವರ್ಗ :
ಪ್ರಧಾನ ಮಂತ್ರಿ ಸ್ವಾನಿದಿ ಯೋಜನೆಯಡಿಯಲ್ಲಿ ಲೋನ್ ಪಡೆಯಲು ಯಾವುದೇ ರೀತಿಯ ಶ್ಯುರಿಟಿ ನೀಡುವ ಅಗತ್ಯವಿಲ್ಲ.ನಿಮ್ಮ ಅರ್ಜಿಯನ್ನು ಅನುಮೋದಿಸಿದ ನಂತರ, ಸಾಲದ ಮೊತ್ತವನ್ನು ಡಿಜಿಟಲ್ ವಹಿವಾಟಿನ ಮೂಲಕ ನಿಮ್ಮ ಖಾತೆಗೆ ವರ್ಗಾಯಿಸಲಾಗುತ್ತದೆ.
ಸಾಲ ಪಡೆಯಲು ಅಗತ್ಯವಿರುವ ದಾಖಲೆಗಳು :
ಪ್ರಧಾನ ಮಂತ್ರಿ ಸ್ವಾನಿಧಿ ಯೋಜನೆಯಡಿ ಸಾಲ ಪಡೆಯಲು ನಿಮ್ಮ ಬಳಿ ಆಧಾರ್ ಕಾರ್ಡ್ ಇದ್ದರೆ ಸಾಕು. ಬೇರೆ ಯಾವುದೇ ದಾಖಲೆಯ ಅಗತ್ಯವಿಲ್ಲ. ಇಲ್ಲಿ ತೆಗೆದುಕೊಂಡ ಸಾಲವನ್ನು ಒಂದು ವರ್ಷದೊಳಗೆ ಸಾಲವನ್ನು ಮರುಪಾವತಿ ಮಾಡಬಹುದು. ಇದನ್ನು ಮಾಸಿಕ ಕಂತುಗಳಲ್ಲಿಯೂ ಮರುಪಾವತಿ ಮಾಡಬಹುದು. ನೀವು ಯಾವುದೇ ಸರ್ಕಾರಿ ಬ್ಯಾಂಕ್‌ನಲ್ಲಿ ಸ್ವಾನಿಧಿ ಯೋಜನೆಯಡಿ ಸಾಲಕ್ಕಾಗಿ ಅರ್ಜಿ ಸಲ್ಲಿಸಬಹುದು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=I87DcFM35WY
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.