ಬೆಂಗಳೂರು : Drop In Vegetable price :ಇತ್ತೀಚಿನ ದಿನಗಳಲ್ಲಿ ತರಕಾರಿ ದರ ವಿಪರೀತವಾಗಿ ಏರಿಕೆ ಕಂಡಿತ್ತು. ದಿನೇ ದಿನೇ ತರಕಾರಿ ಬೆಲೆ ಗಗನದತ್ತ ಮುಖ ಮಾಡುತ್ತಿತ್ತು. ಆದರೆ ಇದೀಗ ಜನ ಸಾಮಾನ್ಯರಿಗೆ ತರಕಾರಿ ದರ ಏರಿಕೆಯಿಂದ ಸ್ವಲ್ಪ ರಿಲೀಫ್ ಸಿಕ್ಕಿದೆ. ರಾಕೆಟ್ ವೇಗದಲ್ಲಿ ಏರುತ್ತಿದ್ದ ತರಕಾರಿ ದರದಲ್ಲಿ ಇಳಿಕೆ ಕಂಡು ಬಂದಿದೆ.
ಚಳಿಗಾಲದಲ್ಲಿ ತರಕಾರಿ ಬೆಲೆ ಗ್ರಾಹಕರ ಜೇಬು ಸುಡುತ್ತಿತ್ತು. ಯಾವ ತರಕಾರಿ ಎತ್ತಿಕೊಂಡರೂ ದುಬಾರಿ ಬೆಲೆ ನಡುಗಿಸಿ ಬಿಡುತ್ತಿತ್ತು. ಆದರೆ ಇದೀಗ ತರಕಾರಿಗಳು ಮತ್ತೆ ಕೈಗೆಟುಕುವಂತಾಗಿವೆ. ಆದರೆ ಬೇರೆ ತರಕಾರಿಗಳ ದರ ಇಳಿಕೆಯಾದರೂ ಬೆಳ್ಳುಳ್ಳಿ ಬೆಲೆ ಮಾತ್ರ ಸತತವಾಗಿ ಏರುತ್ತಲೇ ಇದೆ.
ಇದನ್ನೂ ಓದಿ : ಶೀಘ್ರದಲ್ಲೇ ಜಿಪಿಎಸ್ ಆಧಾರಿತ ಟೋಲಿಂಗ್ ವ್ಯವಸ್ಥೆ ಜಾರಿ !ಕ್ರಮಿಸುವ ದೂರಕ್ಕಷ್ಟೇ ಟೋಲ್ ಪಾವತಿ
ಕಳೆದ ತಿಂಗಳು ಒಂದು ಕಂತೆ ಮೆಂತ್ಯೆ, ಸಬ್ಬಸಿಗೆ ಸೊಪ್ಪಿಗೆ 30 ರೂ.ಇತ್ತು. ಆದರೆ ಈ ದರ 10-20ರೂ.ಗೆ ಇಳಿದಿದೆ. 100 ರೂ. ದಾಟಿದ್ದ ಬೀನ್ಸ್, ಕ್ಯಾರೆಟ್, 60 ರೂ.ವರೆಗೆ ತಲುಪಿದ್ದ ಮೂಲಂಗಿ ದರವೂ ಇಳಿಕೆಯಾಗಿದೆ. ಟೊಮೇಟೊ ಕೂಡಾ ಕೆ.ಜಿ.ಗೆ 20-26 ರೂಪಾಯಿಗೆ ಸಿಗುವಂತಾಗಿದೆ. 100 ರೂಪಾಯಿಗೆ 5 ಕೆಜಿ ಈರುಳ್ಳಿ ಸಿಗುತ್ತಿದೆ.
ದರ ಇಳಿಕೆಗೆ ಕಾರಣವೇನು? :
1. ನೆರೆ ರಾಜ್ಯದಿಂದ ಕೆಲ ತರಕಾರಿಗಳು ಬೆಂಗಳೂರಿಗೆ ಬರುತ್ತಿವೆ
2. ಆನೇಕಲ್, ತುಮಕೂರು, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಸೊಪ್ಪು-ತರಕಾರಿ ಬೆಳೆಯಾಲಾಗುತ್ತಿದೆ.
3. ಹೈಬ್ರಿಡ್ ತಳಿ ಬೆಳೆಯುವವರ ಸಂಖ್ಯಲ್ಲಿ ಹೆಚ್ಚಳವಾಗಿದೆ. ಇದರಿಂದ ಅಧಿಕ ಇಳುವರಿ ಬರುತ್ತಿದೆ.
4. ನೀರಿಗೆ ಸಮಸ್ಯೆಯಿರುವುದರಿಂದ ಪಾಲಿಹೌಸ್ ಮೊರೆ ಹೋದ ರೈತರು
5. ಮಹಾರಾಷ್ಟ್ರದಲ್ಲಿ ಈರುಳ್ಳಿ ಹೊಸ ಬೆಳೆ ಬಂದಿದೆ. ಹೀಗಾಗಿ ಈರುಳ್ಳಿ ದರ ಇಳಿಕೆಯಾಗಿದೆ.
ಇದನ್ನೂ ಓದಿ : FD Rate: ICICI ಬ್ಯಾಂಕ್ ಠೇವಣಿ ದರ ಹೆಚ್ಚಳ: ಇತರ ಬ್ಯಾಂಕ್‌ಗಳ ಬಡ್ಡಿದರ ಎಷ್ಟಿವೆ?
ಹಾಪ್‌ಕಾಮ್ಸ್ ತರಕಾರಿ ದರ :
1. ಬೀನ್ಸ್ 68 ರೂಪಾಯಿ
2. ಗುಂಡು ಬದನೆ 40 ರೂಪಾಯಿ
3. ಸೌತೆಕಾಯಿ 39 ರೂಪಾಯಿ
4. ಮೂಲಂಗಿ 27 ರೂಪಾಯಿ
5. ಬೀಟ್‌ರೂಟ್ 51 ರೂಪಾಯಿ
6. ನಾಟಿ ಕ್ಯಾರೆಟ್ 74 ರೂಪಾಯಿ
7. ಎಲೆಕೋಸು 46 ರೂಪಾಯಿ
8. ಟೊಮೇಟೊ 26 ರೂಪಾಯಿ
9. ಹೀರೇಕಾಯಿ 67 ರೂಪಾಯಿ
10. ಬೂದಗುಂಬಳ 27 ರೂಪಾಯಿ
11. ಏಲಕ್ಕಿ ಬಾಳೆ 57 ರೂಪಾಯಿ
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=I87DcFM35WY
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.