ಹಣ್ಣಿನ ರಾಜಾ ಮಾವಿಗೆ ಚಿನ್ನದ ಬೆಲೆ : ಖರೀದಿಗೆ ಹಿಂದೇಟು ಹಾಕುತ್ತಿರುವ ಗ್ರಾಹಕರು

ಹುಬ್ಬಳ್ಳಿ ಧಾರವಾಡ ಸೇರಿದಂತೆ ಈ ಭಾಗದಲ್ಲಿ ಮಾವಿನ ಹಣ್ಣಿನ ಬೆಲೆ ಏರಿಕೆ‌ ಆಗಿದ್ದು ಮಾವು ಪ್ರಿಯರಿಗೆ ಅಸಮಾಧಾನ ತಂದಿದೆ.ಬೆಳಗಾವಿ ಪ್ರದೇಶದಲ್ಲಿ ಬೆಳೆಯುವ ಸಿಂಧೂರ ತಳಿಯ ಮಾವಿನ ಹಣ್ಣು ಸ್ಥಳೀಯವಾಗಿ ಮಾರುಕಟ್ಟೆಗೆ ಅವಕವಾಗುವ ಬದಾಮಿ ತಳಿಗೆ ಕೆ.ಜಿಗೆ 400ರಿಂದ 4 50ವರೆಗೆ ಬೆಲೆ ಇದೆ. ಇದರಿಂದ ಗ್ರಾಹಕರು ಆತಂಕದಲ್ಲಿ ಇದ್ದಾರೆ.

Written by - Ranjitha R K | Last Updated : Jun 7, 2024, 12:42 PM IST
  • ಮಾವಿನ ಹಣ್ಣಿನ ಆವಕ ಹೆಚ್ಚಾಗಿದೆ.
  • ಈ ಭಾಗದಲ್ಲಿ ಮಾವಿನ ಹಣ್ಣಿನ ಬೆಲೆ ಏರಿಕೆ‌
  • ಮಾವಿನ ಸೀಜನ್ ಮುಗಿಯಲು ಬಂದರು ಕೂಡಾ ಬೆಲೆ ಹೆಚ್ಚಿದೆ
ಹಣ್ಣಿನ ರಾಜಾ ಮಾವಿಗೆ ಚಿನ್ನದ ಬೆಲೆ : ಖರೀದಿಗೆ ಹಿಂದೇಟು ಹಾಕುತ್ತಿರುವ ಗ್ರಾಹಕರು  title=

ಹುಬ್ಬಳ್ಳಿ : ಈ ಬಾರಿ ಸಾಕಷ್ಟು ಮಳೆ ಬೀಳುತ್ತಿದೆ.ಹುಬ್ಬಳ್ಳಿ ಧಾರವಾಡ ಮಾರುಕಟ್ಟೆಗೆ ಹಣ್ಣುಗಳ ರಾಜ ಎಂದೇ ಹೆಸರಾದ ಮಾವಿನ ಹಣ್ಣಿನ ಆವಕ ಹೆಚ್ಚಾಗಿದೆ.ಇಷ್ಟಿದ್ದರೂ ಮಾವಿನ ಹಣ್ಣಿನ ಬೆಲೆ ಮಾತ್ರ ಕಡಿಮೆಯಾಗುತ್ತಿಲ್ಲ. ಮಾವಿನ ಹಣ್ಣಿನ ದುಬಾರಿ ಬೆಲೆಯಿಂದಾಗಿ ಗ್ರಾಹಕರು ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆ. 

ಹುಬ್ಬಳ್ಳಿ ಧಾರವಾಡ ಸೇರಿದಂತೆ ಈ ಭಾಗದಲ್ಲಿ ಮಾವಿನ ಹಣ್ಣಿನ ಬೆಲೆ ಏರಿಕೆ‌ ಆಗಿದ್ದು ಮಾವು ಪ್ರಿಯರಿಗೆ ಅಸಮಾಧಾನ ತಂದಿದೆ.ಆಪೂಸ್,ಕಲ್ಕಿ, ಬದಾಮಿ ಮಲ್ಯೂಬಾ ತಳಿಯ ಮಾವಿನ ಹಣ್ಣುಗಳು ಇನ್ನೂ ಸಹ ನಗರದ ಮಾರುಕಟ್ಟೆಗೆ ಬರುತ್ತಿವೆ.ರಸಪೂರಿ ಹಣ್ಣು ಸಹ ಗೋದಾಮಿನಲ್ಲಿ ದಾಸ್ತಾನಾಗಿದೆ.ಇಲ್ಲಿನ ಜನತಾ ಬಜಾರನಲ್ಲಿ ವ್ಯಾಪಾರಿಗಳು ಮಾವಿನ ಹಣ್ಣುಗಳನ್ನು ಮಾರಾಟಕ್ಕೆ ಇಟ್ಟಿದ್ದಾರೆ.ಈ ಭಾಗದಲ್ಲಿ ಬಹು ಬೇಡಿಕೆ ಇರುವ ಆಪೂಸ್ ತಳಿಯ ಮಾವಿನ ಹಣ್ಣಿಗೆ ಸದ್ಯ ಕೆ.ಜಿಗೆ 600ರಿಂದ 700 ರವರೆಗೆ ದರ ಇದೆ.ಬೆಳಗಾವಿ ಪ್ರದೇಶದಲ್ಲಿ ಬೆಳೆಯುವ ಸಿಂಧೂರ ತಳಿಯ ಮಾವಿನ ಹಣ್ಣು ಸ್ಥಳೀಯವಾಗಿ ಮಾರುಕಟ್ಟೆಗೆ ಅವಕವಾಗುವ ಬದಾಮಿ ತಳಿಗೆ ಕೆ.ಜಿಗೆ 400ರಿಂದ 4 50ವರೆಗೆ ಬೆಲೆ ಇದೆ. ಇದರಿಂದ ಗ್ರಾಹಕರು ಆತಂಕದಲ್ಲಿ ಇದ್ದಾರೆ.

ಇದನ್ನೂ ಓದಿ : ನಿಮ್ಮ ಮಗುವಿನ ಹೆಸರಿನಲ್ಲಿ ಕೇವಲ 6 ರೂ. ಪಾವತಿಸಿದರೆ ಸಿಗುವುದು ಒಂದು ಲಕ್ಷ ರೂಪಾಯಿ!ಅಂಚೆ ಕಚೇರಿಯ ಸೂಪರ್ ಸ್ಕೀಮ್

ನಗರದ ಈದ್ಗಾ ಮೈದಾನ, ಕೊಪ್ಪೀಕರ ರಸ್ತೆ, ದಾಜೀಬಾನಪೇಟೆ,‌ಜನತಾ ಬಜಾರ್ ಮುಂತಾದ ಕಡೆಗಳಲ್ಲಿ ಮಾವಿನ ಹಣ್ಣುಗಳನ್ನು ಕೆ.ಜಿ ಲೆಕ್ಕಕ್ಕಿಂತ ಹೆಚ್ಚಾಗಿ ಡಜನ್ ಲೆಕ್ಕದಲ್ಲಿ  ಖರೀದಿಸಲಾಗುತ್ತಿತ್ತು. ಒಂದು ಡಜನ್ ಅಪೂಸ್ ಹಣ್ಣಿಗೆ ಚಿಲ್ಲರೆ ವ್ಯಾಪಾರಿಗಳು 600ರಿಂದ 800 ದರ ಹೇಳುತ್ತಿದ್ದಾರೆ. ಸಾಮಾನ್ಯವಾಗಿ ಏಪ್ರಿಲ್  ಆರಂಭದಲ್ಲಿ ಮಾರುಕಟ್ಟೆಗೆ ಆವಕವಾಗುತ್ತಿದ್ದುಇನ್ನು ಮುಂದುವರಿದಿದೆ.ಕಳೆದ ವರ್ಷ ಮಳೆ ಕೊರತೆಯಿಂದಾಗಿ ಇಳುವರಿಯೂ ಕುಸಿದಿದೆ.ಧಾರವಾಡ ಜಿಲ್ಲೆಯ ನವಲಗುಂದ, ಕುಂದಗೋಳ,ಕಲಘಟಗಿ, ಅಳ್ಳಾವರ, ಅಣ್ಣಿಗೇರಿ ಸೇರಿದಂತೆ ವಿವಿಧ ಕಡೆಗಳಲ್ಲಿ ಮಾವಿನ ತೋಟಗಳಿವೆ.
ಬದಾಮಿ (ಅಲಾತೀನ್ಸ್), ದಶೇರಿ,ತೋತಾಪುರಿ,ಮಲ್ಲಿಕಾ ತಳಿಯ ಮಾವು ಬೆಳೆಯಲಾಗಿದೆ.

'ಕಳೆದ ವರ್ಷಕ್ಕೆ ಹೋಲಿಸಿದರೆ, ಈ ಬಾರಿ ಮಾವಿನ ಹಣ್ಣುಗಳ ಗಾತ್ರ ಕಡಿಮೆಯಾಗಿದೆ.ಮಳೆಯ ಕೊರತೆ,ನೀರಿನ ಅಭಾವದಿಂದ ಮಾವಿನ ಗಿಡಗಳಿಗೆ ಪ್ರಮುಖವಾಗಿ ತೇವಾಂಶದ ಕೊರತೆ ಕಾಡಿದೆ.ಕಲ್ಪಿ,ಸಿಂಧೂರ,ಬದಾಮಿ, ಮಲ್ಲಿಕಾ,ತೋತಾಪುರಿ ತಳಿಯ ಮಾವಿನ ಹಣ್ಣುಗಳನ್ನು ತರಿಸಲಾಗುತ್ತಿದೆ.  ಹಣ್ಣು ಕೆಜಿಗೆ 400 ರಿಂದ 450 ರವರೆಗೆ ಮಾರಾಟ ಮಾಡಲಾಗುತ್ತಿದೆ.

ಇದನ್ನೂ ಓದಿ : ಮಿಡಲ್‌ ಕ್ಲಾಸ್‌ ಫ್ಯಾಮಿಲಿಗೆ ಸೇರಿದ ನೀತಾ! ಮುಖೇಶ್ ಅಂಬಾನಿಯವರನ್ನು ಮದುವೆಯಾಗುವ ಮುನ್ನ ಯಾವ ಕೆಲಸ ಮಾಡಿದ್ದರು ಗೊತ್ತಾ?

ಮಾವಿನ ಸೀಜನ್ ಮುಗಿಯಲು ಬಂದರು ಕೂಡಾ ಬೆಲೆ ಹೆಚ್ಚಿದೆ. ಆದ್ದರಿಂದ ವ್ಯಾಪಾರಸ್ಥರು ಸಹ ಜನರ ಚೌಕಾಸಿಗೆ ಬೇಸರ ವ್ಯಕ್ತಪಡಿಸಿದ್ದಾರೆ.
ಪ್ರತಿ ದಿನ ಸರಾಸರಿ 30ರಿಂದ 40 ಡಜನ್ ಹಣ್ಣುಗಳು ಮಾರಾಟವಾಗುತ್ತಿವೆ. ಮಾವಿನ ಹಣ್ಣು ದುಬಾರಿ ಆಗಿರುವ ಕಾರಣ ಜನ ಖರೀದಿಗೆ ಕೂಡಾ ಹಿಂದೇಟು ಹಾಕುತ್ತಿದ್ದಾರೆ. ಸಹಜವಾಗಿಯೇ ಮಾವು ಪ್ರಿಯರಿಗೆ ಈ ಬಾರಿ ಮಾವಿನ ಹಣ್ಣು  ಕಹಿಯಾಗಿರುವುದಂತೂ ಸುಳ್ಳಲ್ಲ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News