Bank Alert: ಈ ಬ್ಯಾಂಕಿನ ಎಟಿಎಂ, ಚೆಕ್ ಬುಕ್, ಹಣ ವಿತ್ ಡ್ರಾ ನಿಯಮಗಳಲ್ಲಿ ಬದಲಾವಣೆ, ಆಗಸ್ಟ್ 1 ರಿಂದ ಅನ್ವಯ

ICICI Bank Alert: ಐಸಿಐಸಿಐ ಬ್ಯಾಂಕ್ ಗ್ರಾಹಕರು ಆಗಸ್ಟ್ 1 ರಿಂದ ಎಟಿಎಂ ವಹಿವಾಟು ಅಥವಾ ಹಣವನ್ನು ಹಿಂಪಡೆಯಲು ಹೊಸ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಆದಾಗ್ಯೂ, ಅನೇಕ ಸೇವೆಗಳಲ್ಲಿ, ಬ್ಯಾಂಕ್ ತನ್ನ ಗ್ರಾಹಕರಿಗೆ ಉತ್ತಮ ಪ್ರಕಟಣೆಗಳನ್ನು ಸಹ ನೀಡಿದೆ.

Written by - Yashaswini V | Last Updated : Jul 6, 2021, 08:22 AM IST
  • ಐಸಿಐಸಿಐ ಬ್ಯಾಂಕಿನ ಹೊಸ ಸೇವಾ ಶುಲ್ಕಗಳು ಆಗಸ್ಟ್ 1 ರಿಂದ ಅನ್ವಯವಾಗುತ್ತವೆ
  • ಐಸಿಐಸಿಐ ಬ್ಯಾಂಕ್ ನಗದು ಠೇವಣಿ ಶುಲ್ಕವನ್ನು ಬದಲಾಯಿಸುತ್ತದೆ
  • ಐಸಿಐಸಿಐ ಬ್ಯಾಂಕ್ ಎಟಿಎಂ ಇಂಟರ್ಚೇಂಜ್ ಶುಲ್ಕವನ್ನು ಸಹ ಪರಿಷ್ಕರಿಸಿದೆ
Bank Alert: ಈ ಬ್ಯಾಂಕಿನ ಎಟಿಎಂ, ಚೆಕ್ ಬುಕ್, ಹಣ ವಿತ್ ಡ್ರಾ ನಿಯಮಗಳಲ್ಲಿ ಬದಲಾವಣೆ, ಆಗಸ್ಟ್ 1 ರಿಂದ ಅನ್ವಯ  title=
ಐಸಿಐಸಿಐ ಬ್ಯಾಂಕಿನ ಹೊಸ ಸೇವಾ ಶುಲ್ಕಗಳು ಆಗಸ್ಟ್ 1 ರಿಂದ ಅನ್ವಯವಾಗುತ್ತವೆ

ನವದೆಹಲಿ:  ICICI Bank Alert- ದೇಶದ ಅತಿದೊಡ್ಡ ಖಾಸಗಿ ಬ್ಯಾಂಕ್ ಐಸಿಐಸಿಐ ಬ್ಯಾಂಕಿನ ಖಾತೆದಾರರಿಗೆ ಪ್ರಮುಖ ಸುದ್ದಿ ಇದೆ. ನಗದು ವಹಿವಾಟು, ಎಟಿಎಂ ಇಂಟರ್ಚಾರ್ಜ್ ಮತ್ತು ಚೆಕ್ ಬುಕ್ ಶುಲ್ಕದ ದರವನ್ನು ಬ್ಯಾಂಕ್ ಪರಿಷ್ಕರಿಸಲಿದೆ. ಈ ಬದಲಾವಣೆಗಳು ಮುಂದಿನ ತಿಂಗಳಿನಿಂದ ಅವರ ದೇಶೀಯ ಉಳಿತಾಯ ಖಾತೆದಾರರಿಗೆ ಅನ್ವಯವಾಗುತ್ತವೆ.

ಐಸಿಐಸಿಐ ಬ್ಯಾಂಕ್ (ICICI Bank) ವೆಬ್‌ಸೈಟ್ ಪ್ರಕಾರ, ಪರಿಷ್ಕೃತ ಶುಲ್ಕಗಳು ಆಗಸ್ಟ್ 1, 2021 ರಿಂದ ಅನ್ವಯವಾಗುತ್ತವೆ. ನಗದು ವಹಿವಾಟು ಶುಲ್ಕದ ಮಿತಿಯಲ್ಲಿನ ಬದಲಾವಣೆಯು ಖಾತೆಯ ಪ್ರಕಾರಕ್ಕೆ ಅನುಗುಣವಾಗಿರುತ್ತದೆ. ಹಾಗಾದರೆ ನಿಮ್ಮ ಖಾತೆಯಲ್ಲಿ ಯಾವ ಸೇವೆಗೆ ಎಷ್ಟು ಶುಲ್ಕ ವಿಧಿಸಲಾಗುವುದು ಎಂದು ತಿಳಿಯಿರಿ.

ಐಸಿಐಸಿಐ ಬ್ಯಾಂಕ್ ಚೆಕ್ ಬುಕ್ ಶುಲ್ಕವನ್ನು ಬದಲಾಯಿಸಿತು:
ಪ್ರಸ್ತುತ, ಐಸಿಐಸಿಐ ಬ್ಯಾಂಕ್ ಖಾತೆದಾರರು ಒಂದು ವರ್ಷದಲ್ಲಿ 20 ಚೆಕ್ ಲೀವ್ಸ್ ಹೊಂದಿರುವ ಚೆಕ್ ಬುಕ್ (Chequebook) ಅನ್ನು ಉಚಿತವಾಗಿ ಪಡೆಯುತ್ತಿದ್ದರು. ಅದರ ನಂತರ ಹೆಚ್ಚಿನ ಚೆಕ್ ಲೀವ್ಸ್ ಅಗತ್ಯವಿದ್ದರೆ, ಗ್ರಾಹಕರು 10 ಲೀವ್ಸ್ ಗಳನ್ನು ಹೊಂದಿರುವ ಚೆಕ್ ಬುಕ್ಗಾಗಿ 20 ರೂ. ಪಾವತಿಸಬೇಕಾಗಿತ್ತು. ಆದರೆ ಈಗ ಅವರು ಒಂದು ವರ್ಷದಲ್ಲಿ 25 ಚೆಕ್ ಲೀವ್ಸ್ ಗಳೊಂದಿಗೆ ಉಚಿತ ಚೆಕ್ ಬುಕ್ ಪಡೆಯುತ್ತಾರೆ, ಅದರ ನಂತರ ಶುಲ್ಕಗಳಲ್ಲಿ ಯಾವುದೇ ಬದಲಾವಣೆಗಳಿಲ್ಲ. ಅಂದರೆ, 10 ಚೆಕ್ ಲೀವ್ಸ್ ಪಡೆಯಲು  20 ರೂಪಾಯಿ ಪಾವತಿಸಬೇಕಾಗುತ್ತದೆ.

ಇದನ್ನೂ ಓದಿ- Credit Card ಬಳಸಿ ಅಪ್ಪಿ-ತಪ್ಪಿಯೂ ಈ ಪೇಮೆಂಟ್ಸ್ ಮಾಡಬೇಡಿ, ಆರ್‌ಬಿಐ ಸೂಚನೆ

ಐಸಿಐಸಿಐ ಬ್ಯಾಂಕ್ ನಗದು ಠೇವಣಿ ಶುಲ್ಕವನ್ನು ಬದಲಾಯಿಸುತ್ತದೆ:
ನಗದು ಠೇವಣಿ - ನೀವು ಐಸಿಐಸಿಐ ಬ್ಯಾಂಕ್ ಶಾಖೆಯಲ್ಲಿ ಠೇವಣಿ ಇಟ್ಟರೆ, ನಂತರ ಸಾವಿರಕ್ಕೆ 5 ರೂ. ಅಥವಾ ಅದರ ಒಂದು ಭಾಗ, ಕನಿಷ್ಠ 150 ರೂ.ವರೆಗೆ ಶುಲ್ಕ ಪಾವತಿಸಾಬೇಕಾಗಬಹುದು.

ನಗದು ಮರುಬಳಕೆ ಯಂತ್ರ- ಯಾವುದೇ ಕ್ಯಾಲೆಂಡರ್ ತಿಂಗಳಲ್ಲಿ ಮಾಡಲಾಗುವ ಮೊದಲ ನಗದು ಠೇವಣಿಗಳಿಗೆ ಯಾವುದೇ ಶುಲ್ಕವಿಲ್ಲ. ನಂತರ ತಿಂಗಳಲ್ಲಿ, ಸಾವಿರಕ್ಕೆ 5 ರೂ. ಅಥವಾ ಅದರ ಒಂದು ಭಾಗ, ಕನಿಷ್ಠ 150 ರೂ.ವರೆಗೆ ಶುಲ್ಕ ವಿಧಿಸಲಾಗುವುದು.

ಎಟಿಎಂ ಇಂಟರ್ಚೇಂಜ್ ಶುಲ್ಕಗಳು (ಐಸಿಐಸಿಐ ಅಲ್ಲದ ಬ್ಯಾಂಕ್ ಎಟಿಎಂಗಳು) :
1. ನೀವು ಯಾವುದೇ ಐಸಿಐಸಿಐ ಅಲ್ಲದ ಬ್ಯಾಂಕ್ ಎಟಿಎಂ (ATM)ನಿಂದ ಹಣವನ್ನು ಹಿಂತೆಗೆದುಕೊಂಡರೆ, ಒಂದು ತಿಂಗಳಲ್ಲಿ 6 ಮೆಟ್ರೋ ನಗರಗಳಲ್ಲಿ (ಮುಂಬೈ, ದೆಹಲಿ, ಚೆನ್ನೈ, ಕೋಲ್ಕತಾ, ಬೆಂಗಳೂರು ಮತ್ತು ಹೈದರಾಬಾದ್) ಮೊದಲ ಮೂರು ವಹಿವಾಟುಗಳು ಉಚಿತವಾಗಿರುತ್ತದೆ. ಇದು ಹಣಕಾಸು ಮತ್ತು ಹಣಕಾಸೇತರ ವಹಿವಾಟುಗಳನ್ನು ಒಳಗೊಂಡಿದೆ.
2. ಉಳಿದ ಇತರ ಸ್ಥಳಗಳಲ್ಲಿ, ಒಂದು ತಿಂಗಳಲ್ಲಿ ಮೊದಲ 5 ವಹಿವಾಟುಗಳು ಉಚಿತವಾಗಿರುತ್ತದೆ. ಅದರ ನಂತರ, ಯಾವುದೇ ಹಣಕಾಸಿನ ವಹಿವಾಟಿಗೆ 20 ರೂ., ಮತ್ತು ಯಾವುದೇ ಹಣಕಾಸಿನೇತರ ವಹಿವಾಟು 8.5 ರೂ. ಶುಲ್ಕ ವಿಧಿಸಲಾಗುವುದು. ಇವುಗಳ ಮೇಲೆ ಈಗಿನವರೆಗೆ ಯಾವುದೇ ಶುಲ್ಕವಿಲ್ಲ.

ಇದನ್ನೂ ಓದಿ- Form 15CA/15CB Deadline: ಆದಾಯ ತೆರಿಗೆ ಫಾರ್ಮ್ 15CA/15CB ಸಲ್ಲಿಕೆಯ ಗಡವು ವಿಸ್ತರಣೆ

ನಗದು ವಹಿವಾಟು ಶುಲ್ಕಗಳು (ಠೇವಣಿ ಮತ್ತು ವಾಪಸಾತಿ ಎರಡೂ) :
1. ಐಸಿಐಸಿಐ ಬ್ಯಾಂಕ್ ನಿಯಮಿತ ಉಳಿತಾಯ ಖಾತೆಗೆ ಪ್ರತಿ ತಿಂಗಳು 4 ಉಚಿತ ನಗದು ವಹಿವಾಟುಗಳನ್ನು ನೀಡುತ್ತದೆ. ಉಚಿತ ಮಿತಿಯ ನಂತರ ಪ್ರತಿ ವಹಿವಾಟಿಗೆ 150 ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ.
2. ಮೌಲ್ಯ ಮಿತಿ (ಠೇವಣಿ + ಹಿಂತೆಗೆದುಕೊಳ್ಳುವಿಕೆ) ಹೋಂ ಬ್ರಾಂಚ್ ಮತ್ತು ಗೃಹೇತರ ಶಾಖೆಯ ವ್ಯವಹಾರಗಳನ್ನು ಒಳಗೊಂಡಿದೆ.
3. ಗೃಹ ಶಾಖೆ - ಆಗಸ್ಟ್ 1 ರಿಂದ ಗ್ರಾಹಕರಿಗೆ ಗೃಹ ಶಾಖೆಯಲ್ಲಿನ ಮೌಲ್ಯ ಮಿತಿಯು ಪ್ರತಿ ಖಾತೆಗೆ ತಿಂಗಳಿಗೆ ಒಂದು ಲಕ್ಷ ರೂ., 1 ಲಕ್ಷಕ್ಕಿಂತ ಹೆಚ್ಚಿನ ವಹಿವಾಟಿನ ಮೇಲೆ 1000 ರೂ.ಗಳಿಗೆ 5 ರೂ. ಅಥವಾ ಕನಿಷ್ಠ 150 ರೂ.ವರೆಗೆ ಶುಲ್ಕ ವಿಧಿಸಲಾಗುವುದು.
4. ಗೃಹೇತರ ಶಾಖೆ - ದಿನಕ್ಕೆ ರೂ .25,000 ನಗದು ವಹಿವಾಟಿಗೆ ಯಾವುದೇ ಶುಲ್ಕ ವಿಧಿಸಲಾಗುವುದಿಲ್ಲ. ಇದರ ನಂತರ ಪ್ರತಿ 1000 ರೂಪಾಯಿಗೆ 5 ರೂ., ಕನಿಷ್ಠ 150 ರೂ.ವರೆಗೆ ಶುಲ್ಕ ವಿಧಿಸಲಾಗುವುದು.
5. ಹಿರಿಯ ನಾಗರಿಕ ಗ್ರಾಹಕರಿಗೆ, ಯಂಗ್ ಸ್ಟಾರ್ / ಸ್ಮಾರ್ಟ್ ಸ್ಟಾರ್ ಖಾತೆಗಳಿಗೆ ದಿನಕ್ಕೆ 25 ಸಾವಿರ ರೂ.ಗಳ ಮಿತಿ ಅನ್ವಯವಾಗಲಿದೆ, ಇದಕ್ಕೆ ಯಾವುದೇ ರೀತಿಯ ಶುಲ್ಕ ವಿಧಿಸಲಾಗುವುದಿಲ್ಲ.

ಐಸಿಐಸಿಐ ಬ್ಯಾಂಕ್ ನಿಯಮಿತ ಪ್ಲಸ್ ಸಂಬಳ ಖಾತೆ:
ಈ ಖಾತೆಯಲ್ಲಿ ಒಂದು ತಿಂಗಳಲ್ಲಿ ಮೊದಲ 4 ವಹಿವಾಟುಗಳಿಗೆ ಯಾವುದೇ ಶುಲ್ಕ ವಿಧಿಸಲಾಗುವುದಿಲ್ಲ. ಇದರ ನಂತರ, ಪ್ರತಿ ವಹಿವಾಟಿಗೆ 1000 ರೂ,ಗೆ 5 ರೂ. ಕನಿಷ್ಠ 150 ರೂ.ವರೆಗೆ ಶುಲ್ಕ ವಿಧಿಸಲಾಗುವುದು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News