ಬೆಂಗಳೂರು : ಜುಲೈ 31 ರ ಮೊದಲು ಐಟಿಆರ್ ಸಲ್ಲಿಸುವುದು ಅನಿವಾರ್ಯ. 2022-23ನೇ ಹಣಕಾಸು ವರ್ಷಕ್ಕೆ ನಿಗದಿತ ದಿನಾಂಕದೊಳಗೆ ITR ಸಲ್ಲಿಸದಿದ್ದರೆ, ನಂತರ ಬಿಲೇಟೆಡ್ ರಿಟರ್ನ್ ಸಲ್ಲಿಸಬೇಕಾಗುತ್ತದೆ. ಬಿಲೇಟೆಡ್ ರಿಟರ್ನ್ ಸಲ್ಲಿಸಲು ಡಿಸೆಂಬರ್ 31ರವರೆಗೆ ಕಾಲಾವಕಾಶ ನೀಡಲಾಗುತ್ತಿದೆ. ಒಂದು ವೇಳೆ ಜುಲೈ 31, 2023 ರೊಳಗೆ ITR ಫೈಲ್ ಮಾಡಲು ಸಾಧ್ಯವಾಗದಿದ್ದರೆ, ಈ ಕೆಳಗಿನ ನಷ್ಟಗಳನ್ನು ಅನುಭವಿಸಬೇಕಾಗುತ್ತದೆ.
ದಂಡ ಪಾವತಿಸಬೇಕು :
5 ಲಕ್ಷಕ್ಕಿಂತ ಹೆಚ್ಚಿನ ಆದಾಯ ಹೊಂದಿರುವ ವ್ಯಕ್ತಿಗಳು ತಡವಾಗಿ ITR ಫೈಲ್ ಮಾಡಿದರೆ 5,000 ರೂಪಾಯಿ ದಂಡ ತೆರಬೇಕಾಗುತ್ತದೆ. 5 ಲಕ್ಷದವರೆಗಿನ ಆದಾಯಕ್ಕೆ 1000 ರೂ. ದಂಡ ಪಾವತಿಸಬೇಕಾಗುತ್ತದೆ. ಅಲ್ಲದೆ, ಸಮಯಕ್ಕೆ ಸರಿಯಾಗಿ ITR ಅನ್ನು ಸಲ್ಲಿಸದಿರುವ ಕಾರಣ ಕೆಲವು ತೆರಿಗೆ ವಿನಾಯಿತಿಗಳನ್ನು ಕಳೆದುಕೊಳ್ಳಬೇಕಾಗಬಹುದು. ಹೀಗಾದಾಗ ತೆರಿಗೆ ಹೊಣೆಗಾರಿಕೆ ಹೆಚ್ಚಾಗಬಹುದು. ಡಿಸೆಂಬರ್ 31, 2023 ರ ನಂತರ ಐಟಿಆರ್ ಅನ್ನು ಸಲ್ಲಿಸಿದರೆ, 10,000 ರೂ. ದಂಡವನ್ನು ಪಾವತಿಸಬೇಕಾಗುತ್ತದೆ.
ಇದನ್ನೂ ಓದಿ : ಹಿರಿಯ ನಾಗರಿಕರಿಗೆ ಪ್ರತಿ ತಿಂಗಳು 20,500 ರೂಪಾಯಿ ! ಕೇಂದ್ರ ಹಣಕಾಸು ಸಚಿವರ ಘೋಷಣೆ
ಲೇಟ್ ಫೈಲಿಂಗ್ ಮೇಲಿನ ಬಡ್ಡಿ :
ನಿಮ್ಮ ಆದಾಯ ತೆರಿಗೆಗೆ ಒಳಪಟ್ಟಿದ್ದರೆ, ಜುಲೈ 31 ರೊಳಗೆ ರಿಟರ್ನ್ ಅನ್ನು ಸಲ್ಲಿಸದಿದ್ದರೆ, ಐಟಿಆರ್ ಸಲ್ಲಿಸುವವರೆಗೆ ಪ್ರತಿ ತಿಂಗಳು ನಿಮಗೆ 1% ದರದಲ್ಲಿ ಹೆಚ್ಚುವರಿ ಬಡ್ಡಿಯನ್ನು ವಿಧಿಸಲಾಗುತ್ತದೆ. ಡಿಸೆಂಬರ್ 31 ರ ನಂತರ ತೆರಿಗೆ ಬಾಕಿ ಇದ್ದಲ್ಲಿ ನವೀಕರಿಸಿದ ರಿಟರ್ನ್ ಅನ್ನು ಸಲ್ಲಿಸುವ ಆಯ್ಕೆಯನ್ನು ಹೊಂದಿರುತ್ತಾರೆ. ಆದರೆ 31 ನೇ ಮಾರ್ಚ್ 2024 ರವರೆಗೆ ನವೀಕರಿಸಿದ ರಿಟರ್ನ್ ಪಾವತಿಸಬೇಕಾಗುತ್ತದೆ.
ಒಂದು ವೇಳೆ ಕಡಿಮೆ ಆದಾಯ ತೋರಿಸಿದ್ದಲ್ಲಿ 50% ವರೆಗೆ ಮತ್ತು ಆದಾಯವನ್ನು ತಪ್ಪಾಗಿ ಸಾಬೀತುಪಡಿಸಿದ್ದಲ್ಲಿ 200% ವರೆಗೆ ದಂಡ ವಿಧಿಸಬಹುದು. ಜ್ಞಾಪನೆಯ ಹೊರತಾಗಿಯೂ ತೆರಿಗೆ ರಿಟರ್ನ್ ಸಲ್ಲಿಸದಿದ್ದರೆ, ಅಧಿಕಾರಿಗಳು ಬಾಕಿ ಇರುವ ತೆರಿಗೆಯ ಆಧಾರದ ಮೇಲೆ ಪ್ರಾಸಿಕ್ಯೂಷನ್ ಪ್ರಕ್ರಿಯೆಯನ್ನು ಪ್ರಾರಂಭಿಸಬೇಕಾಗಬಹುದು. ಇದರಲ್ಲಿ ಮೂರು ತಿಂಗಳಿಂದ 7 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಬಹುದಾಗಿದೆ.
ಇದನ್ನೂ ಓದಿ : Indian Railways: ಇನ್ಮುಂದೆ ರೈಲಿನಲ್ಲಿ ಸಿಗಲಿದೆ 20 ರೂ.ಗೆ ಊಟ, ತಿಂಡಿ, 3 ರೂ.ಗೆ ನೀರು!
ಹೊಸ ತೆರಿಗೆ ಪದ್ಧತಿಯಿಂದ ಯಾವುದೇ ಪ್ರಯೋಜನವಿಲ್ಲ:
ಮಾರ್ಚ್ 31 ರಿಂದ ತಡವಾಗಿದ್ದರೆ, ಸಂಬಳ ಪಡೆಯುವ ಉದ್ಯೋಗಿಗಳು ಹೊಸ ತೆರಿಗೆ ಪದ್ಧತಿಯ ಆಯ್ಕೆಯನ್ನು ಆಯ್ಕೆ ಮಾಡಲಾಗುವುದಿಲ್ಲ. ಅವರು ಉದ್ಯೋಗದಾತರೊಂದಿಗೆ ಈ ಆಯ್ಕೆಯನ್ನು ಆರಿಸಿದರೆ, ಐಟಿಆರ್ ಅನ್ನು ತಡವಾಗಿ ಸಲ್ಲಿಸಿದ್ದಲ್ಲಿ ಹೆಚ್ಚುವರಿ ತೆರಿಗೆ ಮತ್ತು ಬಡ್ಡಿಯನ್ನು ಪಾವತಿಸಬೇಕಾಗುತ್ತದೆ. ಫೆಬ್ರವರಿ 1 ರಂದು ಮಂಡಿಸಿದ ಬಜೆಟ್ನಲ್ಲಿ ಹಣಕಾಸು ಸಚಿವರು ಹೊಸ ತೆರಿಗೆ ಪದ್ಧತಿಯಡಿಯಲ್ಲಿ 7 ಲಕ್ಷ ರೂಪಾಯಿವರೆಗಿನ ಆದಾಯವನ್ನು ತೆರಿಗೆ ಮುಕ್ತಗೊಳಿಸಿದ್ದಾರೆ.
ರಿ ಫಂಡ್ ನಲ್ಲಿ ವಿಳಂಬ :
ತಡವಾಗಿ ITR ಸಲ್ಲಿಸುವ ಮತ್ತೊಂದು ಅನಾನುಕೂಲವೆಂದರೆ ತೆರಿಗೆ ಮರುಪಾವತಿ ಕೂಡಾ ವಿಳಂಬವಾಗಬಹುದು. ಇಂತಹ ವಿಳಂಬಗಳು ಅನಗತ್ಯ ಆರ್ಥಿಕ ಒತ್ತಡ ಮತ್ತು ಅನಾನುಕೂಲತೆ ಹೆಚ್ಚಿಸುತ್ತದೆ. ಇನ್ನು ಐಟಿಆರ್ ಅನ್ನು ತಡವಾಗಿ ಸಲ್ಲಿಸುವುದರಿಂದ ನೀವು ಅಧಿಕಾರಿಗಳ ಕಣ್ಣಿಗೆ ಗುರಿಯಾಗಬಹುದು. ತೆರಿಗೆ ವಿಷಯಗಳಲ್ಲಿ ಲೆಕ್ಕಪರಿಶೋಧನೆ ಮತ್ತು ವಿಚಾರಣೆಗಳನ್ನು ಎದುರಿಸುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ.
ಇದನ್ನೂ ಓದಿ : ಜುಲೈ ಅಂತ್ಯಕ್ಕೂ ಮುನ್ನವೇ ಸರ್ಕಾರಿ ನೌಕರರಿಗೊಂದು ಸಂತಸದ ಸುದ್ದಿ, ಈ ದಿನ ಹೆಚ್ಚಾಗಲಿದೆ ವೇತನ!
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.