Tax On Savings Account: ಸಾಮಾನ್ಯವಾಗಿ ಜನ ಉಳಿತಾಯ ಖಾತೆಗೆ ಎಷ್ಟು ಬೇಕಾದರೂ ಹಣ ಹಾಕಬಹುದು ಎಂದು ಕೊಂಡಿರುತ್ತಾರೆ. ಅದರಿಂದಾಗಿ ಹಣ ಸಿಕ್ಕಾಗಲೆಲ್ಲಾ ಉಳಿತಾಯ ಖಾತೆಗೆ ಹಣ ಜಮಾ ಮಾಡುತ್ತಿರುತ್ತಾರೆ. ಬೇಕಾದಾಗ ಒಟ್ಟಿಗೆ ಪಡೆಯಬಹುದು ಎನ್ನುವುದು ಅವರ ಉದ್ದೇಶ. ಜೊತೆಗೆ ಅದು ಫಿಕ್ಸೆಡ್ ಡಿಪಾಸಿಟ್ ಅಲ್ಲದ ಕಾರಣಕ್ಕೆ ಅಥವಾ ನಿಗದಿತವಾಗಿ ಹಾಕಿಲ್ಲದ ಕಾರಣಕ್ಕೆ ಆ ಹಣ ತೆರಿಗೆ ವ್ಯಾಪ್ತಿಗೆ ಬರುವುದಿಲ್ಲ ಎಂದುಕೊಂಡಿರುತ್ತಾರೆ. ಉಳಿತಾಯ ಖಾತೆಯ ಗರಿಷ್ಟ ಮಿತಿ ಏನು? ಮತ್ತಿತರ ನಿಯಮಗಳೇನು ಎಂದು ತಿಳಿದುಕೊಳ್ಳುವುದು ಅತ್ಯವಶ್ಯಕವಾಗಿದೆ.
10 ಲಕ್ಷಕ್ಕಿಂತ ಹೆಚ್ಚಿನ ಹಣ ಇಡುವಂತಿಲ್ಲ.
ಸಾಮಾನ್ಯವಾಗಿ ನಾವು ಆರ್ಥಿಕ ವರ್ಷ ಎಂದು ಕರೆಯುವ ಏಪ್ರಲ್ 1ರಿಂದ ಮಾರ್ಚ್ 31ರವರೆಗೆ ಉಳಿತಾಯ ಖಾತೆಗಳಲ್ಲಿ ಒಬ್ಬ ವ್ಯಕ್ತಿ ಗರಿಷ್ಟ 10 ಲಕ್ಷ ರೂಪಾಯಿ ವ್ಯವಹಾರ ಮಾಡಬಹುದು. ಅದಕ್ಕಿಂತ ಹೆಚ್ಚಿನ ಹಣದ ವಹಿವಾಟು ನಡೆಸಿದರೆ ಆಗ ಅದು ಕೂಡ ತೆರಿಗೆ ವ್ಯಾಪ್ತಿಗೆ ಬರುತ್ತದೆ. ತೆರಿಗೆ ಕಟ್ಟಬೇಕಾಗುತ್ತದೆ. ಯಾವುದೇ ವ್ಯಕ್ತಿ 10 ಲಕ್ಷ ರೂಪಾಯಿಗಿಂತ ಹೆಚ್ಚಿನ ಹಣ ಜಮಾ ಮಾಡಿದರೆ ಆ ಬ್ಯಾಂಕ್ ಅದನ್ನು ಆದಾಯ ತೆರಿಗೆ ಇಲಾಖೆಗೆ ತಿಳಿಸಬೇಕಾಗುತ್ತದೆ. ಆಗ ಆದಾಯ ತೆರಿಗೆ ಇಲಾಖೆ ಹಣದ ಮೂಲ ಕೇಳಿ ನೋಟಿಸ್ ಕೊಡಬಹುದು. ಜೊತೆಗೆ ತೆರಿಗೆ ಕಟ್ಟುವಂತೆ ಸೂಚಿಸಬಹುದು.
ಇದನ್ನೂ ಓದಿ- Income Tax Notice: ಎಚ್ಚರ! ಈ ಮಿತಿಗಿಂತ ಹೆಚ್ಚು ಖರ್ಚು ಮಾಡಿದ್ರೂ ಬರುತ್ತೆ 'ಐಟಿ ನೋಟಿಸ್'
ದಿನದ ಮಿತಿ ಕೂಡ ತಿಳಿಯಿರಿ:
ಒಂದು ದಿನಕ್ಕೆ ಉಳಿತಾಯ ಖಾತೆಗೆ ಕೇವಲ 50 ಸಾವಿರ ರೂಪಾಯಿಗಳನ್ನು ಜಮಾ ಮಾಡಬಹುದು. ಆ 50 ಸಾವಿರ ರೂಪಾಯಿ ಪಾವತಿಸುವುದಕ್ಕೂ ಪಾನ್ (PAN) ಕಾರ್ಡ್ ಕೊಡುವುದು ಕಡ್ಡಾಯವಾಗಿರುತ್ತದೆ. ಒಂದೊಮ್ಮೆ ಪಾನ್ ಕಾರ್ಡ್ ಹೊಂದಿಲ್ಲದಿದ್ದರೆ ಅಂಥವರು ಫಾರ್ಮ್ 60/61 ಅನ್ನು ಭರ್ತಿ ಮಾಡಿ ಕೊಡಬೇಕಾಗುತ್ತದೆ.
ಜಾಸ್ತಿ ಬಡ್ಡಿ ಬಂದರೂ ತೆರಿಗೆ ಕಟ್ಟಬೇಕಾಗುತ್ತದೆ:
ಇದಲ್ಲದೆ ಉಳಿತಾಯ ಖಾತೆಯಲ್ಲಿ ಒಂದು ವರ್ಷದ ವ್ಯವಹಾರಕ್ಕೆ 10 ಸಾವಿರ ರೂಪಾಯಿಗಿಂತ ಹೆಚ್ಚು ಬಡ್ಡಿ ಗಳಿಸಿದರೆ ಸ್ಥಿರ ಸ್ಲ್ಯಾಬ್ ಆಧಾರದ ಮೇಲೆ ಆ ಹಣಕ್ಕೆ ತೆರಿಗೆ ವಿಧಿಸಲಾಗುತ್ತದೆ. ಹಿರಿಯ ನಾಯಕರು ಮಾತ್ರ 50 ಸಾವಿರ ರೂಪಾಯಿವರೆಗಿನ ಬಡ್ಡಿಗೆ ತೆರಿಗೆ ವಿನಾಯಿತಿ ಪಡೆಯಬಹುದು.
ಇದನ್ನೂ ಓದಿ- ಟ್ಯಾಕ್ಸ್ ಉಳಿಸಬೇಕೆಂದು ನಕಲಿ ಬಾಡಿಗೆ ರಸೀದಿ ಕೊಟ್ಟರೆ ಅಪಾಯ ಗ್ಯಾರಂಟಿ; ನಕಲಿ ಬಿಲ್‌ಗಳ ಮೇಲೆ ಐಟಿ ಹದ್ದಿನ ಕಣ್ಣು..!
ತೆರಿಗೆ ಇಲಾಖೆಯಿಂದ ನೋಟಿಸ್ ಬಂದರೆ ಏನು ಮಾಡಬೇಕು?
ಆದಾಯ ತೆರಿಗೆ ಇಲಾಖೆಯಿಂದ ನೋಟಿಸ್ ಬಂದರೆ ಮೊದಲಿಗೆ ಅಗತ್ಯ ಪುರಾವೆಗಳನ್ನು ಒದಗಿಸಬೇಕಾಗುತ್ತದೆ. ಬ್ಯಾಂಕ್ ಸ್ಟೇಟ್ಮೆಂಟ್, ಹೂಡಿಕೆ ದಾಖಲೆಗಳು ಹಾಗು ಪಿತ್ರಾರ್ಜಿತ ದಾಖಲೆಗಳನ್ನು ಒದಗಿಸುವುದು ಕಡ್ಡಾಯವಾಗುತ್ತದೆ. ಇದರ ಬಗ್ಗೆ ಪ್ರಾಮಾಣಿಕೃತ ತೆರಿಗೆ ಸಲಹೆಗಾರರನ್ನು ಸಂಪರ್ಕಿಸಿ ವ್ಯವಹರಿಸುವುದು ಉತ್ತಮ. ಇನ್ನು ನಗದು ವಹಿವಾಟು ವಿಚಾರಕ್ಕೆ ಬಂದರೆ ಆದಾಯ ತೆರಿಗೆ ನಿಯಮ ಸೆಕ್ಷನ್ 269ST ಅಡಿ ಒಬ್ಬ ವ್ಯಕ್ತಿ ಒಂದು ದಿನಕ್ಕೆ 2 ಲಕ್ಷ ರೂಪಾಯಿಗಿಂತ ಹೆಚ್ಚು ವ್ಯವಹಾರ ಮಾಡುವಂತಿಲ್ಲ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.