Gold selling rules : ನಿಮ್ಮ ಮನೆಯಲ್ಲಿ ಹಳೆಯ ಆಭರಣಗಳಿದ್ದು, ಅದನ್ನು ಮಾರಾಟ ಮಾಡಲು ಅಥವಾ ಕರಗಿಸಿ ಹೊಸ ಆಭರಣಗಳನ್ನು ಮಾಡಬೇಕು ಅಂದುಕೊಂಡಿದ್ದರೆ ಈ ಲೇಖನವನ್ನು ಎಚ್ಚರಿಕೆಯಿಂದ ಓದಿ. ಏಕೆಂದರೆ ಚಿನ್ನಾಭರಣ ಮಾರಾಟಕ್ಕೆ ಸಂಬಂಧಿಸಿದಂತೆ ಸರ್ಕಾರ ಹೊಸ ನಿಯಮಗಳನ್ನು ರೂಪಿಸಿದೆ. ಈ ಹೊಸ ನಿಯಮದ ಪ್ರಕಾರ ಮನೆಯಲ್ಲಿ ಇಟ್ಟಿರುವ ಹಳೆಯ ಆಭರಣಗಳು ಹಾಲ್ ಮಾರ್ಕ್ ಆಗುವವರೆಗೆ ಅವುಗಳನ್ನು ಮಾರಾಟ ಮಾಡುವಂತಿಲ್ಲ. ಚಿನ್ನದ ಹಾಲ್‌ಮಾರ್ಕಿಂಗ್, ಚಿನ್ನದ ಖರೀದಿ ಮತ್ತು ಮಾರಾಟಕ್ಕೆ ಸರ್ಕಾರ ಹೊಸ ನಿಯಮಾವಳಿಗಳನ್ನು ಜಾರಿಗೆ ತಂದಿದೆ. ಈ ನಿಯಮಗಳ ಪ್ರಕಾರ, ಮನೆಗಳಲ್ಲಿ ಇರುವ ಹಳೆಯ ಚಿನ್ನಾಭರಣಗಳ ಮೇಲೆ ಹಾಲ್ಮಾರ್ಕ್ ಹಾಕುವುದು ಕಡ್ಡಾಯವಾಗಿದೆ . ಏಪ್ರಿಲ್ 1, 2023 ರಿಂದ, ಎಲ್ಲಾ ಚಿನ್ನದ ಆಭರಣಗಳಿಗೆ ಹಾಲ್‌ಮಾರ್ಕ್ ವಿಶಿಷ್ಟ ಗುರುತಿನ (HUID) ಸಂಖ್ಯೆಯನ್ನು ಹೊಂದಿರಬೇಕು ಎಂದು ಹೊಸ ನಿಯಮಗಳು ಹೇಳುತ್ತವೆ.
ಇತ್ತೀಚಿನ ವರದಿಯ ಪ್ರಕಾರ, ಸರ್ಕಾರ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದೆ. ಈಗ ಹಳೆಯ ಆಭರಣಗಳನ್ನು ಮಾರಾಟ ಮಾಡಬೇಕಾದರೆ ಲು ಹಾಲ್‌ಮಾರ್ಕ್ ಅನ್ನು ಕಡ್ಡಾಯಗೊಳಿಸಿದೆ. ಬಿಐಎಸ್ ಪ್ರಕಾರ, ಹಾಲ್‌ಮಾರ್ಕ್ ಇಲ್ಲದೆ ಚಿನ್ನದ ಆಭರಣಗಳನ್ನು ಹೊಂದಿರುವ ಗ್ರಾಹಕರು ಅದನ್ನು ಮಾರಾಟ ಮಾಡುವ ಮೊದಲು ಅಥವಾ ಹೊಸ ವಿನ್ಯಾಸಕ್ಕಾಗಿ ವಿನಿಮಯ ಮಾಡಿಕೊಳ್ಳುವ ಮೊದಲು ಅದನ್ನು ಕಡ್ಡಾಯವಾಗಿ ಹಾಲ್‌ಮಾರ್ಕ್ ಪಡೆಯಬೇಕು.
ಇದನ್ನೂ ಓದಿ : ಶೀಘ್ರವೇ ಭಾರೀ ಅಗ್ಗವಾಗಲಿದೆ ಪೆಟ್ರೋಲ್, ಡೀಸೆಲ್ ಬೆಲೆ : ಸರ್ಕಾರದ ಮಾಹಿತಿ ಪ್ರಕಾರ ಎಷ್ಟಾಗಲಿದೆ ದರ ?
ಹಾಲ್ಮಾರ್ಕಿಂಗ್ ಹೇಗೆ ಮಾಡಲಾಗುತ್ತದೆ ? :
ಗ್ರಾಹಕರು ತಾವು ಬಳಸಿದ ಆಭರಣಗಳನ್ನು ಹಾಲ್‌ಮಾರ್ಕ್ ಮಾಡಲು 2 ಆಯ್ಕೆಗಳನ್ನು ಹೊಂದಿರುತ್ತಾರೆ.
- ಹಾಲ್‌ಮಾರ್ಕ್ ಇಲ್ಲದ ಆಭರಣಗಳನ್ನು ಬಿಐಎಸ್ ನೋಂದಾಯಿತ ಆಭರಣಕಾರರಿಗೆ ನೀಡಬೇಕು.
-ಬಿಐಎಸ್ ನೋಂದಾಯಿತ ಆಭರಣಕಾರರು ಹಾಲ್‌ಮಾರ್ಕ್ ಇಲ್ಲದ ಚಿನ್ನದ ಆಭರಣಗಳಿಗೆ ಹಾಲ್‌ಮಾರ್ಕ್ ಪಡೆಯಲು ಬಿಐಎಸ್ ಮೌಲ್ಯಮಾಪನ ಮತ್ತು ಹಾಲ್‌ಮಾರ್ಕಿಂಗ್ ಕೇಂದ್ರಕ್ಕೆ ಕೊಂಡೊಯ್ಯುತ್ತಾರೆ. ಅಲ್ಲಿ ಹಳೆಯ ಚಿನ್ನಕ್ಕೆ ಅಥವಾ ಚಿನ್ನದ ಆಭರಣಕ್ಕೆ ಹಾಲ್‌ಮಾರ್ಕ್ ಮಾಡಲಾಗುತ್ತದೆ.
- BIS ಅನುಮೋದಿತ ಹಾಲ್‌ಮಾರ್ಕಿಂಗ್ ಕೇಂದ್ರಗಳಲ್ಲಿ ಆಭರಣಗಳನ್ನು ಪರೀಕ್ಷಿಸಿ ಮತ್ತು ಹಾಲ್‌ಮಾರ್ಕ್ ಮಾಡುವುದು ಗ್ರಾಹಕರಿಗೆ ಇನ್ನೊಂದು ಆಯ್ಕೆಯಾಗಿದೆ.
ಇದನ್ನೂ ಓದಿ : RBI ರೆಪೋ ದರಗಳನ್ನು ಯಾವಾಗ ಕಡಿತಗೊಳಿಸಲಿದೆ? ಈ ಸುದ್ದಿ ಓದಿ
ಈ ಪ್ರಕ್ರಿಯೆಗೆ ಎಷ್ಟು ಹಣ ಪಾವತಿಸಬೇಕು? :
ಆಭರಣಗಳ ಸಂಖ್ಯೆ 5 ಅಥವಾ ಅದಕ್ಕಿಂತ ಹೆಚ್ಚಿದ್ದರೆ ಹಾಲ್‌ಮಾರ್ಕ್‌ಗಾಗಿ ಗ್ರಾಹಕರು ಪ್ರತಿ ಆಭರಣಕ್ಕೆ 45 ರೂ. 4ಪಾವತಿಸಬೇಕು. ಒಂದೊಂದೇ ಆಭರಣಗಳ ಹಾಲ್‌ಮಾರ್ಕ್ ಪಡೆಯಲು 200 ರೂಪಾಯಿ ಪಾವತಿಸಬೇಕು. BIS ನಿಂದ ಗುರುತಿಸಲ್ಪಟ್ಟ ಹಾಲ್‌ಮಾರ್ಕಿಂಗ್ ಕೇಂದ್ರವು ಆಭರಣವನ್ನು ಪರಿಶೀಲಿಸುತ್ತದೆ ಮತ್ತು ಅದರ ಪ್ರಮಾಣಪತ್ರವನ್ನು ನೀಡುತ್ತದೆ. ಗ್ರಾಹಕರು ಈ ವರದಿಯನ್ನು ಯಾವುದೇ ಚಿನ್ನದ ಆಭರಣ ವ್ಯಾಪಾರಿಗಳಿಗೆ ತೋರಿಸಬಹುದು. ಹಳೆಯ ಹಾಲ್ ಮಾರ್ಕ್ ಇಲ್ಲದ ಚಿನ್ನಾಭರಣಗಳನ್ನು ಮಾರಾಟ ಮಾಡಬಹುದು.
ಹಳೆಯ ಹಾಲ್‌ಮಾರ್ಕ್ ಕೆಲಸ ಮಾಡುತ್ತದೆಯೇ? :
ಗ್ರಾಹಕರು ಹಳೆಯ ಹಾಲ್‌ಮಾರ್ಕ್ ಮಾಡಿದ ಚಿನ್ನದ ಆಭರಣಗಳನ್ನು ಹೊಂದಿದ್ದರೆ, ಅವುಗಳನ್ನು ಮತ್ತೆ HUID ಸಂಖ್ಯೆಯೊಂದಿಗೆ ಮರು-ಹಾಲ್ಮಾರ್ಕ್ ಮಾಡಬೇಕಾಗಿಲ್ಲ. ಅಂತಹ ಹಾಲ್ಮಾರ್ಕ್ ಆಭರಣಗಳನ್ನು ಸುಲಭವಾಗಿ ಮಾರಾಟ ಮಾಡಬಹುದು ಅಥವಾ ಹೊಸ ವಿನ್ಯಾಸಗಳಿಗೆ ವಿನಿಮಯ ಮಾಡಿಕೊಳ್ಳಬಹುದು.
ಇದನ್ನೂ ಓದಿ : Central Data: 2022 ರ ಡಿಜಿಟಲ್ ಪಾವತಿ ವಹಿವಾಟಿನಲ್ಲಿ ಭಾರತಕ್ಕೆ ಮೊದಲ ಸ್ಥಾನ
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.