Best SUV Cars: ಬಜೆಟ್ ಬೆಲೆಗೆ ಅದ್ಭುತ ವೈಶಿಷ್ಟ್ಯಗಳ ಜೊತೆಗೆ ಭರ್ಜರಿ ಮೈಲೇಜ್ ನೀಡುವ SUV!

ಭಾರತದಲ್ಲಿ ಬಜೆಟ್ SUV: ಆಟೋಮೊಬೈಲ್ ಮಾರುಕಟ್ಟೆಯಲ್ಲಿ ಜನರು ಇನ್ನೂ ಸಹ ಮೊದಲು ತಮ್ಮ ಬಜೆಟ್ ಮೇಲೆ ಕೇಂದ್ರೀಕರಿಸುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ನೀವು ಎಸ್‌ಯುವಿ ಖರೀದಿಸಲು ಯೋಜಿಸುತ್ತಿದ್ದರೆ ಇಲ್ಲಿದೆ ಗುಡ್‍ ನ್ಯೂಸ್. Alto K 10ಗಿಂತಲೂ ಕಡಿಮೆ ಬೆಲೆಯ SUVಯ ಬಗ್ಗೆ ಇಂದು ನಾವು ನಿಮಗೆ ತಿಳಿಸಿಕೊಡಲಿದ್ದೇವೆ.

Written by - Puttaraj K Alur | Last Updated : Aug 26, 2023, 12:19 PM IST
  • ನಿಮ್ಮ ಬಜೆಟ್‍ಗೆ ಹೊಂದುವ ಅತ್ಯುತ್ತಮ SUV ಇಲ್ಲಿದೆ ನೋಡಿ
  • ಮಾರುಕಟ್ಟೆಗೆ ಎಂಟ್ರಿಕೊಟ್ಟಿರುವ ಬಜೆಟ್ ಬೆಲೆಯ ಐಷಾರಾಮಿ SUV
  • Alto K 10ಗಿಂತಲೂ ಕಡಿಮೆ ಬೆಲೆಯ ನಿಸ್ಸಾನ್ ಮ್ಯಾಗ್ನೈಟ್ ಕಾರು
Best SUV Cars: ಬಜೆಟ್ ಬೆಲೆಗೆ ಅದ್ಭುತ ವೈಶಿಷ್ಟ್ಯಗಳ ಜೊತೆಗೆ ಭರ್ಜರಿ ಮೈಲೇಜ್ ನೀಡುವ SUV!  title=
ನಿಸ್ಸಾನ್ ಮ್ಯಾಗ್ನೈಟ್

ನವದೆಹಲಿ: ಕಡಿಮೆ ಬಜೆಟ್‍ನ ವಾಹನಗಳಿಗೆ ಭಾರತದಲ್ಲಿ ಯಾವಾಗಲೂ ಬೇಡಿಕೆಯಿದೆ. SUV ಖರೀದಿಸುವಾಗಲೂ ಇದೇ ವಿಷಯ ಅನ್ವಯಿಸುತ್ತದೆ. ಯಾರೇ ಆಗಲಿ ಪ್ರತಿಯೊಬ್ಬರೂ ಮನೆಯಲ್ಲಿ SUV ಹೊಂದಲು ಬಯಸುತ್ತಾರೆ. ಅದು ಶಕ್ತಿಯುತ ಮತ್ತು ಉತ್ತಮ ವೈಶಷ್ಟ್ಯಗಳನ್ನು ಹೊಂದಿರಬೇಕೆಂದು ಬಯಸುತ್ತಾರೆ. ಇದಕ್ಕೆ ಕಾರಣ ಅದರ ಕಾರ್ಯಕ್ಷಮತೆ.

ರಸ್ತೆ ಎಷ್ಟೇ ಕಠಿಣವಾಗಿದ್ದರೂ ಈ ವಾಹನಗಳಲ್ಲಿನ ಪ್ರಯಾಣ ಸುಖಕರ ಮತ್ತು ಸುಲಭವಾಗುತ್ತದೆ. ಆದರೆ ಎಲ್ಲರೂ SUV ಖರೀದಿಸಲು ಸಾಧ್ಯವಿಲ್ಲ. ಅನೇಕ ಜನರು ಬಜೆಟ್‌ ಕಾರಣದಿಂದ ಕಾರು ಖರೀದಿಸಲು ಸಾಧ್ಯವಾಗಲ್ಲ. ಏಕೆಂದರೆ ಕಾರಿನ ಬೆಲೆ 10 ಲಕ್ಷದಿಂದ ಪ್ರಾರಂಭವಾಗಿ ಉತ್ತಮ ಮಾಡೆಲ್‍ಗೆ ಕೊಂಚ ಹೆಚ್ಚಿನ ಬೆಲೆ ಇರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಬಜೆಟ್ ಬೆಲೆಗೆ ಐಷಾರಾಮಿ ಎಸ್‌ಯುವಿ ಕಾರು ಮಾರುಕಟ್ಟೆಯಲ್ಲಿ ಬಂದಿದೆ. ಇದು ಶಕ್ತಿಯುತವಾಗಿದ್ದು, ನಿಮ್ಮ ಬಜೆಟ್‍ಗೆ ಹೊಂದುತ್ತದೆ.  

ಇದನ್ನೂ ಓದಿ: ತಿಂಗಳಿಗೆ 210 ರೂಪಾಯಿ ಠೇವಣಿ ಮಾಡಿದರೆ ಸಿಗುವುದು 5,000 ರೂ. ಮಾಸಿಕ ಪಿಂಚಣಿ!

Alto K 10ಗಿಂತಲೂ ಕಡಿಮೆ ಬೆಲೆಯ SUVಗಳು

ಇಂದು ನಾವು ನಿಮಗೆ Alto K 10ಗಿಂತಲೂ ಕಡಿಮೆ ಬೆಲೆಯ SUV ಆಯ್ಕೆಯನ್ನು ತಂದಿದ್ದೇವೆ. ಇದರ ವೈಶಿಷ್ಟ್ಯಗಳು ತುಂಬಾ ಅದ್ಭುತವಾಗಿದ್ದು, ನೀವು ಸಹ ಆನಂದಿಸುವಿರಿ. ಇದರ ಮೈಲೇಜ್ ನಿಮಗೆ ಆಶ್ಚರ್ಯವನ್ನುಂಟು ಮಾಡುತ್ತದೆ. ಕಾರ್ಯಕ್ಷಮತೆಯ ಬಗ್ಗೆ ಹೇಳುವುದಾದರೆ ಇದು ಖರೀದಿಗೆ ಉತ್ತಮ ವಾಹನವಾಗಿದೆ.   

ನಿಸ್ಸಾನ್ ಮ್ಯಾಗ್ನೈಟ್

ನಿಸ್ಸಾನ್ ಮ್ಯಾಗ್ನೈಟ್ ಬಗ್ಗೆ ಹೇಳುವುದಾದರೆ, ಇದು Altoಗಿಂತ ಮ್ಯಾಗ್ನೈಟ್‍ಗಿಂತಲೂ ಅಗ್ಗವಾಗಿದೆ. ಹೌದು, ಇದು ಸಂಪೂರ್ಣ ಸತ್ಯ. ವಾಸ್ತವವಾಗಿ ಇದರ ಮೂಲ ಮಾದರಿಯು ಸುಮಾರು 6 ಲಕ್ಷ ರೂ. (ಎಕ್ಸ್ ಶೋ ರೂಂ ದರ) ಬೆಲೆಯಲ್ಲಿ ಬರುತ್ತದೆ. ALTO K10ನ CNG ರೂಪಾಂತರವು 7 ಲಕ್ಷ ರೂ.ಗಿಂತಲೂ ಹೆಚ್ಚು ವೆಚ್ಚವಾಗುತ್ತದೆ. ಅದೇ ರೀತಿ ನಿಸ್ಸಾನ್ ಮ್ಯಾಗ್ನೈಟ್ 4 ಸ್ಟಾರ್ ಸುರಕ್ಷತಾ ರೇಟಿಂಗ್ ಸಹ ಹೊಂದಿದೆ. ಅಂದರೆ ಸುರಕ್ಷತೆಯ ದೃಷ್ಟಿಯಿಂದಲೂ ಈ ವಾಹನ ಉತ್ತಮವಾಗಿದೆ.

ಇದನ್ನೂ ಓದಿ: ಸರ್ಕಾರಿ ಉದ್ಯೋಗಿಗಳಿಗೆ ಡಬಲ್ ಜಾಕ್ ಪಾಟ್ !ವೇತನದಲ್ಲಿ ಭಾರೀ ಹೆಚ್ಚಳ

ಮೈಲೇಜ್, ವೈಶಿಷ್ಟ್ಯಗಳು ಮತ್ತು ಬೆಲೆ 

ಮ್ಯಾಗ್ನೈಟ್ ಕಾಂಪ್ಯಾಕ್ಟ್ SUV ಆಗಿದ್ದರೂ, ಈ ಮಾದರಿಯು ಪೂರ್ಣ ಗಾತ್ರದ SUVಯ ಅವಶ್ಯಕತೆಗಳನ್ನು ಪೂರೈಸುತ್ತದೆ. ಇದರಲ್ಲಿ ನೀವು 4 ರೂಪಾಂತರಗಳು ಮತ್ತು 2 ಎಂಜಿನ್ ಆಯ್ಕೆಗಳನ್ನು ಪಡೆಯುತ್ತೀರಿ. ಇದು ಸಾಕಷ್ಟು ಸ್ಥಳಾವಕಾಶದೊಂದಿಗೆ ಇನ್ಫೋಟೈನ್‌ಮೆಂಟ್ ಸಿಸ್ಟಂ, ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಮಲ್ಟಿ ಫಂಕ್ಷನ್ ಸ್ಟೀರಿಂಗ್ ವೀಲ್, 2 ಏರ್‌ಬ್ಯಾಗ್‌ಗಳು, ವಾಷರ್‌ನೊಂದಿಗೆ ಹಿಂಭಾಗದ ಡಿಫಾಗರ್, ಎಲೆಕ್ಟ್ರಿಕ್ ಆಗಿ ಹೊಂದಾಣಿಕೆ ಮಾಡಬಹುದಾದ OVRM, ABS, EBD ಮತ್ತು ಹಿಂಭಾಗ ಮತ್ತು ಮುಂಭಾಗದ ಪವರ್ ವಿಂಡೋಗಳಂತಹ ವೈಶಿಷ್ಟ್ಯಗಳನ್ನು ಹೊಂದಿದೆ.

ಮ್ಯಾಗ್ನೈಟ್ ಮೈಲೇಜ್ ಬಗ್ಗೆ ಹೇಳುವುದಾದರೆ, ಇದು ಪ್ರತಿ ಲೀಟರ್‌ಗೆ 22 ಕಿಲೋಮೀಟರ್‌ಗಿಂತ ಹೆಚ್ಚು ಮೈಲೇಜ್ ನೀಡುತ್ತದೆ. ಇದರಲ್ಲಿ ನೀವು 1.0 ಲೀಟರ್ ನೈಸರ್ಗಿಕವಾಗಿ ಆಕಾಂಕ್ಷಿತ ಪೆಟ್ರೋಲ್ ಎಂಜಿನ್ ಪಡೆಯುತ್ತೀರಿ, ಇದು 71 Bhp ಮತ್ತು 96 Nm ಟಾರ್ಕ್ ಉತ್ಪಾದಿಸುತ್ತದೆ. ಇತರ ಎಂಜಿನ್ ಆಯ್ಕೆಯು 1.0-ಲೀಟರ್ ಆಗಿದ್ದು, ಆದರೆ ಇದು ಟರ್ಬೊ ಚಾರ್ಜ್ಡ್ ಪೆಟ್ರೋಲ್ ಎಂಜಿನ್ ಆಗಿದೆ. ಈ ಕಾರನ್ನು ನಿಮಗೆ ಮ್ಯಾನುವಲ್ ಮತ್ತು CVT ಗೇರ್‌ಬಾಕ್ಸ್‌ಗಳಲ್ಲಿ ನೀಡಲಾಗುತ್ತದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News