PhonePe ಬಳಕೆದಾರರೇ ಗಮನಿಸಿ, UPI ಪೇಮೆಂಟ್‌ ಮಾಡಿದರೆ ಖಾತೆಯಿಂದ ಕಡಿತಗೊಳ್ಳುತ್ತದೆ ಇಷ್ಟು ಹಣ

ಫೋನ್‌ಪೇ  ತನ್ನ ಬಳಕೆದಾರರಿಂದ ಯುಪಿಐ ಆಧಾರಿತ ವಹಿವಾಟುಗಳಿಗೆ ಸಂಸ್ಕರಣಾ ಶುಲ್ಕವನ್ನು ವಿಧಿಸಲು ನಿರ್ಧರಿಸಿದ ದೇಶದ ಮೊದಲ ಕಂಪನಿಯಾಗಿದೆ.

Written by - Ranjitha R K | Last Updated : Oct 25, 2021, 10:46 AM IST
  • PhonePe ಯುಪಿಐ ಆಧಾರಿತ ವಹಿವಾಟುಗಳಿಗೆ ವಿಧಿಸಲಿದೆ ಶುಲ್ಕ
  • ಕ್ರೆಡಿಟ್ ಕಾರ್ಡ್ ಪಾವತಿಗಳ ಮೇಲೂ ಅನ್ವಯವಾಗಲಿದೆ ಶುಲ್ಕ
  • ಮೊಬೈಲ್ ರೀಚಾರ್ಜ್‌ ಮಾಡಿದರೆ ಶುಲ್ಕ ಅನ್ವಯ
PhonePe ಬಳಕೆದಾರರೇ ಗಮನಿಸಿ, UPI ಪೇಮೆಂಟ್‌ ಮಾಡಿದರೆ ಖಾತೆಯಿಂದ ಕಡಿತಗೊಳ್ಳುತ್ತದೆ ಇಷ್ಟು ಹಣ  title=
PhonePe ಯುಪಿಐ ಆಧಾರಿತ ವಹಿವಾಟುಗಳಿಗೆ ವಿಧಿಸಲಿದೆ ಶುಲ್ಕ (photo zee news)

ನವದೆಹಲಿ : ಇಂದಿನ ಕಾಲದಲ್ಲಿ, ಆನ್‌ಲೈನ್ ಪಾವತಿ ಅಪ್ಲಿಕೇಶನ್‌ಗಳು ಹೆಚ್ಚು ಜನಪ್ರಿಯವಾಗುತ್ತಿವೆ. PhonePe, Paytm ಮತ್ತು Google Payಯಂತಹ ಅಪ್ಲಿಕೇಶನ್‌ಗಳ ಬಗ್ಗೆ ಯಾವುದೇ ಪರಿಚಯದ ಅಗತ್ಯವಿಲ್ಲ.  PhonePe ಇತ್ತೀಚೆಗೆ UPI ಆಧಾರಿತ ವಹಿವಾಟುಗಳ ಮೇಲೆ ಪ್ರೊಸೆಸಿಂಗ್ ಶುಲ್ಕವನ್ನು (Processing Charge) ವಿಧಿಸಲಿದೆ ಎಂಬ  ಮಾಹಿತಿಯನ್ನು ಬಿಡುಗಡೆ ಮಾಡಿದೆ.  

UPI ಆಧಾರಿತ ವಹಿವಾಟುಗಳಿಗೆ ಪಾವತಿಸಬೇಕಾದ ಶುಲ್ಕ :
ಫೋನ್‌ಪೇ (PhonePe) ತನ್ನ ಬಳಕೆದಾರರಿಂದ ಯುಪಿಐ ಆಧಾರಿತ ವಹಿವಾಟುಗಳಿಗೆ ಸಂಸ್ಕರಣಾ ಶುಲ್ಕವನ್ನು (Processing Charge) ವಿಧಿಸಲು ನಿರ್ಧರಿಸಿದ ದೇಶದ ಮೊದಲ ಕಂಪನಿಯಾಗಿದೆ. ಪ್ರಸ್ತುತ, ಇತರ ಕಂಪನಿಗಳು ಈ ಸೇವೆಗಾಗಿ ಬಳಕೆದಾರರಿಂದ ಯಾವುದೇ ಹೆಚ್ಚುವರಿ ಶುಲ್ಕವನ್ನು ವಿಧಿಸುವುದಿಲ್ಲ. 

ಇದನ್ನೂ ಓದಿ : Kisan Credit Card: ರೈತರಿಗೆ ಮಾತ್ರವಲ್ಲ ಇನ್ನು ಇವರಿಗೂ ಸಿಗಲಿದೆ ಕಿಸಾನ್‌ ಕ್ರೆಡಿಟ್‌ ಕಾರ್ಡ್‌, ಶೀಘ್ರವೇ ಅರ್ಜಿ ಸಲ್ಲಿಸಬಹುದು

ಸ್ಮಾಲ್‌ ಸ್ಕೇಲ್‌ ನಲ್ಲಿ ನಡೆಯುತ್ತಿದೆ ಟೆಸ್ಟಿಂಗ್‌ : 
ಈ ಡಿಜಿಟಲ್ ಪಾವತಿ (Digital payment) ಅಪ್ಲಿಕೇಶನ್ ತನ್ನ ನಿರ್ಧಾರವನ್ನು ಸಣ್ಣ ಪ್ರಮಾಣದಲ್ಲಿ ಪರೀಕ್ಷಿಸಲು ಪ್ರಾರಂಭಿಸಿದೆ. ಈ ಅಪ್ಲಿಕೇಶನ್‌ನಿಂದ 50 ರಿಂದ 100 ರೂಪಾಯಿಗಳ ನಡುವೆ ಮೊಬೈಲ್ ಅನ್ನು ರೀಚಾರ್ಜ್ ಮಾಡುವ ಯಾವುದೇ ಬಳಕೆದಾರರು, 1 ರೂಪಾಯಿಯ ಪ್ರೊಸೆಸಿಂಗ್‌ ಚಾರ್ಜ್ ಪಾವತಿಸಬೇಕಾಗುತ್ತದೆ ಮತ್ತು 100 ರೂಪಾಯಿಗಿಂತ ಹೆಚ್ಚಿನ ಮೊಬೈಲ್ ರೀಚಾರ್ಜ್‌ಗೆ (mobile charge), 2 ರೂಪಾಯಿಗಳ ಶುಲ್ಕವನ್ನು ವಿಧಿಸಲಾಗುತ್ತದೆ. 

ಕ್ರೆಡಿಟ್ ಕಾರ್ಡ್ ಪಾವತಿಗೂ ನೀಡಬೇಕು ಶುಲ್ಕ : 
ಆ್ಯಪ್ ಮೂಲಕ ಕ್ರೆಡಿಟ್ ಕಾರ್ಡ್‌ಗಳಿಂದ ಪಾವತಿಸುವ (credit card payment) ಬಳಕೆದಾರರು ಇತರ ಪಾವತಿ ಅಪ್ಲಿಕೇಶನ್‌ಗಳಂತೆ ಇಲ್ಲೂ ಶುಲ್ಕವನ್ನು ಪಾವತಿಸಬೇಕಾಗುತ್ತದೆ ಎಂದು PhonePe ಹೇಳಿದೆ. ಈ ಆಪ್ ಹೊರತಾಗಿ, ಅನೇಕ ಬಿಲ್ಲಿಂಗ್ ವೆಬ್‌ಸೈಟ್‌ಗಳು ಮತ್ತು ಪಾವತಿ ಪ್ಲಾಟ್‌ಫಾರ್ಮ್‌ಗಳು ಶುಲ್ಕವನ್ನು ವಿಧಿಸುತ್ತವೆ. 

ಇದನ್ನೂ ಓದಿ : LPG CNG Prices Hike: ಪೆಟ್ರೋಲ್-ಡೀಸೆಲ್ ನಂತರ, ಈಗ CNG-ದೇಶೀಯ ಅನಿಲಗಳ ಬೆಲೆ ಏರಿಕೆ!

ಈ ನಿರ್ಧಾರದ ಹಿಂದಿನ ಕಾರಣ :
ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಶನ್ ಆಫ್ ಇಂಡಿಯಾ (NPCI) ಇತ್ತೀಚೆಗೆ UPI ನ ಮಾರ್ಕೆಟ್‌ ಶೇರ್ ಮೇಲೆ ಒಂದು ಮಿತಿ ಹಾಕಿದೆ.‌  ಇದಾದ ಮೇಲೆ ನಂತರ ಯಾವುದೇ ಆಪ್‌ನ ಮಾರುಕಟ್ಟೆ ಪಾಲು 30 %ಗಿಂತ ಹೆಚ್ಚಿಗೆ ಇರುವುದಿಲ್ಲ. ಬರ್ನ್‌ಸ್ಟೈನ್ ವರದಿಯ ಪ್ರಕಾರ, NPCI ಯ ಈ ನಿರ್ಧಾರವನ್ನು ಅನುಸರಿಸಲು ತನ್ನ ಗ್ರಾಹಕರ ಇನ್ಸೆಂಟಿವ್‌  ಕಡಿಮೆ ಮಾಡಬೇಕಾಗುತ್ತದೆ. 

PhonePe ಎಷ್ಟು ಸಮಯದವರೆಗೆ ಈ ಪರೀಕ್ಷಾ ವೈಶಿಷ್ಟ್ಯವನ್ನು ರನ್ ಮಾಡುತ್ತದೆ ಮತ್ತು ವಹಿವಾಟು ಶುಲ್ಕವನ್ನು ಯಾವಾಗ ವಿಧಿಸುತ್ತದೆ ಎಂಬುದಕ್ಕೆ ಯಾವುದೇ ನಿಗದಿತ ದಿನಾಂಕವನ್ನು ಬಹಿರಂಗಪಡಿಸಲಾಗಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News