Pure EV Etryst 350: 140 ಕಿ.ಮೀ ರೇಂಜ್, 85Kmpl ಸ್ಪೀಡ್ ಹೊಂದಿರುವ ಇಲೆಕ್ಟ್ರಿಕ್ ಬೈಕ್ ಬಿಡುಗಡೆ

Pure EV etryst 350: ಕಂಪನಿ ಈ ಬೈಕ್ ಗೆ ನೀಡಿರುವ ಲುಕ್ ಗಮನಿಸಿದರೆ ನೀವೂ ಕೂಡ ಒಂದು ಕ್ಷಣ ಮರುಳಾಗುವಿರಿ. ಏಕೆಂದರೆ, ಅದರ ಲುಕ್ ಪೆಟ್ರೋಲ್ ಬೈಕ್ ನೊಂದಿಗೆ ಸಾಕಷ್ಟು ಸಾಮ್ಯತೆಯನ್ನು ಹೊಂದಿದೆ. ಒಂದು ಸಲದ ಚಾರ್ಜ್ ಗೆ 140 ಕೀ.ಮೀ ರೇಂಜ್ ನೀಡುವ ಈ ಬೈಕ್, ವೇಗದ ದೃಷ್ಟಿಯಿಂದಲೂ ಕೂಡ ಯಾವುದೆ ಪೆಟ್ರೋಲ್ ಬೈಕ್ ಗಿಂತ ಕಡಿಮೆಯಿಲ್ಲ.  

Written by - Nitin Tabib | Last Updated : Aug 27, 2022, 06:47 PM IST
  • ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ಕಂಪನಿ ಪ್ಯೂರ್ ಇವಿ, ತನ್ನ ಮೊದಲ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ಪ್ಯೂರ್ ಇವಿ ಎಟ್ರಿಸ್ಟ್ 350 ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ.
  • ಕಂಪನಿಯು ಈ ಬೈಕ್ ಅನ್ನು ಪೆಟ್ರೋಲ್ ಬೈಕ್ ಎಂದೇ ಭಾವಿಸುವಷ್ಟು ಲುಕ್ ನೀಡಿದೆ.
  • ವಿಶೇಷತೆ ಎಂದರೆ ಈ ಬೈಕ್ 140 ಕಿ.ಮೀ. ವರೆಗಿನ ರೇಂಜ್ ನೀಡುತ್ತದೆ.
Pure EV Etryst 350: 140 ಕಿ.ಮೀ ರೇಂಜ್, 85Kmpl ಸ್ಪೀಡ್ ಹೊಂದಿರುವ ಇಲೆಕ್ಟ್ರಿಕ್ ಬೈಕ್ ಬಿಡುಗಡೆ title=
Pure EV etryst 350 Bike

Pure EV etryst 350 Price and Features: ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ಕಂಪನಿ ಪ್ಯೂರ್ ಇವಿ, ತನ್ನ ಮೊದಲ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ಪ್ಯೂರ್ ಇವಿ ಎಟ್ರಿಸ್ಟ್ 350 ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಕಂಪನಿಯು ಈ ಬೈಕ್ ಅನ್ನು ಪೆಟ್ರೋಲ್ ಬೈಕ್ ಎಂದೇ ಭಾವಿಸುವಷ್ಟು ಲುಕ್ ನೀಡಿದೆ. ವಿಶೇಷತೆ ಎಂದರೆ ಈ ಬೈಕ್ 140 ಕಿ.ಮೀ. ವರೆಗಿನ ರೇಂಜ್ ನೀಡುತ್ತದೆ. ವೇಗದ ದೃಷ್ಟಿಯಿಂದಲೂ ಇದು ಯಾವುದೇ ಪೆಟ್ರೋಲ್ ಬೈಕ್‌ಗಿಂತ ಕಡಿಮೆಯಿಲ್ಲ. ಇದನ್ನು ಮೂರು ಬಣ್ಣಗಳ ಆಯ್ಕೆಗಳಾಗಿರುವ- ನೀಲಿ, ಕಪ್ಪು ಮತ್ತು ಕೆಂಪು ಬಣ್ಣಗಳಲ್ಲಿ ಮಾರುಕಟ್ಟೆಗೆ ಇಳಿಸಲಾಗಿದೆ. 'ಮೇಕ್ ಇನ್ ಇಂಡಿಯಾ' ಉಪಕ್ರಮದಿಂದ ಪ್ರಭಾವಿತವಾಗಿರುವ ಈ ಬೈಕ್ ಅನ್ನು ಹೈದರಾಬಾದ್‌ನ ಕೇಂದ್ರದಲ್ಲಿ ವಿನ್ಯಾಸಗೊಳಿಸಿ, ಅಭಿವೃದ್ಧಿಪಡಿಸಲಾಗಿದೆ ಮತ್ತು ಉತ್ಪಾದಿಸಲಾಗಿದೆ.

ಇದನ್ನೂ ಓದಿ-2022-23 ರಲ್ಲಿ ಭಾರತದ ಆರ್ಥಿಕತೆಯು ಶೇ 7.4ರಷ್ಟು ಹೆಚ್ಚಳ: ನಿರ್ಮಲಾ ಸೀತಾರಾಮನ್ ಹೇಳಿಕೆ

140ಕಿ.ಮೀ ರೇಂಜ್ 
ಪ್ಯೂರ್ EV ETRYST 350 ಎಲೆಕ್ಟ್ರಿಕ್ ಮೋಟಾರ್‌ಸೈಕಲ್ 3.5kWh ಬ್ಯಾಟರಿಯಿಂದ ಹೊಂದಿದೆ. ಒಮ್ಮೆ ಸಂಪೂರ್ಣವಾಗಿ ಚಾರ್ಜ್ ಮಾಡಿದರೆ, ಈ ಬ್ಯಾಟರಿ 140 ಕಿ.ಮೀ. ವರೆಗಿನ ಗರಿಷ್ಠ ಶ್ರೇಣಿಯನ್ನು ನೀಡುತ್ತದೆ. ಬೈಕ್‌ನ ಗರಿಷ್ಠ ವೇಗ ಗಂಟೆಗೆ 85 ಕಿ.ಮೀ. ಆಗಿದೆ. ಈ ಬೈಕಿನ ಲೋಡ್ ಸಾಮರ್ಥ್ಯ 150 ಕೆ.ಜಿ.ಗಳಷ್ಟಿದೆ ಕಂಪನಿಯ ಬೈಕ್ ನಲ್ಲಿ ನೀಡಿರುವ ಇನ್ ಹೌಸ್ ಬ್ಯಾಟರಿ ಪ್ಯಾಕ್ ನಲ್ಲಿ 5 ವರ್ಷ / 50 ಸಾವಿರ ಕಿ.ಮೀ. ರೂ.ವರೆಗೆ ವಾರಂಟಿ ನೀಡುತ್ತಿದೆ. ETRYST 350 ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ಕಾರ್ಯಕ್ಷಮತೆಯನ್ನು 150cc ಮೋಟಾರ್‌ಸೈಕಲ್‌ಗೆ ಹೋಲಿಸಬಹುದು ಎಂದು ಕಂಪನಿ ಹೇಳಿಕೊಂಡಿದೆ.

ಇದನ್ನೂ ಓದಿ-Post Office Scheme: ಕೇವಲ 299 ಪಾವತಿಸಿ 10 ಲಕ್ಷ ರೂ.ಗಳ ಲಾಭ ಪಡೆಯಿರಿ

ಈ ಎಲೆಕ್ಟ್ರಿಕ್ ಮೋಟಾರ್‌ಸೈಕಲ್‌ನ ಬೆಲೆಯನ್ನು ರೂ 154,999 (ಎಕ್ಸ್ ಶೋ ರೂಂ) ನಲ್ಲಿ ನಿಗದಿಪಡಿಸಲಾಗಿದೆ. ಆರಂಭದಲ್ಲಿ ಇದು ಮೆಟ್ರೋ ನಗರಗಳು ಮತ್ತು ಶ್ರೇಣಿ-1 ನಗರಗಳಲ್ಲಿ ಲಭ್ಯವಾಗುವಂತೆ ಮಾಡಲಾಗುವುದು ಎಂದು ಕಂಪನಿ ಹೇಳಿದೆ. ಇದನ್ನು ಕಂಪನಿಯ 100 ಡೀಲರ್‌ಶಿಪ್‌ಗಳ ಮೂಲಕ ಮಾರಾಟ ಮಾಡಲಾಗುವುದು. ಇದು ಮೂರು ಡ್ರೈವ್ ಮೋಡ್‌ಗಳಾಗಿರುವ - ಡ್ರೈವ್, ಕ್ರಾಸ್‌ಓವರ್ ಮತ್ತು ಥ್ರಿಲ್ ಹೊಂದಿದೆ. ಡ್ರೈವ್ ಮೋಡ್‌ನಲ್ಲಿ ಇದರ ರೇಂಜ್ 60KM, ಕ್ರಾಸ್‌ಒವರ್‌ನಲ್ಲಿ 75KM ಮತ್ತು ಥ್ರಿಲ್‌ನಲ್ಲಿ 85KM ತಲುಪುತ್ತದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News