ನವದೆಹಲಿ : ಆರ್ಬಿಐ ಮಹತ್ವದ ಸುತ್ತೋಲೆಯನ್ನು ಹೊರಡಿಸಿದೆ. ಆರ್ಬಿಐ ನ (RBI) ಈ ನಿರ್ಧಾರ ಸ್ವ ಸಹಾಯ ಗುಂಪುಗಳಿಗೆ ಬಹಳ ಪ್ರಯೋಜನಕಾರಿಯಾಗಲಿದೆ. ಈ ಸುತ್ತೋಲೆಯ ಪ್ರಕಾರ ಸ್ವ-ಸಹಾಯ ಗುಂಪುಗಳಿಗೆ (Self helpgroup) 10 ಲಕ್ಷ ರೂ.ವರೆಗಿನ ಸಾಲಗಳಿಗೆ ಯಾವುದೇ ಗ್ಯಾರಂಟಿಯನ್ನು ಸಲ್ಲಿಸುವ ಅಗತ್ಯವಿರುವುದಿಲ್ಲ. ಅಲ್ಲದೆ, ಯಾವುದೇ ಮಾರ್ಜಿನ್ ಅನ್ನು ಕೂಡಾ ವಿಧಿಸಲಾಗುವುದಿಲ್ಲ ಎಂದು ಹೇಳಲಾಗಿದೆ. ಸ್ವಸಹಾಯ ಸಂಘಗಳಿಗೆ ಸಾಲ (SHG Loan) ಮಂಜೂರು ಮಾಡುವಾಗ ಯಾವುದೇ ರೀತಿಯ ಠೇವಣಿ ಇಡುವ ಅವಶ್ಯಕತೆಯೂ ಇಲ್ಲ. 10 ಲಕ್ಷದಿಂದ 20 ಲಕ್ಷದವರೆಗೆ, ಸಾಲಗಳಿಗೆ ಯಾವುದೇ ಗ್ಯಾರಂಟಿಯನ್ನು ನೀಡುವ ಅಗತ್ಯವಿರುವುದಿಲ್ಲ.
ಸ್ವ ಸಹಾಯ ಗುಂಪುಗಳು (Self help group) ಈ ಸಂಪೂರ್ಣ ಸಾಲವನ್ನು ಕ್ರೆಡಿಟ್ ಗ್ಯಾರಂಟಿ ಫಂಡ್ ಫಾರ್ ಮೈಕ್ರೋ ಯೂನಿಟ್ಸ್ (CGFMU) ಅಡಿಯಲ್ಲಿ ಪಡೆಯಲು ಸಾಧ್ಯವಾಗುತ್ತದೆ. ಬಾಕಿ ಇರುವ ಸಾಲ ಯಾವುದು, ಅಥವಾ ಸಾಲದ ಮೊತ್ತ (loan amount) 10 ಲಕ್ಷಕ್ಕಿಂತ ಕಡಿಮೆಯಿದೆಯೇ ಎನ್ನುವ ಅಂಶಗಳು ಯಾವುದೇ ಪರಿಣಾಮ ಬೀರುವುದಿಲ್ಲ. ಮತ್ತೊಂದೆಡೆ, ಭಾರತೀಯ ರಿಸರ್ವ್ ಬ್ಯಾಂಕ್ (Reserve bank of India) ವಿದೇಶಿ ಹೂಡಿಕೆಯ ನಿಯಂತ್ರಕ ಚೌಕಟ್ಟನ್ನು ಮತ್ತಷ್ಟು ಉದಾರಗೊಳಿಸಲು ಕರಡು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿತ್ತು.
ಇದನ್ನೂ ಓದಿ : Bank Holidays : ಬ್ಯಾಂಕ್ ಗ್ರಾಹಕರೆ ಗಮನಿಸಿ : ಆದಷ್ಟು ಬೇಗ ಕೆಲಸ ಮುಗಿಸಿಕೊಳ್ಳಿ, 4 ದಿನ ಬ್ಯಾಂಕ್ ರಜೆ!
ನಿಯಂತ್ರಕ ಚೌಕಟ್ಟನ್ನು ಮತ್ತಷ್ಟು ಉದಾರಗೊಳಿಸಲು ಮತ್ತು ವ್ಯಾಪಾರದ ಮಾರ್ಗಗಳನ್ನು ಮತ್ತಷ್ಟು ಸುಲಭಗೊಳಿಸಲು ಕ್ರಮಗಳನ್ನು ಕೈಗೊಳ್ಳಲಾಗಿದೆ. ವಿದೇಶದಲ್ಲಿ ಹೂಡಿಕೆ ಕಾರ್ಯಾಚರಣೆಗಳನ್ನು ನಿಯಂತ್ರಿಸಲು ಅಸ್ತಿತ್ವದಲ್ಲಿರುವ ನಿಬಂಧನೆಗಳನ್ನು ಸಮನ್ವಯಗೊಳಿಸಲು ನಿರ್ಧರಿಸಲಾಗಿದೆ ಎಂದು ಕೇಂದ್ರ ಬ್ಯಾಂಕ್ (Bank) ಹೇಳಿದೆ.
ಇದನ್ನೂ ಓದಿ : Train Ticket Booking: ಈಗ ಟ್ರೈನ್ ಟಿಕೆಟ್ ಬುಕಿಂಗ್ ವೇಳೆ ಈ ಮಾಹಿತಿ ನೀಡುವುದು ಕಡ್ಡಾಯ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ