300 ರೂ ಜೊತೆ 15 ನೇ ವಯಸ್ಸಿಗೆ ಮನೆ ಬಿಟ್ಟು ಬಂದ ಈಕೆ ಇಂದು 104 ಕೋಟಿ ಕಂಪನಿಯ ಒಡತಿ !

Success story: ನಿರ್ಭೀತ ನಿರ್ಣಯ ಮತ್ತು ಅಚಲವಾದ ಧೈರ್ಯದಿಂದ ಯಾವ ಸಾಧನೆ ಬೇಕಿದ್ದರೂ ಮಾಡಬಹುದು ಎಂಬುದಕ್ಕೆ ಈ ವ್ಯಕ್ತಿಯೇ ಬೆಸ್ಟ್‌ ಉದಾಹರಣೆ.

Written by - Chetana Devarmani | Last Updated : Jul 31, 2024, 04:24 PM IST
    • ಪ್ರತಿಕೂಲತೆಯನ್ನು ವಿಜಯವಾಗಿ ಪರಿವರ್ತಿಸಿದ ಸಾಧಕಿ
    • ರೂಬನ್ಸ್ ಆಕ್ಸೆಸರೀಸ್‌ನ ನಿರ್ದೇಶಕಿ ಚಿನು ಕಲಾ
    • 15 ವರ್ಷಕ್ಕೆ ಮನೆಬಿಟ್ಟ ಈಕೆ 104 ಕೋಟಿ ಕಂಪನಿಯ ಒಡತಿ
300 ರೂ ಜೊತೆ 15 ನೇ ವಯಸ್ಸಿಗೆ ಮನೆ ಬಿಟ್ಟು ಬಂದ ಈಕೆ ಇಂದು 104 ಕೋಟಿ ಕಂಪನಿಯ ಒಡತಿ !  title=

Chinu Kala Success story: ನಿರ್ಭೀತ ನಿರ್ಣಯ ಮತ್ತು ಅಚಲವಾದ ಧೈರ್ಯದಿಂದ ಯಾವ ಸಾಧನೆ ಬೇಕಿದ್ದರೂ ಮಾಡಬಹುದು ಎಂಬುದಕ್ಕೆ ಈ ವ್ಯಕ್ತಿಯೇ ಬೆಸ್ಟ್‌ ಉದಾಹರಣೆ. ಜೀವನದ ಆರಂಭದಲ್ಲಿ ಅಸಾಧಾರಣ ಸವಾಲುಗಳನ್ನು ಎದುರಿಸುತ್ತಿದ್ದರೂ ನಿರ್ಭಯವಾಗಿ ಪ್ರತಿಯೊಂದು ಅವಕಾಶವನ್ನು ಬಳಸಿಕೊಂಡರು. ಪ್ರತಿಕೂಲತೆಯನ್ನು ವಿಜಯವಾಗಿ ಪರಿವರ್ತಿಸಿದ ಸಾಧಕಿಯ ಕತೆಯಿದು.

ಇಲ್ಲಿ ನಾವು ರೂಬನ್ಸ್ ಆಕ್ಸೆಸರೀಸ್‌ನ ನಿರ್ದೇಶಕಿ ಚಿನು ಕಲಾ ಬಗ್ಗೆ ಮಾತನಾಡುತ್ತೇವೆ. ಕೇವಲ 300 ರೂಪಾಯಿ ಮತ್ತು ಬಟ್ಟೆಯ ಚೀಲದೊಂದಿಗೆ ಚಿನು ತನ್ನ 15 ನೇ ವಯಸ್ಸಿನಲ್ಲಿ ಕೌಟುಂಬಿಕ ಸಂಕಷ್ಟದ ಕಾರಣ ತನ್ನ ಮನೆಯನ್ನು ತೊರೆದರು. ಮುಂಬೈ ರೈಲು ನಿಲ್ದಾಣದಲ್ಲಿ ಎರಡು ರಾತ್ರಿ ಕಳೆದರು. ಪರಿಶ್ರಮದಿಂದ ದಿನಕ್ಕೆ ಕೇವಲ 20 ರೂ ಗಳಿಸುವ ಕೆಲಸ ಸಿಕ್ಕಿತು.

ಇದನ್ನೂ ಓದಿ: EV Scooters: ಇವೇ ನೋಡಿ 2024ರ ಟಾಪ್‌ 5 ಇಲೆಕ್ಟ್ರಿಕ್ ಸ್ಕೂಟರ್‌ಗಳು

ಚಿನು ಕಲಾ ಪರಿಚಾರಿಕೆಯಾಗಿ ಕೆಲಸ ಮಾಡುವುದರಿಂದ ಹಿಡಿದು ರಿಸೆಪ್ಷನಿಸ್ಟ್‌ ಆಗಿಯೂ ಸೇವೆ ಸಲ್ಲಿಸಿದ್ದಾರೆ. ಕೋಸ್ಟರ್ ಸೆಟ್‌ಗಳು ಮತ್ತು ಕಟ್ಲರಿಗಳನ್ನು ಮನೆ-ಮನೆಗೆ ಹೋಗಿ ಮಾರುತ್ತಿದ್ದರು. ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದರು. 

2004 ರಲ್ಲಿ ವಿವಾಹವಾಯಿತು:

ಮುಂಬೈನ ಟಾಟಾ ಕಮ್ಯುನಿಕೇಷನ್ಸ್‌ನಲ್ಲಿ ಟೆಲಿಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ಆಗಿದ್ದಾಗ ಚಿನು ಅವರ ಜೀವನವು ಮಹತ್ವದ ತಿರುವು ಪಡೆಯಿತು. ಅಲ್ಲಿ ಅವರು ಎಂಬಿಎ ಪದವಿ ಪಡೆದ ತಮ್ಮ ಅಮಿತ್ ಕಲಾ ಜೊತೆ ಸ್ನೇಹವಾಯಿತು. 2004 ರಲ್ಲಿ ಇಬ್ಬರೂ ಮದುವೆಯಾದರು. ಅಮಿತ್ ಅವರ ಪರಿಣತಿ ಮತ್ತು ಬೆಂಬಲದೊಂದಿಗೆ ವಾಣಿಜ್ಯೋದ್ಯಮ ಕೌಶಲ್ಯಗಳನ್ನು ಚಿನು ಅಭಿವೃದ್ಧಿಪಡಿಸಿದರು. 

ಮಿಸೆಸ್ ಇಂಡಿಯಾ ಪೇಜೆಂಟ್‌ನಲ್ಲಿ ಟಾಪ್ 10

ಮದುವೆಯಾದ ನಂತರ, ಚಿನು ಬೆಂಗಳೂರಿಗೆ ಶಿಫ್ಟ್‌ ಆದರು. ಮಾಡೆಲಿಂಗ್ ಉತ್ಸಾಹ ಹೊಂದಿದ್ದ ಚಿನು 2008 ರ ಮಿಸೆಸ್ ಇಂಡಿಯಾ ಪೇಜೆಂಟ್‌ನಲ್ಲಿ ಗಮನ ಸೆಳೆದರು. ಅಲ್ಲಿ ಟಾಪ್ 10 ರಲ್ಲಿ ಸ್ಥಾನವನ್ನು ಗಳಿಸಿದರು.  

ಚಿನು ಭಾರತೀಯ ಆಭರಣ ಮಾರುಕಟ್ಟೆಯಲ್ಲಿ ಮತ್ತು ಫ್ಯಾಷನ್ ಉದ್ಯಮದಲ್ಲಿ ಗಮನಾರ್ಹ ಸಾಧನೆ ಮಾಡಿದ್ದಾರೆ. 2014 ರಲ್ಲಿ ಫ್ಯಾಷನ್ ಕ್ಷೇತ್ರಕ್ಕೆ ಕಾಲಿಟ್ಟರು. ಚಿನು ತನ್ನ ವೈಯಕ್ತಿಕ ಉಳಿತಾಯದ 3 ಲಕ್ಷ ರೂ. ಅನ್ನು ಬಳಸಿಕೊಂಡು ತನ್ನದೇ ಆದ ಕಂಪನಿಯನ್ನು ಪ್ರಾರಂಭಿಸಿದರು. ಬೆಂಗಳೂರಿನ ಫೀನಿಕ್ಸ್ ಮಾಲ್‌ನಲ್ಲಿ 36-ಚದರ-ಅಡಿ ಅಂಗಡಿಯೊಂದಿಗೆ ಪ್ರಾರಂಭಿಸಿದರು. ಒಂದು ವರ್ಷದೊಳಗೆ ಬ್ರ್ಯಾಂಡ್ ಭಾರತದಾದ್ಯಂತ ಅನೇಕ ನಗರಗಳಿಗೆ ವಿಸ್ತರಿಸಿತು.

2018 ರ ಹೊತ್ತಿಗೆ ರೂಬನ್ಸ್ ಆಕ್ಸೆಸರೀಸ್ ಬೆಂಗಳೂರು, ಹೈದರಾಬಾದ್ ಮತ್ತು ಕೊಚ್ಚಿಯಲ್ಲಿರುವ ಐದು ಔಟ್‌ಲೆಟ್‌ಗಳಿಗೆ ವಿಸ್ತರಿಸಿತು. COVID-19 ಸಾಂಕ್ರಾಮಿಕ ರೋಗವು ಒಡ್ಡಿದ ಸವಾಲುಗಳನ್ನು ಎದುರಿಸಿದಾಗ ಚಿನು ಕಲಾ ತನ್ನ ವ್ಯವಹಾರವನ್ನು ಆನ್‌ಲೈನ್‌ನಲ್ಲಿ ಪರಿವರ್ತಿಸಿದರು. ಇಂದು, ರೂಬನ್ಸ್ ಆಕ್ಸೆಸರೀಸ್ 104 ಕೋಟಿ ರೂಪಾಯಿಗಳ ಆದಾಯವನ್ನು ಹೊಂದುವ ಮೂಲಕ ಪ್ರವರ್ಧಮಾನಕ್ಕೆ ಬರುತ್ತಿರುವ ಫ್ಯಾಶನ್ ಆಭರಣ ಬ್ರ್ಯಾಂಡ್ ಆಗಿ ನಿಂತಿದೆ. 

ಇದನ್ನೂ ಓದಿ: ಸನ್ಸೇರಾ ಕಂಪನಿಯಿಂದ ₹2,100 ಕೋಟಿ ಹೂಡಿಕೆ, ಒಡಂಬಡಿಕೆಗೆ ಸಹಿ: ಸುಮಾರು 3,500 ಉದ್ಯೋಗ ಸೃಷ್ಟಿ ನಿರೀಕ್ಷೆ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News