SBI New Feature : ದೇಶದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಎಸ್‌ಬಿಐ, ತನ್ನ 44 ಕೋಟಿ ಗ್ರಾಹಕರಿಗೆ ಅದ್ಭುತ ಉಡುಗೊರೆ ನೀಡಿದೆ. ಬ್ಯಾಂಕ್ ವೈಯಕ್ತಿಕ ಸಾಲಗಳನ್ನು ನೀಡಲು ಹೊಸ ಸೇವೆಯನ್ನು ಪ್ರಾರಂಭಿಸಿದೆ. ಇದರ ಅಡಿಯಲ್ಲಿ, ಈಗ ಗ್ರಾಹಕರು ಸುಲಭವಾಗಿ ಮನೆಯಲ್ಲಿಯೇ ಕುಳಿತು ಸಾಲ ಪಡೆಯುವುದು ಸಾಧ್ಯವಾಗುತ್ತದೆ. 'ರಿಯಲ್ ಟೈಮ್ ಎಕ್ಸ್‌ಪ್ರೆಸ್ ಕ್ರೆಡಿಟ್' ಹೆಸರಿನ ಈ ಸೌಲಭ್ಯದೊಂದಿಗೆ ಗ್ರಾಹಕರು 35 ಲಕ್ಷ ರೂ.ವರೆಗೆ ಸಾಲ ಪಡೆಯಬಹುದು. SBI ತನ್ನ YONO ಆಪ್ ಮೂಲಕ ಈ ಸೇವೆಯನ್ನು ಆರಂಭಿಸಿದೆ.
ಎಸ್‌ಬಿಐನಿಂದ ಉತ್ತಮ ಕೊಡುಗೆ :
ಎಸ್‌ಬಿಐ 'ರಿಯಲ್ ಟೈಮ್ ಎಕ್ಸ್‌ಪ್ರೆಸ್ ಕ್ರೆಡಿಟ್'ನ ಈ ವಿಶೇಷ ಸೌಲಭ್ಯದ ಲಾಭವನ್ನು ಎಲ್ಲಾ ಗ್ರಾಹಕರು ಪಡೆಯಲು ಸಾಧ್ಯವಾಗುವುದಿಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಉದ್ಯೋಗಿಗಳು ಮತ್ತು ರಕ್ಷಣಾ ಸೇವೆಗಳಲ್ಲಿ ಕೆಲಸ ಮಾಡುವ ಗ್ರಾಹಕರೂ ಈ ಯೋಜನೆಯ ಲಾಭ ಪಡೆಯಬಹುದು. ನೀವು ಸರ್ಕಾರಿ ಉದ್ಯೋಗಿಯಾಗಿದ್ದರೆ, ಸುಲಭವಾಗಿ ಈ ಸಾಲವನ್ನು ಪಡೆಯುವುದು ಸಾಧ್ಯವಾಗುತ್ತದೆ. ಈ ವಿಶೇಷ ಸೌಲಭ್ಯವು YONO ಅಪ್ಲಿಕೇಶನ್‌ನಲ್ಲಿ ಲಭ್ಯವಿರುತ್ತದೆ. ಇದರ ಸಹಾಯದಿಂದ ಕ್ರೆಡಿಟ್ ಚೆಕ್, ಅರ್ಹತೆ ಮತ್ತು ಇತರ ದಾಖಲೆಗಳ ಪರಿಶೀಲನೆಯನ್ನು ಮನೆಯಲ್ಲಿಯೇ ಮಾಡಬಹುದು.
ಇದನ್ನೂ ಓದಿ : Gold Price Today : ಚಿನ್ನ ಬೆಳ್ಳಿ ಬೆಲೆ ಸ್ಥಿರ .! ನಿಮ್ಮ ನಗರದಲ್ಲಿ ಎಷ್ಟಿದೆ ಬಂಗಾರದ ಬೆಲೆ ತಿಳಿಯಿರಿ
35 ಲಕ್ಷದವರೆಗೆ ಲಾಭ :
ಎಸ್‌ಬಿಐನ ಈ ಸಾಲ ಸೌಲಭ್ಯದ ಅಡಿಯಲ್ಲಿ, 35 ಲಕ್ಷದವರೆಗೆ ಸಾಲವನ್ನು ಪಡೆಯಲು ಸಾಧ್ಯವಾಗುತ್ತದೆ. ಇದರ ಅಡಿಯಲ್ಲಿ, ಸಂಪೂರ್ಣ ಪ್ರಕ್ರಿಯೆಯು ಆನ್‌ಲೈನ್ ನಲ್ಲಿಯೇ ನಡೆಯುತ್ತದೆ. ಕ್ರೆಡಿಟ್ ಚೆಕ್, ಸಾಲಕ್ಕೆ ಅರ್ಹತೆ, ಸಾಲ ಮಂಜೂರಾತಿ ಮತ್ತು ದಾಖಲೆ ಸಲ್ಲಿಕೆ ಎಲ್ಲಾ ಕೆಲಸಗಳನ್ನು ಆನ್‌ಲೈನ್‌ನಲ್ಲಿಯೇ ಪೂರೈಸಲಾಗುತ್ತದೆ.
ಎಸ್‌ಬಿಐ ನೀಡಿದೆ ಮಾಹಿತಿ :
'ಯೋನೋದಲ್ಲಿ ತನ್ನ ವೇತನ ಆಧಾರದ ಮೇಲೆ ಗ್ರಾಹಕರಿಗೆ ರಿಯಲ್ ಟೈಮ್ ಎಕ್ಸ್‌ಪ್ರೆಸ್ ಕ್ರೆಡಿಟ್ ಸಾಲ ಸೌಲಭ್ಯವನ್ನು ಪರಿಚಯಿಸಿರುವುದಾಗಿ ಎಸ್‌ಬಿಐ ಅಧ್ಯಕ್ಷ ದಿನೇಶ್ ಖಾರಾ, ತಿಳಿಸಿದ್ದಾರೆ. ಎಕ್ಸ್‌ಪ್ರೆಸ್ ಕ್ರೆಡಿಟ್ ಲೋನ್ ಗ್ರಾಹಕರಿಗೆ ಯಾವುದೇ ತೊಂದರೆಯಿಲ್ಲದೆ ಡಿಜಿಟಲ್ ಮೋಡ್ ಮೂಲಕ ಸಾಲವನ್ನು ಪಡೆಯಲು ಸಹಾಯ ಮಾಡುತ್ತದೆ. ಬ್ಯಾಂಕಿಂಗ್ ಅನ್ನು ಸುಲಭಗೊಳಿಸಲು ಗ್ರಾಹಕರಿಗೆ ಸಂಪೂರ್ಣ ಡಿಜಿಟಲ್ ಬ್ಯಾಂಕಿಂಗ್ ಸೌಲಭ್ಯಗಳನ್ನು ಒದಗಿಸಲು ಎಸ್‌ಬಿಐ ಪ್ರಯತ್ನಿಸುತ್ತಿದೆ.
ಇದನ್ನೂ ಓದಿ : Retail Inflation : ಹಣದುಬ್ಬರ ದರದ ಬಗ್ಗೆ ಮೋದಿ ಸರ್ಕಾರಕ್ಕೆ ಬಿಗ್ ನ್ಯೂಸ್!
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.